ಕೋಲಾರದಲ್ಲಿ ಆಯುಧಪೂಜೆ, ವಿಜಯದಶಮಿ ಹಬ್ಬಕ್ಕೆ ಖರೀದಿ ಜೋರು
ಕೋಲಾರ: ಜಿಲ್ಲೆಯಲ್ಲಿ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬಕ್ಕೆ ಭರದ ಸಿದ್ಧತೆ ನಡೆದಿದ್ದು, ಸೋಮವಾರ ಮಾರುಕಟ್ಟೆಯಲ್ಲಿ ಖರೀದಿ ವಾಹಿವಾಟು ಜೋರಾಗಿತ್ತು.ಜನರಲ್ಲಿ ಹಬ್ಬದ ಆಚರಣೆಯ ಉತ್ಸಾಹ ಎಲ್ಲೇ ಮೀರಿದೆ. ತರಕಾರಿ, ಹಣ್ಣು, ದಿನಸಿಗಳ ಬೆಲೆ ಏರಿಕೆಯು ಆ ಉತ್ಸಾಹವನ್ನು ಕಡಿಮೆ ಮಾಡಿಲ್ಲ.ಪೂಜಾ ಸಾಮಗ್ರಿ, ತರಕಾರಿ, ಹೂವು, ಹಣ್ಣು, ಸಿಹಿತಿಂಡಿ, ಉಡುಪು ಹಾಗೂ ಅಲಂಕಾರಿಕ ವಸ್ತುಗ

ಕೋಲಾರ: ಜಿಲ್ಲೆಯಲ್ಲಿ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬಕ್ಕೆ ಭರದ ಸಿದ್ಧತೆ ನಡೆದಿದ್ದು, ಸೋಮವಾರ ಮಾರುಕಟ್ಟೆಯಲ್ಲಿ ಖರೀದಿ ವಾಹಿವಾಟು ಜೋರಾಗಿತ್ತು.ಜನರಲ್ಲಿ ಹಬ್ಬದ ಆಚರಣೆಯ ಉತ್ಸಾಹ ಎಲ್ಲೇ ಮೀರಿದೆ. ತರಕಾರಿ, ಹಣ್ಣು, ದಿನಸಿಗಳ ಬೆಲೆ ಏರಿಕೆಯು ಆ ಉತ್ಸಾಹವನ್ನು ಕಡಿಮೆ ಮಾಡಿಲ್ಲ.ಪೂಜಾ ಸಾಮಗ್ರಿ, ತರಕಾರಿ, ಹೂವು, ಹಣ್ಣು, ಸಿಹಿತಿಂಡಿ, ಉಡುಪು ಹಾಗೂ ಅಲಂಕಾರಿಕ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದು ಕಂಡುಬಂತು.ಮಂಗಳವಾರ ಆಯುಧಪೂಜೆ ನಡೆಯಲಿದೆ. ಈಗಾಗಲೇ ಸರ್ಕಾರಿ ಕಚೇರಿ ಹಾಗೂ ವಿವಿಧೆಡೆ ಸೋಮವಾರವೇ ಆಯುಧಪೂಜೆ ಆಚರಿಸಿದರು. ಬುಧವಾರ ವಿಜಯದಶಮಿ ನಡೆಯಲಿದೆ.ಈ ಹಿನ್ನೆಲೆಯಲ್ಲಿ ನಗರದ ಹಳೆ ಬಸ್ ನಿಲ್ದಾಣ ಮಾರುಕಟ್ಟೆ, ಸಂತೆ ಮೈದಾನ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸುತ್ತಮುತ್ತ, ದೊಡ್ಡಪೇಟೆ, ಟೇಕಲ್ ರಸ್ತೆ, ಡೂಂ ಲೈಟ್ ವೃತ್ತ ಸೇರಿದಂತೆ ವಿವಿಧೆಡೆಗೆ ಧಾವಿಸಿ ಜನರು ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.ಪ್ರತಿ ಮನೆಯಲ್ಲೂ ಬಳಸುವ ವಾಹನ, ಉಪಕರಣಗಳು, ಅಂಗಡಿ, ಕಚೇರಿಗಳಲ್ಲಿ ವಿಶೇಷ ಪೂಜೆ ನಡೆಯುವುದರಿಂದ ಹೂವಿನ ಬೆಲೆ ಈ ಸಂದರ್ಭದಲ್ಲಿ ಗಗನಮುಖಿಯಾಗುವುದು ಸಾಮಾನ್ಯ. ಈ ಬಾರಿ ನಿರಂತರ ಮಳೆಯಿಂದಾಗಿ ತೀರಾ ಬೆಲೆ ಏರಿಕೆ ಆಗಿಲ್ಲ.ಹಳೆ ಬಸ್ ನಿಲ್ದಾಣದಲ್ಲಿನ ಹೂವಿನ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂತು. ಕೆ.ಜಿ ಕನಕಾಂಬರ ₹ 1,500, ಮಲ್ಲಿಗೆ ₹ 1,000, ರೋಸ್ ₹250, ಸೇವಂತಿ ₹ 200, ಚೆಂಡು ಹೂವು ₹ 80, ಮಾವಿನ ಸೊಪ್ಪು ಕಟ್ಟು ₹ 10, ಅಲಂಕಾರ ಮಾಡುವ ತೋಮಾಲೆ ಹಾರಗಳು ₹1 ಸಾವಿರದಿಂದ 2,500 ವರೆಗೆ ಮಾರಾಟವಾಗುತ್ತಿವೆ.ಈ ನಡುವೆ ಆಯುಧಪೂಜೆಯ ಬಲಿ ಪೂಜೆಗೆ ಅತ್ಯಗತ್ಯವಾಗಿರುವ ಬೂದುಗುಂಬಳ ನಗರದ ಹಳೆ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ ಸಮೀಪ ರಾಶಿಗಟ್ಟಲೇ ಬಂದಿದೆ. ಬೂದುಗುಂಬಳದ ಬೆಲೆ ಹೆಚ್ಚಿದ್ದು, ಗ್ರಾಹಕರ ಜೇಬು ಕಚ್ಚುತ್ತಿದೆ. ಗಾತ್ರವಾರು ಬೂದುಗುಂಬಳ ₹ 100ರಿಂದ 300ವರೆಗೆ ಮಾರಾಟವಾಗುತ್ತಿದೆ. ಕೆ.ಜಿಗೆ ₹ 30 ಇದೆ.ನಗರದ ರಂಗಮಂದಿರದ ಮುಂಭಾಗ ರಾಶಿಗಟ್ಟಲೇ ಬಾಳೆ ಕಂಬಗಳು ಕಂಡು ಬಂದವು. ಇಲ್ಲಿಯೂ ವ್ಯಾಪಾರ ಜೋರಾಗಿಯೇ ನಡೆದಿದ್ದು, ಬಾಳೆ ಗಿಡ ಜತೆ ₹ 50 ರಿಂದ 100ವರೆಗೆ ತನ್ನ ಬೆಲೆ ಏರಿಸಿಕೊಂಡಿವೆ.ಜಿಲ್ಲಾಧಿಕಾರಿ ಕಚೇರಿ, ಸರ್ವೇ, ಭೂದಾಖಲೆಗಳ ಇಲಾಖೆ, ಡಿಡಿಪಿಐ ಕಚೇರಿ, ಗ್ರಂಥಾಲಯ ಸೇರಿದಂತೆ ವಿವಿಧ ಕಚೇರಿಗಳಲ್ಲಿ ವಾಹನಗಳು, ಉಪಕರಣಗಳನ್ನು ತೊಳೆದು ಹೂಗಳಿಂದ ಅಲಂಕರಿಸಿ ಪೂಜಿಸಿದ್ದು ಕಂಡು ಬಂತು.ಮಂಗಳವಾರ ವಾಹನಗಳಿಗೆ ಪೂಜೆ ಮಾಡಲು ನಾಗರಿಕರು ಸಿದ್ದತೆ ನಡೆಸಿದರು. ವಾಹನ ತೊಳೆಯುವ ಗ್ಯಾರೇಜ್ಗಳು ತುಂಬಿ ತುಳುಕುತ್ತಿದ್ದವು.ಗ್ರಾಮೀಣ ಭಾಗದಲ್ಲೂ ಎತ್ತಿನಗಾಡಿ, ಟ್ರಾಕ್ಟರ್, ಕೃಷಿ ಉಪಕರಣಗಳಿಗೆ ಪೂಜೆ ಮಾಡುವ ಸಂಪ್ರದಾಯವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಲಾಗಿದೆ.261020-18-1845211973