ಹಾವೇರಿ | ಶಾರ್ಟ್ ಸರ್ಕೀಟ್ನಿಂದ 20 ಎಕರೆ ಕಬ್ಬು ಬೆಂಕಿಗಾಹುತಿ
ಹಾವೇರಿ: ತಾಲ್ಲೂಕಿನ ಸಂಗೂರ ಗ್ರಾಮದ ಬಳಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ನಿಂದಾಗಿ ಬೆಂಕಿ ಹೊತ್ತಿಕೊಂಡು 20 ಎಕರೆ ಪ್ರದೇಶದಲ್ಲಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ.ಗ್ರಾಮದ ಬಳಿಯ ಜಮೀನುಗಳಲ್ಲಿ ಬಸವಣ್ಣೆಪ್ಪ ದೇವಗಿರಿ, ಚಂದ್ರಪ್ಪ ದೇವಗಿರಿ, ಶಿವಪ್ಪ ದೇವಗಿರಿ, ಬಸವರಾಜಪ್ಪ ದೇವಗಿರಿ, ನಾಗೇಶಪ್ಪ ಘಂಟಿ, ಶಿವಾನಂದಪ್ಪ ಘಂಟಿ ಸೇರಿದಂತೆ ಹಲವು ರೈತರು ಕಬ್ಬು ಬೆಳೆದಿದ್ದ

ಹಾವೇರಿ: ತಾಲ್ಲೂಕಿನ ಸಂಗೂರ ಗ್ರಾಮದ ಬಳಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ನಿಂದಾಗಿ ಬೆಂಕಿ ಹೊತ್ತಿಕೊಂಡು 20 ಎಕರೆ ಪ್ರದೇಶದಲ್ಲಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ.ಗ್ರಾಮದ ಬಳಿಯ ಜಮೀನುಗಳಲ್ಲಿ ಬಸವಣ್ಣೆಪ್ಪ ದೇವಗಿರಿ, ಚಂದ್ರಪ್ಪ ದೇವಗಿರಿ, ಶಿವಪ್ಪ ದೇವಗಿರಿ, ಬಸವರಾಜಪ್ಪ ದೇವಗಿರಿ, ನಾಗೇಶಪ್ಪ ಘಂಟಿ, ಶಿವಾನಂದಪ್ಪ ಘಂಟಿ ಸೇರಿದಂತೆ ಹಲವು ರೈತರು ಕಬ್ಬು ಬೆಳೆದಿದ್ದರು. ಇವರ ಜಮೀನಿನ ಸಮೀಪದಲ್ಲಿಯೇ ವಿದ್ಯುತ್ ತಂತಿ ಹಾದು ಹೋಗಿದೆ.ಅದೇ ವಿದ್ಯುತ್ ತಂತಿಯಿಂದ ಶಾರ್ಟ್ ಸರ್ಕೀಟ್ ಉಂಟಾಗಿ ಭಾನುವಾರ ಮಧ್ಯಾಹ್ನ ಕಬ್ಬಿಗೆ ಬೆಂಕಿ ಹೊತ್ತಿಕೊಂಡಿರುವುದಾಗಿ ರೈತರು ದೂರಿದರು.ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲಗೆ ಹೆಚ್ಚಾಗಿತ್ತು. ಕಟಾವಿಗೆ ಬಂದಿದ್ದ ಕಬ್ಬು, ಕಣ್ಣೆದುರೇ ಸುಟ್ಟು ಹೋಯಿತು ಎಂದು ರೈತರು ಕಣ್ಣೀರಿಟ್ಟರು.‘ಕಬ್ಬು ಕಟಾವು ಹಂತಕ್ಕೆ ಬಂದು ಒಣಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸಿಲ್ಲ. ಕಾರ್ಖಾನೆಗಳೂ ಆರಂಭವಾಗಿಲ್ಲ. ಇದರಿಂದಾಗಿ, ಒಣಗಿದ ಕಬ್ಬಿಗೆ ಬೆಂಕಿ ಹೊತ್ತಿಕೊಂಡು ಹಾನಿಯಾಗುತ್ತಿದೆ. ಈಗಾಗಲೇ ಬೆಂಕಿ ಹೊತ್ತಿಕೊಂಡಿರುವ ರೈತರಿಗೆ ಎಕರೆಗೆ ₹ 1 ಲಕ್ಷ ಪರಿಹಾರ ನೀಡಬೇಕು. ವಿದ್ಯುತ್ ತಂತಿಯಿಂದಲೇ ಬೆಂಕಿ ಅವಘಡ ಸಂಭವಿಸಿದ್ದು, ಹೆಸ್ಕಾಂ ಅಧಿಕಾರಿಗಳೇ ಇದರ ಹೊಣೆ ಹೊರಬೇಕು’ ಎಂದು ರೈತರು ಆಗ್ರಹಿಸುತ್ತಿದ್ದಾರೆ.261020-22-1244793328