ಆಂಬುಲೆನ್ಸ್ ಕೊರತೆ ನೀಗಿಸಲು ಆರೋಗ್ಯ ಇಲಾಖೆ ಪ್ಲ್ಯಾನ್; 100 ಹೊಸ ವಾಹನಗಳ ಖರೀದಿಗೆ ಸಿದ್ಧತೆ
ಬೆಂಗಳೂರು: ರಾಜ್ಯದಲ್ಲಿ ಆಂಬುಲೆನ್ಸ್ಗಳ (Ambulance) ಕೊರತೆಯಿಂದ ತುರ್ತು ಆರೋಗ್ಯ ಸೇವೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಹಳೆಯ ಆಂಬುಲೆನ್ಸ್ಗಳ ಬದಲಿಗೆ ಹೊಸ ವಾಹನಗಳನ್ನು ಖರೀದಿಸಲು ಸಿದ್ಧತೆ ನಡೆಸಿದೆ. ರೋಡ್ ಸೇಫ್ಟಿ ಯೋಜನೆಯಡಿ ಮೊದಲ ಹಂತದಲ್ಲಿ 100 ಹೊಸ ಆಂಬುಲೆನ್ಸ್ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ 108 ಆಂಬ

ಬೆಂಗಳೂರು: ರಾಜ್ಯದಲ್ಲಿ ಆಂಬುಲೆನ್ಸ್ಗಳ (Ambulance) ಕೊರತೆಯಿಂದ ತುರ್ತು ಆರೋಗ್ಯ ಸೇವೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಹಳೆಯ ಆಂಬುಲೆನ್ಸ್ಗಳ ಬದಲಿಗೆ ಹೊಸ ವಾಹನಗಳನ್ನು ಖರೀದಿಸಲು ಸಿದ್ಧತೆ ನಡೆಸಿದೆ. ರೋಡ್ ಸೇಫ್ಟಿ ಯೋಜನೆಯಡಿ ಮೊದಲ ಹಂತದಲ್ಲಿ 100 ಹೊಸ ಆಂಬುಲೆನ್ಸ್ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ 108 ಆಂಬುಲೆನ್ಸ್ಗಳ ಕೊರತೆ ಇದೆ. ಈ ಬಗ್ಗೆ ಈ ಹಿಂದೆಯೇ ಆರೋಗ್ಯ ಸಚಿವರು ಹೊಸ ಆಂಬುಲೆನ್ಸ್ಗಳನ್ನು ಖರೀದಿಸುವುದಾಗಿ ಹೇಳಿದ್ದರು. ಟೆಂಡರ್ ಕರೆದಿರುವ ಬಗ್ಗೆಯೂ ಮಾಹಿತಿ ನೀಡಿದ್ದರು. ಇದೀಗ ಹಳೆಯ ಆಂಬುಲೆನ್ಸ್ಗಳ ಬದಲಿಗೆ ಹೊಸ ವಾಹನಗಳನ್ನು ರಸ್ತೆಗಿಳಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವುದು ಬಹಳ ಮುಖ್ಯ. ಹಾಗೆಯೇ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗಬೇಕು. ಆದರೆ ಆಂಬುಲೆನ್ಸ್ಗಳ ಕೊರತೆ ಇದ್ದರೆ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದರಲ್ಲಿ ತೊಂದರೆಯಾಗಬಹುದು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಆಂಬುಲೆನ್ಸ್ಗಳ ಖರೀದಿಗೆ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 100 ಆಂಬುಲೆನ್ಸ್ ಖರೀದಿ ರೋಡ್ ಸೇಫ್ಟಿ ಯೋಜನೆಯಡಿ ಮೊದಲ ಹಂತದಲ್ಲಿ 100 ಹೊಸ ಆಂಬುಲೆನ್ಸ್ಗಳನ್ನು ಖರೀದಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಹೊಸ ವಾಹನಗಳು ಸೇವೆಗೆ ಸೇರಿದರೆ ಅಪಘಾತದಲ್ಲಿ ಗಾಯಗೊಂಡವರು ಹಾಗೂ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗಲಿದೆ.ಇದನ್ನೂ ಓದಿ: ನವರಾತ್ರಿ ಸ್ಪೆಷಲ್ – ಹಬ್ಬದ ಸಂಭ್ರಮಕ್ಕೆ ಮನೆಯಲ್ಲೇ ಮಖಾನಾ ಖೀರ್ ತಯಾರಿಸಿ ಇದರ ಜೊತೆಗೆ ಇನ್ನೂ 450 ಆಂಬುಲೆನ್ಸ್ಗಳನ್ನು ಖರೀದಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಮೊದಲ ಹಂತದಲ್ಲಿ 100 ಆಂಬುಲೆನ್ಸ್ಗಳನ್ನು ಖರೀದಿಸಿ, ನಂತರ ಹಂತಹಂತವಾಗಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆ ಇದೆ. ತುರ್ತು ಆರೋಗ್ಯ ಸೇವೆಗೆ ಸಿಗುತ್ತಾ ಮತ್ತಷ್ಟು ಬಲ? ಆಂಬುಲೆನ್ಸ್ ಎನ್ನುವುದು ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಜೀವ ಉಳಿಸುವ ಸೇವೆ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಕ್ಕರೆ ಆಸ್ಪತ್ರೆಗೆ ತಲುಪಲು ಅನುಕೂಲವಾಗುತ್ತದೆ. ಹೀಗಾಗಿ ಹೊಸ ಆಂಬುಲೆನ್ಸ್ಗಳ ಖರೀದಿಯಿಂದ ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.ಇದನ್ನೂ ಓದಿ: ಕಾನೂನಿನ ಬಗ್ಗೆ ಗೌರವವಿಲ್ಲದಂತೆ ರಾಂಕಾ, ದಾಸ್ ವರ್ತನೆ – SEM ಆದೇಶದಲ್ಲಿ ಏನಿದೆ?