ಮುಂಬೈ ಷೇರುಪೇಟೆ ಸೂಚ್ಯಂಕ : ಸೆನ್ಸೆಕ್ಸ್ 876 ಅಂಶ ಇಳಿಕೆ
ಮುಂಬೈ (ಪಿಟಿಐ): ಬ್ಯಾಂಕಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಷೇರುಪೇಟೆ ಸೂಚ್ಯಂಕಗಳು ಸೋಮವಾರ ಇಳಿಕೆ ಕಂಡಿವೆ.ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 876 ಅಂಶ ಇಳಿಕೆಯಾಗಿ, 73,852ಕ್ಕೆ ವಹಿವಾಟು ಅಂತ್ಯಗೊಂಡಿದೆ. ವಹಿವಾಟಿನ ವೇಳೆ 1,020 ಅಂಶ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 25

ಮುಂಬೈ (ಪಿಟಿಐ): ಬ್ಯಾಂಕಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಷೇರುಪೇಟೆ ಸೂಚ್ಯಂಕಗಳು ಸೋಮವಾರ ಇಳಿಕೆ ಕಂಡಿವೆ.ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 876 ಅಂಶ ಇಳಿಕೆಯಾಗಿ, 73,852ಕ್ಕೆ ವಹಿವಾಟು ಅಂತ್ಯಗೊಂಡಿದೆ. ವಹಿವಾಟಿನ ವೇಳೆ 1,020 ಅಂಶ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 257 ಅಂಶ ಕಡಿಮೆಯಾಗಿ 22,888ಕ್ಕೆ ಕೊನೆಗೊಂಡಿದೆ.ಎಚ್ಡಿಎಫ್ಸಿ ಬ್ಯಾಂಕ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹೂಡಿಕೆದಾರರು ನಿರೀಕ್ಷಿಸಿದಷ್ಟು ಗಳಿಕೆ ನೀಡಿಲ್ಲ. ಇದರಿಂದ ಬ್ಯಾಂಕ್ನ ಷೇರಿನ ಮೌಲ್ಯ ಇಳಿದಿದೆ. ಎಕ್ಸಿಸ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಇನ್ಫೊಸಿಸ್, ಬಜಾಜ್ ಫೈನಾನ್ಸ್, ಟ್ರೆಂಟ್, ಎನ್ಟಿಪಿಸಿ ಷೇರಿನ ಮೌಲ್ಯದಲ್ಲಿ ಸಹ ಇಳಿಕೆಯಾಗಿದೆ.ಸಕ್ಕರೆ ಕಂಪನಿಗಳ ಷೇರಿನ ಮೌಲ್ಯ ಇಳಿಕೆ: ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರುಕಟ್ಟೆ ಕಂಪನಿಗಳು ಈ ಬಾರಿ ಕಬ್ಬು, ಸಕ್ಕರೆ ಮತ್ತು ಬಿ–ಹೆವಿ ಮೊಲಾಸಿಸ್ನಿಂದ ಎಥೆನಾಲ್ ಉತ್ಪಾದಿಸುವುದನ್ನು ಈ ಬಾರಿ ಬಿಡ್ನಿಂದ ಕೈಬಿಟ್ಟಿವೆ. ಇದರಿಂದ ವಲಯದ ಕಂಪನಿಗಳ ಷೇರಿನ ಮೌಲ್ಯ ಇಳಿಕೆಯಾಗಿದೆ. ಶ್ರೀ ರೇಣುಕಾ ಶುಗರ್ಸ್ ಕಂಪನಿಯ ಷೇರಿನ ಮೌಲ್ಯ ಶೇ 6.37ರಷ್ಟು ಇಳಿಕೆಯಾಗಿದೆ. ಬಜಾಜ್ ಹಿಂದೂಸ್ತಾನ್ ಶುಗರ್ಸ್, ದ್ವಾರಕೀಶ್ ಶುಗರ್ ಇಂಡಸ್ಟ್ರೀಸ್ ಲಿಮಿಟೆಡ್, ದಾಲ್ಮಿಯಾ ಭಾರತ್ ಶುಗರ್ಸ್ ಆ್ಯಂಡ್ ಇಂಡಸ್ಟ್ರೀಸ್ನ ಷೇರಿನ ಮೌಲ್ಯ ಇಳಿದಿದೆ.261020-51-1111012437