ಆರ್ಎಸ್ಎಸ್ ಮಹಿಳೆಯರನ್ನು ಪುರುಷರ ಆಸ್ತಿ ಎಂದು ಭಾವಿಸುತ್ತದೆ: ರಾಹುಲ್ ಆರೋಪ
ನವದೆಹಲಿ: ‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕೇವಲ ಪುರುಷರನ್ನೇ ಒಳಗೊಂಡಿರುವ ಸಂವಿಧಾನ ವಿರೋಧಿ ಗುಂಪಾಗಿದೆ. ಅದು ಮಹಿಳೆಯರನ್ನು ಪುರುಷರ ಆಸ್ತಿ ಎಂದು ಭಾವಿಸುತ್ತದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಆರ್ಎಸ್ಎಸ್ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿರುವ ಕಾ
ನವದೆಹಲಿ: ‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕೇವಲ ಪುರುಷರನ್ನೇ ಒಳಗೊಂಡಿರುವ ಸಂವಿಧಾನ ವಿರೋಧಿ ಗುಂಪಾಗಿದೆ. ಅದು ಮಹಿಳೆಯರನ್ನು ಪುರುಷರ ಆಸ್ತಿ ಎಂದು ಭಾವಿಸುತ್ತದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಆರ್ಎಸ್ಎಸ್ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್, ‘ನಾನು 'ಶಿವ-ಶಕ್ತಿ' ತತ್ವದಲ್ಲಿ ನಂಬಿಕೆ ಇಟ್ಟಿರುವುದರಿಂದಲೇ ಆರ್ಎಸ್ಎಸ್ ವಿರುದ್ಧ ಹೋರಾಡುವುದು ಅತೀವ ಸಂತಸ ನೀಡುತ್ತದೆ’ ಎಂದು ಹೇಳಿದ್ದಾರೆ.‘ಇನ್ನೂ ವಿಶೇಷವೆಂದರೆ, ಅವರ ಕಡೆಯ ಅನೇಕ ಮಹಿಳೆಯರೂ ನನ್ನ ಪರವಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನಾ ದಿನದಂದೇ ರಾಹುಲ್ ಗಾಂಧಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.The RSS is an al male anti-constitutional cult that believes women are the property of men.I believe in Shiva-Shakti.That's why it gives me such joy to fight them.What's beautiful is that many of their “own” women are on my side.— Rahul Gandhi (@RahulGandhi) October 20, 2026 ಭಾರತದಲ್ಲಿ ಆಡಳಿತ ಬದಲಾವಣೆ ಸಾಧ್ಯವಿಲ್ಲ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಎಸ್ಐಆರ್ ಮೂಲಕ ದೇಶದ್ರೋಹ: ಮೋದಿ, ಶಾ, ಭಾಗವತ್ ವಿರುದ್ಧ ಕ್ರಮ ಆಗಬೇಕು; ರಾಹುಲ್