ವಿಧಾನಸೌಧ ಸ್ಫೋಟಿಸಿದಂತೆ AI ವಿಡಿಯೋ ಹರಿಬಿಟ್ಟ ಕಿಡಿಗೇಡಿ
ಬೆಂಗಳೂರು: ವಿಧಾನಸೌಧಕ್ಕೆ (Vidhana Soudha) ಬಾಂಬ್ ಇಟ್ಟು ಉಡಾಯಿಸಿದಂತೆ ಎಐ (AI Video) ಬಳಸಿ ಎಡಿಟ್ ಮಾಡಿದ ವೀಡಿಯೊವೊಂದು ಇನ್ಸ್ಟಾಗ್ರಾಮ್ನಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಆಗಿರುವ ಈ ವೀಡಿಯೊದಲ್ಲಿ ಕಿಡಿಗೇಡಿ ಯುವಕ ತನ್ನನ್ನು ಭಯೋತ್ಪಾದಕನಂತೆ ಬಿಂಬಿಸಿಕೊಂಡಿದ್ದು, ದಸರಾ

ಬೆಂಗಳೂರು: ವಿಧಾನಸೌಧಕ್ಕೆ (Vidhana Soudha) ಬಾಂಬ್ ಇಟ್ಟು ಉಡಾಯಿಸಿದಂತೆ ಎಐ (AI Video) ಬಳಸಿ ಎಡಿಟ್ ಮಾಡಿದ ವೀಡಿಯೊವೊಂದು ಇನ್ಸ್ಟಾಗ್ರಾಮ್ನಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಆಗಿರುವ ಈ ವೀಡಿಯೊದಲ್ಲಿ ಕಿಡಿಗೇಡಿ ಯುವಕ ತನ್ನನ್ನು ಭಯೋತ್ಪಾದಕನಂತೆ ಬಿಂಬಿಸಿಕೊಂಡಿದ್ದು, ದಸರಾ ವೇಳೆ ಆತಂಕ ಸೃಷ್ಟಿಸಲು ಯತ್ನಿಸಿದ್ದಾನೆ. ಇದನ್ನೂ ಓದಿ: ನಾಡಹಬ್ಬ ದಸರಾ ಪಂಜಿನ ಕವಾಯತು ರಿಹರ್ಸಲ್ ವೇಳೆ ಅವಘಡ – ಸಿಬ್ಬಂದಿಗೆ ಗಾಯ Jnx king Hg ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಿಡಿಗೇಡಿಯೊಬ್ಬ ಈ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾನೆ. ವಿಧಾನಸೌಧದ ಮುಂಭಾಗ ಶೂಟ್ ಮಾಡಿ, ಎಐ ತಂತ್ರಜ್ಞಾನ ಬಳಸಿ ಅದನ್ನು ಬಾಂಬ್ ಬ್ಲಾಸ್ಟ್ ಮಾಡಿದಂತೆ ಎಡಿಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ, ವಿಧಾನಸೌಧವನ್ನು ಬಾಂಬ್ನಿಂದ ಉಡಾಯಿಸಿದ್ದೇನೆ ಎಂದು ಬರೆದುಕೊಂಡಿದ್ದಾನೆ. ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಈ ರೀತಿ ಸಾರ್ವಜನಿಕವಾಗಿ ಆತಂಕ ಸೃಷ್ಟಿಸುವ ವಿಡಿಯೋ ಹಂಚಿಕೊಂಡಿರುವ ಕಿಡಿಗೇಡಿಯ ಉದ್ದೇಶವೇನು ಎಂಬ ಬಗ್ಗೆ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದ ಅತ್ಯುನ್ನತ ಭದ್ರತಾ ವಲಯವಾದ ವಿಧಾನಸೌಧಕ್ಕೆ ಈ ರೀತಿ ಬೆದರಿಕೆ ಒಡ್ಡುವ ವಿಡಿಯೋ ಪ್ರಸಾರ ಮಾಡಿರುವ ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ.ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ಕಚೇರಿಯಲ್ಲಿ ಆಯುಧಪೂಜೆ ಸಂಭ್ರಮ