ಮೈಸೂರು ದಸರಾ | ಜಂಬೂ ಸವಾರಿಯಲ್ಲಿ ಈ ಬಾರಿ 53 ಆಕರ್ಷಕ ಸ್ತಬ್ಧಚಿತ್ರಗಳು
– ಮೊದಲ ಬಾರಿಗೆ ಹೊರರಾಜ್ಯಗಳ ಸ್ತಬ್ಧಚಿತ್ರಗಳು ಭಾಗಿ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯ ಮೆರವಣಿಗೆಯಲ್ಲಿ ಬರೋಬ್ಬರಿ 53 ಸ್ತಬ್ಧಚಿತ್ರಗಳು ನಾಡಿನ ವೈಭವವನ್ನು ಸಾರಲು ಸಜ್ಜಾಗುತ್ತಿವೆ. ಮೈಸೂರಿನ ಎಪಿಎಂಸಿ ಯಾರ್ಡ್ನಲ್ಲಿ ಸ್ತಬ್ಧಚಿತ್ರಗಳ ನಿರ್ಮ

– ಮೊದಲ ಬಾರಿಗೆ ಹೊರರಾಜ್ಯಗಳ ಸ್ತಬ್ಧಚಿತ್ರಗಳು ಭಾಗಿ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯ ಮೆರವಣಿಗೆಯಲ್ಲಿ ಬರೋಬ್ಬರಿ 53 ಸ್ತಬ್ಧಚಿತ್ರಗಳು ನಾಡಿನ ವೈಭವವನ್ನು ಸಾರಲು ಸಜ್ಜಾಗುತ್ತಿವೆ. ಮೈಸೂರಿನ ಎಪಿಎಂಸಿ ಯಾರ್ಡ್ನಲ್ಲಿ ಸ್ತಬ್ಧಚಿತ್ರಗಳ ನಿರ್ಮಾಣ ಕಾರ್ಯ ಅಂತಿಮ ಘಟಕ್ಕೆ ತಲುಪಿದ್ದು, ಕಲಾವಿದರು ಹಾಗೂ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದನ್ನೂ ಓದಿ: ದಸರಾ, ಆಯುಧ ಪೂಜೆ ಸಂಭ್ರಮ: ಕೆ.ಆರ್ ಮಾರ್ಕೆಟ್ನಲ್ಲಿ ಖರೀದಿ ಭರಾಟೆ ಜೋರು ಈ ಬಾರಿಯ ವಿಶೇಷತೆಗಳೇನು? ಮೈಸೂರು ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹೊರರಾಜ್ಯಗಳ ಸ್ತಬ್ಧಚಿತ್ರಗಳು ಜಂಬೂ ಸವಾರಿಯ ಮೆರಗು ಹೆಚ್ಚಿಸಲಿವೆ. ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಭಾಗಿಯಾಗಲಿವೆ. ರಾಜ್ಯದ 15 ಜಿಲ್ಲೆಗಳ ಪ್ರತಿನಿಧಿತ್ವ: ಕರ್ನಾಟಕದ ವಿವಿಧ ಭಾಗಗಳ ಐತಿಹಾಸಿಕ ಸ್ಮಾರಕಗಳು, ಶ್ರೀಮಂತ ಸಂಸ್ಕೃತಿ, ಜನಜೀವನ ಶೈಲಿ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಪರಿಚಯಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ.ಇದನ್ನೂ ಓದಿ: ನವರಾತ್ರಿ ಸ್ಪೆಷಲ್ – ಹಬ್ಬದ ಸಂಭ್ರಮಕ್ಕೆ ಮನೆಯಲ್ಲೇ ಮಖಾನಾ ಖೀರ್ ತಯಾರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು: ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಸಂದೇಶ ಸಾರುವ ಟ್ಯಾಬ್ಲೊಗಳೂ ಸಹ ಸಿದ್ಧಗೊಳ್ಳುತ್ತಿವೆ. ಕಳೆದ 10 ದಿನಗಳಿಂದ ಒಂದೂವರೆ ಸಾವಿರಕ್ಕೂ ಹೆಚ್ಚು ಕಲಾವಿದರು ಮತ್ತು ಕಾರ್ಮಿಕರು ಹಗಲು-ರಾತ್ರಿ ಎನ್ನದೆ ಅತ್ಯಂತ ಆಕರ್ಷಕವಾಗಿ ಸ್ತಬ್ಧಚಿತ್ರಗಳಿಗೆ ರೂಪ ನೀಡುತ್ತಿದ್ದಾರೆ. ಅಂತಿಮ ಹಂತದ ಕೆಲಸಗಳು ಭರದಿಂದ ಸಾಗಿದ್ದು, ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿ ಕಲಾಪ್ರಿಯರಿಗೆ ಕಣ್ಣಿಗೆ ಹಬ್ಬವನ್ನು ಉಣಬಡಿಸಲು ಸಿದ್ಧವಾಗಿದೆ.ಇದನ್ನೂ ಓದಿ: ದುಷ್ಟತನದ ವಿರುದ್ಧ ದೈವತ್ವದ ವಿಜಯ ಸಾರುವ ಹಬ್ಬ – ವಿಜಯದಶಮಿಯ ಪೌರಾಣಿಕ ಮಹತ್ವವೇನು?