ಕ್ಷುಲ್ಲಕ ಕಾರಣಕ್ಕೆ ಪತಿಯನ್ನು ಹತ್ಯೆಗೈದಿದ್ದ ಪತ್ನಿಗೆ ಜೀವಾವಧಿ ಶಿಕ್ಷೆ
ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಪತಿಯನ್ನೇ (Husband) ಹತ್ಯೆಗೈದಿದ್ದ ಪತ್ನಿಗೆ (Wife) ದಾವಣಗೆರೆಯ (Davanagere) 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಚನ್ನಗಿರಿ (Channagiri) ತಾಲೂಕಿನ ಚಿಕ್ಕಕೋಗಲೂರು ಗ್ರಾಮದ ರೇಖಾ (36) ಶಿಕ್ಷೆಗೆ ಗುರಿಯಾದ ಅಪರಾಧಿ. ಈಕೆ ಪತಿ ಶ

ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಪತಿಯನ್ನೇ (Husband) ಹತ್ಯೆಗೈದಿದ್ದ ಪತ್ನಿಗೆ (Wife) ದಾವಣಗೆರೆಯ (Davanagere) 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಚನ್ನಗಿರಿ (Channagiri) ತಾಲೂಕಿನ ಚಿಕ್ಕಕೋಗಲೂರು ಗ್ರಾಮದ ರೇಖಾ (36) ಶಿಕ್ಷೆಗೆ ಗುರಿಯಾದ ಅಪರಾಧಿ. ಈಕೆ ಪತಿ ಶಾಂತಕುಮಾರನನ್ನು 2023ರಲ್ಲಿ ಹತ್ಯೆಗೈದಿದ್ದಳು. ಆಗಾಗ ಇಬ್ಬರ ನಡುವೆ ಕೌಟುಂಬಿಕ ಕಲಹ ನಡೆಯುತಿತ್ತು. ಇದರಿಂದಾಗಿ 2023ರ ಮಾರ್ಚ್ 21ರ ರಾತ್ರಿ ಮಲಗಿದ್ದ ವೇಳೆ ಶಾಂತಕುಮಾರ್ ತಲೆಗೆ ಕೊಡಲಿಯಿಂದ ರೇಖಾ ಹಲ್ಲೆ ಮಾಡಿದ್ದಳು. ಇದರಿಂದ ತೀವ್ರ ರಕ್ತಸ್ರಾವವಾಗಿತ್ತು. ಶಾಂತ ಕುಮಾರ್ನನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ದೆ ಫಲಿಸದೆ ಆಗಸ್ಟ್ 25ರಂದು ಶಾಂತಕುಮಾರ್ ಸಾವನ್ನಪ್ಪಿದ್ದ. ಇದನ್ನೂ ಓದಿ: ʻಪ್ರಿಯತಮನನ್ನು ಗಲ್ಲಿಗೇರಿಸಿʼ ಡೆತ್ನೋಟ್ ಬರೆದಿಟ್ಟು ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ ಈ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ರೇಖಾ ವಿರುದ್ಧ ಕೊಲೆ ಯತ್ನ ದೂರು ದಾಖಲಾಗಿತ್ತು. ಪ್ರಕರಣ ಕುರಿತು ಸಂತೆಬೆನ್ನೂರು ಪೊಲೀಸ್ ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ತನಿಖೆ ಕೈಗೊಂಡಿದ್ದರು. ಸಾಕ್ಷಿದಾರರ ಹೇಳಿಕೆ ಹಾಗೂ ವೈದ್ಯಕೀಯ ದಾಖಲೆಗಳಿಂದ ಹಲ್ಲೆಯಿಂದ ಸಾವನ್ನಪ್ಪಿರುವುದು ದೃಢಪಟ್ಟ ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣಮೂರ್ತಿ ಆರ್. ಪಡಸಲಗಿ ಅವರು ಆರೋಪಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: ಶೋರೂಮ್ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು – ಬೈಕ್ ಸವಾರರಿಗೆ ಗಂಭೀರ ಗಾಯ