ಟೈಗರ್ ಶ್ರಾಫ್ ಕಾರಿನ ಮೇಲೆ ಫೈರಿಂಗ್ ಕೇಸ್ಗೆ ಟ್ವಿಸ್ಟ್ – ಅ.11ರಂದೇ ದಾಳಿಗೆ ಸಂಚು
ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಕಾರಿನ ಮೇಲಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಶ್ರಾಫ್ ಮೇಲೆ ದಾಳಿ ಮಾಡಲು ಶೂಟರ್ಸ್ ಅ.11ರಂದೇ ದಾಳಿಗೆ ಸಂಚು ಹೂಡಿದ್ದರು, ಆದರೆ ವಿಫಲವಾಗಿತ್ತು ಎಂದು ಇದೀಗ ತನಿಖೆಗೆ ಟ್ವಿಸ್ಟ್ ಸಿಕ್ಕಿದೆ. ಅ.18ರಂದು ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಕಾರಿನ ಮೇಲಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಶ್ರಾಫ್ ಮೇಲೆ ದಾಳಿ ಮಾಡಲು ಶೂಟರ್ಸ್ ಅ.11ರಂದೇ ದಾಳಿಗೆ ಸಂಚು ಹೂಡಿದ್ದರು, ಆದರೆ ವಿಫಲವಾಗಿತ್ತು ಎಂದು ಇದೀಗ ತನಿಖೆಗೆ ಟ್ವಿಸ್ಟ್ ಸಿಕ್ಕಿದೆ. ಅ.18ರಂದು ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿದಾಗ ಇದೀಗ ಒಂದೊಂದಾಗಿಯೇ ಹೊಸ ವಿಷಯಗಳು ಹೊರಬರುತ್ತಿವೆ. ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಶೂಟೌಟ್ – ಆರೋಪಿಗಳಿಗೆ 34,000 ಹಣ, ವಿದೇಶದಲ್ಲಿ ಉದ್ಯೋಗದ ಸುಪಾರಿ, ರೋಚಕ ಅಂಶ ಬಹಿರಂಗ 10 ದಿನಗಳಿಂದ ನಟನ ಚಲನವಲನಗಳ ಮೇಲೆ ನಿಗಾ: ಆರೋಪಿಗಳು ಕಳೆದ 10 ದಿನಗಳಿಂದ ನಟನ ಚಲನವಲನಗಳ ಮೇಲೆ ನಿಗಾ ವಹಿಸಿದ್ದರು. ನಟ ಮನೆಯಿಂದ ಹೊರಡುವ ಸಮಯ, ಜಿಮ್ಗೆ ಹೋಗುವ ಸಮಯ, ಫುಟ್ಬಾಲ್ ಆಡಲು ಹೋಗುವ ಸಮಯ, ವಾಪಸ್ ಆಗುವ ಟೈಮ್ ಎಲ್ಲದರ ಮೇಲೂ ತೀವ್ರ ನಿಗಾವಹಿಸಿದ್ರು. ಆದರೆ ಈ ನಡುವೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಸ್ಪೋಟಕ ಅಂಶ ಬಯಲಾಗಿದೆ. ಅದಾದ ಬಳಿಕ ಮತ್ತೊಮ್ಮೆ ಪ್ಲ್ಯಾನ್ ರೂಪಿಸಿ ಭಾನುವಾರ ಸಂಜೆ ವೇಳೆಗೆ ನಟ ಟೈಗರ್ ಶ್ರಾಫ್ ಮೇಲೆ ಶೂಟರ್ಸ್ ದಾಳಿ ನಡೆಸಿದ್ದಾರೆ. ಬಾಲಿವುಡ್ ನಟ ಜಾಕಿ ಶ್ರಾಫ್ ಮಗ ಟೈಗರ್ ಶ್ರಾಫ್ ಮೇಲಿನ ದಾಳಿಗೆ ಇಡೀ ಬಾಲಿವುಡ್ ಬೆದರಿ ಹೋಗಿದೆ. ಸಲ್ಮಾನ್ ಖಾನ್ ಜೊತೆಗೆ ಆಪ್ತತೆ ಹೊಂದಿರುವವರನ್ನೇ ಬಿಷ್ಣೋಯ್ ಗ್ಯಾಂಗ್ ಟಾರ್ಗೆಟ್ ಮಾಡಿದ್ದು, ಸದ್ಯ ಪ್ರಕರಣದಲ್ಲಿ ಬಂಧಿತರಾಗಿರುವವರು ಸಹ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕ ಹೊಂದಿರುವವವರೇ ಆಗಿದ್ದಾರೆ. ಈ ನಡುವೆ ಶ್ರಾಫ್ ಮೇಲೆ ಫೈರಿಂಗ್ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹರಿಯಾಣದಲ್ಲಿ 4ನೇ ಆರೋಪಿ ಸಮೀರ್ ಎಂಬಾತನ ಬಂಧನವಾಗಿದೆ.ಇದನ್ನೂ ಓದಿ: Tiger Shroff Firing |50 ಸಾವಿರ ಅಡ್ವಾನ್ಸ್ ಪಡೆದು ಶೂಟ್ – ಟೈಗರ್ ಫೈರಿಂಗ್ ಟೈಮ್ ಲೈನ್ ಹರಿಯಾಣದಲ್ಲಿ ಬಂಧಿತನಾಗಿರುವ ಆರೋಪಿ ಸಮೀರ್. ಬಿಷ್ಣೋಯ್ ಗ್ಯಾಂಗ್ನ ಅನಿಲ್ ಪಂಡಿತ್ ಮತ್ತು ಮೂವರು ಶೂಟರ್ಸ್ ಜೊತೆ ಲಿಂಕ್ ಹೊಂದಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಇನ್ನು ಫೈರಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳಲ್ಲಿ ಯಾರೂ ಅಪ್ರಾಪ್ತರಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಆರೋಪಿಗಳಿಗೆ ಹಣದ ಆಮಿಷವೊಡ್ಡಿದ್ದು ಬಯಲಾಗಿದೆ. ಶೂಟರ್ಸ್ ಸೂರತ್ ರೈಲ್ವೆ ನಿಲ್ದಾಣದಲ್ಲಿ ಓಡಿ ಹೋಗಿ ರೈಲು ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇನ್ನು ಶೂಟರ್ಸ್ ಹೋಗಿದ್ದ ಟ್ಯಾಕ್ಸಿ ಚಾಲಕನೇ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆಯಲ್ಲಿ ಬಯಲಾಗಿದೆ. ಬಂಧಿತ ಆರೋಪಿಗಳನ್ನು ಮುಂಬೈಗೆ ಕರೆತರಲಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ದಾಳಿ ಬೆನ್ನಲ್ಲೇ ನಟ ಟೈಗರ್ ಶ್ರಾಫ್ ಮನೆಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.ಇದನ್ನೂ ಓದಿ: 4 ವರ್ಷಗಳಲ್ಲಿ ಸಲ್ಮಾನ್ ಖಾನ್, ದಿಶಾ ಪಟಾನಿ ಸೇರಿ 8 ಸೆಲೆಬ್ರಿಟಿಗಳ ಮೇಲೆ ಶೂಟೌಟ್!