ರಚಿತಾ ರಾಮ್ ಹೆಗಲ ಮೇಲೆ ಕೈ ಹಾಕಿ ಸೆಲ್ಫಿಗೆ ಯತ್ನ – ಅಭಿಮಾನಿ ಹುಚ್ಚಾಟ
ತುಮಕೂರು: ದಸರಾ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ (Rachita Ram) ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬರು (Tumakuru) ಅತಿರೇಕದ ವರ್ತನೆ ತೋರಿದ್ದಾನೆ. ರ್ಯಾಂಪ್ ವಾಕ್ ಮಾಡುತ್ತಿದ್ದ ರಚಿತಾ ರಾಮ್ ಅವರ ಬಳಿ ಬಂದ ವ್ಯಕ್ತಿ, ಅವರ ಹೆಗಲ ಮೇಲೆ ಕೈ ಹಾಕಿ ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ನಟಿಯನ್ನು ಎಳೆದಾಡಿದ್ದ

ತುಮಕೂರು: ದಸರಾ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ (Rachita Ram) ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬರು (Tumakuru) ಅತಿರೇಕದ ವರ್ತನೆ ತೋರಿದ್ದಾನೆ. ರ್ಯಾಂಪ್ ವಾಕ್ ಮಾಡುತ್ತಿದ್ದ ರಚಿತಾ ರಾಮ್ ಅವರ ಬಳಿ ಬಂದ ವ್ಯಕ್ತಿ, ಅವರ ಹೆಗಲ ಮೇಲೆ ಕೈ ಹಾಕಿ ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ನಟಿಯನ್ನು ಎಳೆದಾಡಿದ್ದು, ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಆತನನ್ನು ಹಿಡಿದಿದ್ದಾರೆ. ರ್ಯಾಂಪ್ ವಾಕ್ ವೇಳೆ ನಡೆದ ಘಟನೆ ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಿನ್ನೆ ರಾತ್ರಿ ದಸರಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಭಾಗವಹಿಸಿದ್ದರು. ಈ ವೇಳೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ ಅವರ ಜೊತೆ ರಚಿತಾ ರಾಮ್ ರ್ಯಾಂಪ್ ವಾಕ್ ಮಾಡುತ್ತಿದ್ದರು. ಇದನ್ನೂ ಓದಿ: ವಿಧಾನಸೌಧ ಸ್ಫೋಟಿಸಿದಂತೆ AI ವಿಡಿಯೋ ಹರಿಬಿಟ್ಟ ಕಿಡಿಗೇಡಿ ಅಭಿಮಾನಿಗಳ ನಡುವೆ ನಿರ್ಮಿಸಿದ್ದ ರ್ಯಾಂಪ್ ವಾಕ್ ಟ್ರ್ಯಾಕ್ನಲ್ಲಿ ನಟಿ ಹೆಜ್ಜೆ ಹಾಕುತ್ತಿದ್ದಾಗ, ಅಭಿಮಾನಿಯೊಬ್ಬ ಏಕಾಏಕಿ ಸ್ಟೇಜ್ ಮೇಲೆ ಬಂದಿದ್ದಾನೆ. ರಚಿತಾ ರಾಮ್ ಅವರ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ನಟಿಯನ್ನು ಎಳೆದಾಡಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಅಭಿಮಾನಿಯನ್ನು ಹಿಡಿದಿದ್ದಾರೆ. ಇದನ್ನೂ ಓದಿ: ಮಂಡ್ಯ | ಅ.23ರಂದು ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇ ಬಂದ್ – 5 ಸಾವಿರಕ್ಕೂ ಹೆಚ್ಚು ರೈತರಿಂದ ಪ್ರತಿಭಟನೆ!