ವಿಜಯದಶಮಿ: ರಾಷ್ಟ್ರಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರಿಂದ ಶುಭಾಶಯ
ನವದೆಹಲಿ: ದೇಶದಾದ್ಯಂತ ವಿಜಯದಶಮಿ ಹಬ್ಬದ ಸಡಗರ ಮನೆ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರು ದೇಶದ ಜನತೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.ವಿಜಯದಶಮಿಯ ಶುಭ ಸಂದರ್ಭದಲ್ಲಿ ದೇಶ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತ

ನವದೆಹಲಿ: ದೇಶದಾದ್ಯಂತ ವಿಜಯದಶಮಿ ಹಬ್ಬದ ಸಡಗರ ಮನೆ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರು ದೇಶದ ಜನತೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.ವಿಜಯದಶಮಿಯ ಶುಭ ಸಂದರ್ಭದಲ್ಲಿ ದೇಶ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ದ್ರೌಪದಿ ಮುರ್ಮು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.ಈ ಹಬ್ಬವನ್ನು ರಾವಣನ ವಿರುದ್ಧ ಭಗವಾನ್ ಶ್ರೀರಾಮನ ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ. ಶ್ರೀರಾಮನನ್ನು ಧರ್ಮ ಮತ್ತು ನೈತಿಕ ನಡವಳಿಕೆಯ ಸಾಕಾರಮೂರ್ತಿಯಾಗಿ ಗೌರವಿಸಲಾಗುತ್ತದೆ. ವಿಜಯದಶಮಿಯು ಅಧರ್ಮ ಮತ್ತು ಅನ್ಯಾಯದ ವಿರುದ್ಧ ಧರ್ಮ ಹಾಗೂ ನ್ಯಾಯದ ವಿಜಯದ ಹಬ್ಬವಾಗಿದೆ ಎಂದು ಅವರು ಹೇಳಿದ್ದಾರೆ.ಭಾರತೀಯ ಸಂಸ್ಕೃತಿಯು ನೈತಿಕತೆ ಮತ್ತು ಕರ್ತವ್ಯದ ಆದರ್ಶಗಳಲ್ಲಿ ಬೇರೂರಿದೆ. ಈ ಮೌಲ್ಯಗಳನ್ನು ಎತ್ತಿಹಿಡಿಯುವುದರ ಜೊತೆಗೆ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಮುರ್ಮು ಕರೆ ನೀಡಿದ್ದಾರೆ.On the auspicious occasion of Vijayadashami, I extend my heartfelt greetings to all Indians living in the country and abroad. pic.twitter.com/9hBzqbkxnm— President of India (@rashtrapatibhvn) October 20, 2026 ‘ನಾಡಿನ ಸಮಸ್ತ ನಾಗರಿಕರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ಸಂತೋಷ ಮತ್ತು ಅಚಲ ನಂಬಿಕೆಯಿಂದ ತುಂಬಿರುವ ಈ ವಿಜಯದ ಮಹೋತ್ಸವವು, ಪ್ರತಿಯೊಬ್ಬರ ಶುಭ ಸಂಕಲ್ಪಗಳಿಗೆ ನವ ಚೈತನ್ಯ ಮತ್ತು ನವ ಶಕ್ತಿಯನ್ನು ತುಂಬಲಿ. ಪ್ರತಿಯೊಬ್ಬರ ಜೀವನವೂ ಸುಖ, ಶಾಂತಿ, ಸಮೃದ್ಧಿ ಹಾಗೂ ಯಶಸ್ಸಿನಿಂದ ಕಂಗೊಳಿಸಲಿ ಎಂಬುದೇ ನನ್ನ ಹೃತ್ಪೂರ್ವಕ ಹಾರೈಕೆ’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.आप सभी को विजयादशमी की अनंत शुभकामनाएं। उल्लास और विश्वास का यह विजय पर्व हर किसी के संकल्प को नई शक्ति प्रदान करे। सभी का जीवन सुख-सौभाग्य और सफलता से समृद्ध हो, यही कामना है।— Narendra Modi (@narendramodi) October 20, 2026 ಹೊಲದಲ್ಲಿ ಅನ್ನ ಬೆಳೆಯುವ ರೈತನ ನೇಗಿಲಿನಿಂದ ಹಿಡಿದು, ಕಾರ್ಖಾನೆಯ ಯಂತ್ರಗಳು, ರಸ್ತೆಯಲ್ಲಿ ಓಡುವ ವಾಹನಗಳು ಹಾಗೂ ನವಯುಗದ ಕಂಪ್ಯೂಟರ್ಗಳವರೆಗೆ ಪ್ರತಿಯೊಂದು ಸಾಧನವೂ ನಾಡಿನ ಪ್ರಗತಿಯ ಚಕ್ರವನ್ನು ಮುನ್ನಡೆಸುವ ಶಕ್ತಿ. ನಂಬಿದ ಕಾಯಕವನ್ನು ಪ್ರಾಮಾಣಿಕವಾಗಿ ನಡೆಸಿ, ಆ ದುಡಿಮೆಯ ಪರಿಕರಗಳನ್ನು ಪೂಜಿಸುವುದೇ ಈ ನೆಲದ ನಿಜವಾದ ಸಂಸ್ಕಾರ. ನಾಡಿನ ಸಮಸ್ತ ಅನ್ನದಾತರಿಗೆ, ಕಾರ್ಮಿಕ ಬಂಧುಗಳಿಗೆ, ಚಾಲಕರಿಗೆ, ಕುಶಲಕರ್ಮಿಗಳಿಗೆ ಹಾಗೂ ಉದ್ಯಮಿಗಳಿಗೆ, ಪರಿಶ್ರಮಿಗಳಿಗೆ ಆಯುಧ ಪೂಜೆಯ ಶುಭಾಶಯಗಳು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.ಹೊಲದಲ್ಲಿ ಅನ್ನ ಬೆಳೆಯುವ ರೈತನ ನೇಗಿಲಿನಿಂದ ಹಿಡಿದು, ಕಾರ್ಖಾನೆಯ ಯಂತ್ರಗಳು, ರಸ್ತೆಯಲ್ಲಿ ಓಡುವ ವಾಹನಗಳು ಹಾಗೂ ನವಯುಗದ ಕಂಪ್ಯೂಟರ್ಗಳವರೆಗೆ ಪ್ರತಿಯೊಂದು ಸಾಧನವೂ ನಾಡಿನ ಪ್ರಗತಿಯ ಚಕ್ರವನ್ನು ಮುನ್ನಡೆಸುವ ಶಕ್ತಿ. ನಂಬಿದ ಕಾಯಕವನ್ನು ಪ್ರಾಮಾಣಿಕವಾಗಿ ನಡೆಸಿ, ಆ ದುಡಿಮೆಯ ಪರಿಕರಗಳನ್ನು ಪೂಜಿಸುವುದೇ ಈ ನೆಲದ ನಿಜವಾದ ಸಂಸ್ಕಾರ.ನಾಡಿನ… pic.twitter.com/i1uWrEgNdx— CM of Karnataka (@CMofKarnataka) October 20, 2026 ವಿಜಯದಶಮಿಯು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿದೆ. ಉತ್ತರ ಭಾರತದಲ್ಲಿ ಶ್ರೀರಾಮನು ರಾವಣನನ್ನು ಸಂಹರಿಸಿದ ವಿಜಯದ ನೆನಪಿನಲ್ಲಿ ‘ರಾವಣ ದಹನ’ದೊಂದಿಗೆ ಆಚರಿಸಿದರೆ, ದಕ್ಷಿಣ ಹಾಗೂ ಪೂರ್ವ ಭಾರತದಲ್ಲಿ ದುರ್ಗಾದೇವಿಯು ಮಹಿಷಾಸುರನನ್ನು ಮರ್ದಿಸಿದ ವಿಜಯದ ಸಂಕೇತವಾಗಿ ಆಯುಧ ಪೂಜೆ ಹಾಗೂ ದಸರಾ ಮೆರವಣಿಗೆಗಳೊಂದಿಗೆ ಸಂಭ್ರಮಿಸಲಾಗುತ್ತದೆ.