ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ – ಯದುವೀರ್ ಒಡೆಯರ್ರಿಂದ ಪೂಜಾ ಕೈಂಕರ್ಯ
ಮೈಸೂರು: ಸಾಂಸ್ಕೃತಿ ನಗರಿ ಮೈಸೂರಲ್ಲಿ ನಾಡಹಬ್ಬ ದಸರಾ (Dasara) ಮಹೋತ್ಸವ ಕಳೆಗಟ್ಟಿದೆ. ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ನೆರವೇರಿದ್ದು, ಯದುವೀರ್ ಒಡೆಯರ್ (Yaduveer Wadeyar) ಅವರು ವಿಶೇಷ ಪೂಜೆ ಕೈಂಕರ್ಯ ನೆರವೇರಿಸಿದ್ದಾರೆ. ಆಯುಧ ಪೂಜೆ (Ayudha Pooja) ಹಿನ್ನೆಲೆ ಅರಮನೆಯ ಖಾಸಾ ಆಯುಧಗಳಿಗೆ ವಿಶೇಷ ಪೂಜೆ ಮಾಡಲಾಗಿದೆ. ಅಂಬಾವಿಲಾಸ ಅರಮನೆಯಲ್ಲಿ

ಮೈಸೂರು: ಸಾಂಸ್ಕೃತಿ ನಗರಿ ಮೈಸೂರಲ್ಲಿ ನಾಡಹಬ್ಬ ದಸರಾ (Dasara) ಮಹೋತ್ಸವ ಕಳೆಗಟ್ಟಿದೆ. ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ನೆರವೇರಿದ್ದು, ಯದುವೀರ್ ಒಡೆಯರ್ (Yaduveer Wadeyar) ಅವರು ವಿಶೇಷ ಪೂಜೆ ಕೈಂಕರ್ಯ ನೆರವೇರಿಸಿದ್ದಾರೆ. ಆಯುಧ ಪೂಜೆ (Ayudha Pooja) ಹಿನ್ನೆಲೆ ಅರಮನೆಯ ಖಾಸಾ ಆಯುಧಗಳಿಗೆ ವಿಶೇಷ ಪೂಜೆ ಮಾಡಲಾಗಿದೆ. ಅಂಬಾವಿಲಾಸ ಅರಮನೆಯಲ್ಲಿ ಬೆಳಗ್ಗೆ 6 ಗಂಟೆಗೆ ಚಂಡಿಕಾ ಹೋಮ ನಡೆಸಿ, ಬಳಿಕ ರಾಜವಂಶಸ್ಥರ ಕಾಲದ ಖಾಸಾ ಆಯುಧಗಳಿಗೆ ಪೂಜೆ ನೆರವೇರಿಸಲಾಯಿತು. ಕೋಡಿ ಸೋಮೇಶ್ವರ ದೇವಾಲಯಕ್ಕೆ ರಾಜರು ಬಳಸುತ್ತಿದ್ದ 32 ಬಗೆಯ ಆಯುಧಗಳನ್ನು ಕೊಂಡೊಯ್ದು ಶುಚಿಗೊಳಿಸಿ ಪೂಜೆ ಮಾಡಿ, ಬಳಿಕ ಪಲ್ಲಕ್ಕಿ ಮೂಲಕ ಅಂಬಾವಿಲಾಸ ಅರಮನೆಗೆ ಪಟ್ಟದ ಕತ್ತಿಯನ್ನು ರವಾನಿಸಿದರು. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ಕಚೇರಿಯಲ್ಲಿ ಆಯುಧಪೂಜೆ ಸಂಭ್ರಮ ಅಂಬಾ ವಿಲಾಸ ಅರಮನೆಯ ಕಲ್ಯಾಣ ಮಂಟಪದಲ್ಲಿ ಖಾಸಾ ಆಯುಧಗಳಿಗೆ ಮಹಾರಾಜ ಯದುವೀರ್ ಒಡೆಯರ್ ಪೂಜೆ ನೆರವೇರಿಸಿದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೇರಿ ರಾಜ ಮನೆತನದವರು ಬಳಸುತ್ತಿದ್ದ ಅರಮನೆಯ ಕತ್ತಿ, ಈಟಿ, ಗುರಾಣಿ ರಾಜರ ಕಾಲದ ಆಯುಧಗಳಿಗೆ ಯದುವೀರ್ ಸಾಂಪ್ರದಾಯಿಕವಾಗಿ ಪೂಜೆ ಮಾಡಿದರು. ಸುಮಾರು 20 ನಿಮಿಷಗಳ ಪೂಜೆ ಸಲ್ಲಿಸಿದರು. ಅದೇ ಸಮಯದಲ್ಲಿ ಅರಮನೆ ಆನೆ ಬಾಗಿಲು ಬಳಿ ಪಿರಂಗಿ ವಾಹನಗಳಿಗೂ ಪೂಜೆ ಸಲ್ಲಿಸಿದರು. ಈ ಎಲ್ಲಾ ಪೂಜಾ ಕೈಂಕರ್ಯವನ್ನು ಕಲ್ಯಾಣ ಮಂಟಪದ ಮಹಡಿಯಲ್ಲಿ ನಿಂತು ರಾಜಮಾತೆ ಪ್ರಮೋದಾದೇವಿ, ರಾಣಿ ತ್ರಿಷಿಕಾ ಮತ್ತು ಇಬ್ಬರು ಮಕ್ಕಳು ವೀಕ್ಷಣೆ ಮಾಡಿದರು. ಆಯುಧ ಪೂಜೆ ನಂತರ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ, ಒಂಟೆಗಳಿಗೆ ಪೂಜೆ ಮಾಡಲಾಯ್ತು. ಯದುವೀರ್ ಒಡೆಯರ್ ಅವರು ರಾಜಪೋಷಾಕಿಯಲ್ಲಿ ಪೂಜೆ ನೆರವೇರಿಸಿದರು. ಬಳಿಕ ಮೈಸೂರು ರಾಜವಂಶಸ್ಥರು ಬಳಸುತ್ತಿದ್ದ, ಪ್ರಸ್ತುತ ಬಳಸುತ್ತಿರುವ ಅರಮನೆಯ ಐಷಾರಾಮಿ ಕಾರುಗಳಿಗೆ ಪೂಜೆ ಮಾಡಲಾಯ್ತು. ಬಾಳೆದಿಂಡು. ಹೂವುಗಳಿಂದ ಕಾರುಗಳನ್ನು ಅರಮನೆಯ ಸವಾರಿ ತೊಟ್ಟಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು.ಇದನ್ನೂ ಓದಿ: ಮೈಸೂರು ದಸರಾ | ಜಂಬೂ ಸವಾರಿಯಲ್ಲಿ ಈ ಬಾರಿ 53 ಆಕರ್ಷಕ ಸ್ತಬ್ಧಚಿತ್ರಗಳು ಇದೇ ಮೊದಲ ಬಾರಿಗೆ ನಾಡದೇವತೆಯನ್ನು ಹೆಗಲ ಮೇಲೆ ಹೊತ್ತು ಕ್ಯಾಪ್ಟನ್ ಪ್ರಶಾಂತ ಅಂಬಾರಿ ಮೆರವಣಿಗೆಯಲ್ಲಿ ಭಾಗಿ ಆಗಲಿದ್ದಾನೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಸಾಕಷ್ಟು ಜನರು ಮೈಸೂರಿನತ್ತ ಮುಖ ಮಾಡಿದ್ದಾರೆ. ಹೀಗಾಗಿ ಅರಮನೆ ಆವರಣದಲ್ಲಿ ಅಂಬಾರಿ ವೀಕ್ಷಣೆಗಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಐಪಿ, ವಿವಿಐಪಿ, ಸಾರ್ವಜನಿಕರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಸೇರಿ 30 ಸಾವಿರಕ್ಕೂ ಹೆಚ್ಚು ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್ ಕಾರ್ಡ್ ಹಾಗೂ, ಜಂಬುಸವಾರಿ ಪಾಸ್ ಪಡೆದವರಿಗೂ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ. ಅಲ್ಲದೇ ಕೇರಳ, ತೆಲಂಗಾಣ ಸಿಎಂ ಬರುವ ಹಿನ್ನೆಲೆ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿದೆ. ಜಂಬೂಸವಾರಿ ಸಾಗುವ ಮಾರ್ಗದುದ್ದಕ್ಕೂ ಬಾಂಬ್ ನಿಷ್ಕ್ರೀಯ ದಳ, ಶ್ವಾನದಳ ತಪಾಸಣೆ ನಡೆಸಿದ್ದು, ಭದ್ರತೆಗೆ ಪೊಲೀಸ್ ಸಿಬ್ಬಂದಿಯ ನಿಯೋಜಿಸಲಾಗಿದೆ. ಒಟ್ಟಾರೆ, ಕ್ಯಾಪ್ಟನ್ ಪ್ರಶಾಂತ ನಾಡದೇವತೆಯನ್ನು ಹೊತ್ತು ಮೆರೆಸುವ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ದಸರಾಗಾಗಿ ಮೈಸೂರು ಸಜ್ಜುಗೊಂಡಿದೆ.ಇದನ್ನೂ ಓದಿ:ದುಷ್ಟತನದ ವಿರುದ್ಧ ದೈವತ್ವದ ವಿಜಯ ಸಾರುವ ಹಬ್ಬ – ವಿಜಯದಶಮಿಯ ಪೌರಾಣಿಕ ಮಹತ್ವವೇನು?