ಜಂಬೂ ಸವಾರಿ ವೀಕ್ಷಣೆಗೆ ದಾರಿಯುದ್ದಕ್ಕೂ ಜಾಗ ರಿಸರ್ವ್ ಮಾಡಿದ ಜನ!
ಮೈಸೂರು: ಜಂಬೂ ಸವಾರಿ (Jamboo Savari) ವೀಕ್ಷಣೆಗೆ ಮೂರು ದಿನ ಮೊದಲೇ ರಸ್ತೆ ಬದಿ ಜಾಗವನ್ನು ಜನ ಕಾಯ್ದಿರಿಸುತ್ತಿದ್ದಾರೆ. ಶಿಫ್ಟ್ ಲೆಕ್ಕದಲ್ಲಿ ರಸ್ತೆ ಬದಿ ಜನ ಜಾಗ ಹಿಡಿದುಕೊಂಡು ಕಾಯುತ್ತಿದ್ದಾರೆ. ಜಂಬೂ ಸವಾರಿ ಸಾಗಿ ಬರುವ ಮಾರ್ಗದುದ್ದಕ್ಕೂ ಚೀಲ, ಟಾರ್ಪಲ್ ಹಾಕಿ ಕುಳಿತಿದ್ದಾರೆ. ಪಾಲಿಕೆ ಸಿಬ್ಬಂದಿ ತೆರವು ಮಾಡಿದ್ರೂ ಮತ್ತೆ ಅದೇ ಜಾಗದಲ್ಲಿ ಸ್ಥಳೀಯರು ಹೊಸ ಚೀ

ಮೈಸೂರು: ಜಂಬೂ ಸವಾರಿ (Jamboo Savari) ವೀಕ್ಷಣೆಗೆ ಮೂರು ದಿನ ಮೊದಲೇ ರಸ್ತೆ ಬದಿ ಜಾಗವನ್ನು ಜನ ಕಾಯ್ದಿರಿಸುತ್ತಿದ್ದಾರೆ. ಶಿಫ್ಟ್ ಲೆಕ್ಕದಲ್ಲಿ ರಸ್ತೆ ಬದಿ ಜನ ಜಾಗ ಹಿಡಿದುಕೊಂಡು ಕಾಯುತ್ತಿದ್ದಾರೆ. ಜಂಬೂ ಸವಾರಿ ಸಾಗಿ ಬರುವ ಮಾರ್ಗದುದ್ದಕ್ಕೂ ಚೀಲ, ಟಾರ್ಪಲ್ ಹಾಕಿ ಕುಳಿತಿದ್ದಾರೆ. ಪಾಲಿಕೆ ಸಿಬ್ಬಂದಿ ತೆರವು ಮಾಡಿದ್ರೂ ಮತ್ತೆ ಅದೇ ಜಾಗದಲ್ಲಿ ಸ್ಥಳೀಯರು ಹೊಸ ಚೀಲ, ಟಾರ್ಪಲ್ ಹಾಕಿದ್ದಾರೆ. ರಾತ್ರಿ, ಮಧ್ಯಾಹ್ನ, ಬೆಳಗ್ಗೆ ಒಬ್ಬೊಬ್ಬರು ಇರ್ತೀವಿ! ಜಾಗ ರಿಸರ್ವ್ ಮಾಡಿರುವ ಬಗ್ಗೆ ಯುವತಿಯೊಬ್ಬಳು ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿ, ರಾತ್ರಿಯೊಬ್ಬರು ಹಾಗೂ ಹಗಲು ಒಬ್ಬರು ಈ ಜಾಗದಲ್ಲಿ ಇರ್ತೀವಿ. ಸಂಜೆ ಸೊಳ್ಳೆ ಇದ್ದಾಗ ಸ್ವಲ್ಪ ತೊಂದರೆಯಾಗುತ್ತದೆ. ಬೇರೆ ಯಾರದ್ರೂ ಕುಳಿತು ಕೊಂಡ್ರೆ ಏನು ಮಾಡ್ತೀರಿ ಎಂಬ ಪ್ರಶ್ನೆಗೆ ʻಜಗಳ ಮಾಡೋದಕ್ಕೆ ರೆಡಿ ಇದಿವಿʼ. ನಾವು ಸುತ್ತಾಡೋದು ಬಿಟ್ಟು ಕಷ್ಟಪಟ್ಟು ಜಾಗ ಹಿಡಿದಿದ್ದೇವೆ. ನಾವು 15-20 ಜನ ಇದಿವಿ. ಜಾಗ ಇದ್ರೆ ಹೊರಗಿನಿಂದ ಬಂದವರಿಗೂ ಜಾಗ ಕೊಡ್ತೀವಿ ಎಂದಿದ್ದಾಳೆ. ಅದೇ ಗುಂಪಿನ ಯುವಕನೊಬ್ಬ ಮಾತಾಡಿ, ನಮ್ಮದು ಇದೇ ಏರಿಯಾ, ಆದ್ರೂ ನಾವು ಇಲ್ಲೇ ಇರ್ತೀವಿ. ಜಂಬೂ ಸವಾರಿಯನ್ನು ನಾವು ನೋಡಲೇ ಬೇಕು. ಇದೇ ಊರಾದ್ರೂ ಜಂಬು ಸವಾರಿ ನೋಡೋಕೆ ಜಾಗ ಹಿಡಿಯುವ ಸಲುವಾಗಿ ಎಲ್ಲೂ ಸುತ್ತಾಡಲು ಹೋಗಿಲ್ಲ ಎಂದಿದ್ದಾನೆ.