ಪ್ರಚೋದಿಸಲು ಯತ್ನ, ಸಂಯಮ ಕಾಪಾಡುವಂತೆ ಸಿಜೆಪಿ ಕಾರ್ಯಕರ್ತರಿಗೆ ದೀಪ್ಕೆ ಮನವಿ
ನವದೆಹಲಿ: ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ಬಂಧನದ ಬೆನ್ನಲ್ಲೇ ಪ್ರಚೋದನೆಗೆ ಒಳಗಾಗದಂತೆ ಹಾಗೂ ಶಾಂತಿ ಕಾಪಾಡುವಂತೆ ತಮ್ಮ ಕಾರ್ಯಕರ್ತರಿಗೆ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ದೀಪ್ಕೆ, ‘ನಮ್ಮ ಹೋರಾಟವು ಶಾಂತಿ, ಪ್ರೀತಿ ಮತ್

ನವದೆಹಲಿ: ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ಬಂಧನದ ಬೆನ್ನಲ್ಲೇ ಪ್ರಚೋದನೆಗೆ ಒಳಗಾಗದಂತೆ ಹಾಗೂ ಶಾಂತಿ ಕಾಪಾಡುವಂತೆ ತಮ್ಮ ಕಾರ್ಯಕರ್ತರಿಗೆ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ದೀಪ್ಕೆ, ‘ನಮ್ಮ ಹೋರಾಟವು ಶಾಂತಿ, ಪ್ರೀತಿ ಮತ್ತು ಕರುಣೆಯ ಹಾದಿಯಲ್ಲಿಯೇ ಮುಂದುವರಿಯಬೇಕು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.‘ಸಿಜೆಪಿಯ ಇಬ್ಬರು ಕಾರ್ಯಕರ್ತರ ಬಂಧನದಿಂದ ಬೆಂಬಲಿಗರಲ್ಲಿ ಆತಂಕ ಮೂಡಿರುವುದು ಸಹಜ. ಆದರೆ, ಈ ಅನ್ಯಾಯಕ್ಕೆ ದ್ವೇಷದಿಂದ ಪ್ರತಿಕ್ರಿಯಿಸಿ ನಮ್ಮ ಮೂಲ ತತ್ವಗಳನ್ನು ಬಿಟ್ಟುಕೊಡಬಾರದು’ ಎಂದು ಕರೆ ನೀಡಿದ್ದಾರೆ.‘ಸೌರವ್ ಹಾಗೂ ರಾಂಕಾಗೆ ಆಗಿರುವುದನ್ನು ಕಂಡು ಎಲ್ಲರಿಗೂ ಬೇಸರವಾಗಿದೆ ಎಂಬುದು ನನಗೆ ತಿಳಿದಿದೆ. ನನಗೂ ಅತ್ಯಂತ ನೋವಾಗಿದೆ. ಆದರೆ ಒಂದನ್ನು ನೆನಪಿಡಿ; ನಾವು ಯಾರನ್ನು ದ್ವೇಷಿಸುತ್ತೇವೆಯೋ, ಅವರಂತೆಯೇ ನಾವು ಬದಲಾಗಬಾರದು. ಅವರ ವಿರುದ್ಧ ನಡೆಯುತ್ತಿರುವುದು ಸಂಪೂರ್ಣ ಅನ್ಯಾಯ. ಆದರೆ ಶಾಂತಿ ಮತ್ತು ಪ್ರೀತಿಯ ಮಾರ್ಗದಿಂದ ನಮ್ಮನ್ನು ದಾರಿ ತಪ್ಪಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ನಮ್ಮನ್ನು ಪ್ರಚೋದಿಸಿ ಅವರಂತೆ ದ್ವೇಷದ ದಾರಿಗೆ ತಳ್ಳಲು ಯತ್ನಿಸುತ್ತಿದ್ದಾರೆ. ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ದೀಪ್ಕೆ ತಿಳಿಸಿದ್ದಾರೆ.Message to all cockroaches pic.twitter.com/9e5yI9Nst0— Abhijeet Dipke (@abhijeet_dipke) October 20, 2026 ಸೌರವ್ ದಾಸ್ ಅವರ ತಾಯಿಯೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ದೀಪ್ಕೆ, ಸೌರವ್ ಜೈಲಿನಲ್ಲಿದ್ದರೂ ಅವರ ತಾಯಿ ತಮಗೆ ಧೈರ್ಯ ತುಂಬಿದ್ದಾಗಿ ತಿಳಿಸಿದ್ದಾರೆ. ಜಂತರ್ ಮಂತರ್ಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪ ಎದುರಿಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆರಡು ದಿನ ವಿಸ್ತರಿಸಲಾಗಿದೆ. ಪ್ರತಿಭಟನಾ ಸ್ಥಳದ ಸ್ಥಾನಮಾನ ಕಿತ್ತು ಹಾಕಿದ ಕಾರಣಕ್ಕೆ ಜಂತರ್ ಮಂತರ್ಗೆ ನುಗ್ಗಿ ದಾಸ್, ರಾಂಕಾ ಮತ್ತಿತರರು ಅ. 13 ರಂದು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.ಸೌರವ್ ಮತ್ತು ರಾಂಕಾ ಅವರ ಕುಟುಂಬಗಳು ತೋರುತ್ತಿರುವ ಧೈರ್ಯವೇ ನಮಗೆ ಅತಿ ದೊಡ್ಡ ಬಲವಾಗಿದೆ ಎಂದು ಹೇಳಿರುವ ದೀಪ್ಕೆ, ನಮ್ಮ ಧ್ವನಿಯನ್ನು ಅಡಗಿಸಲು ಅಥವಾ ನಮ್ಮನ್ನು ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ್ದಾರೆ.Fact Check:ಸಿಜೆಪಿ ಮುಖಂಡ ದೀಪ್ಕೆ ಬಳಿ ನಾನಾ ಪಾಟೇಕರ್ ಕ್ಷಮೆಯಾಚಿಸಿದ್ದು ಸುಳ್ಳುಪ್ರತಿಭಟನಾ ಮೆರವಣಿಗೆಗೂ ಮುನ್ನ ವಶಕ್ಕೆ ಪಡೆದಿದ್ದ ದೀಪ್ಕೆ, ನೇಹಾ ಬಿಡುಗಡೆ