ಆಯುಧ ಪೂಜೆ: ಮಂಡ್ಯದಲ್ಲಿ ಖರೀದಿ ಜೋರು
ಮಂಡ್ಯ: ವಾಹನಗಳು, ಕಚೇರಿಗಳು ಹಾಗೂ ಆಯುಧಗಳಿಗೆ ಪೂಜೆ ಮಾಡಲು ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಯ ಭರಾಟೆ ನಗರದಲ್ಲಿ ಸೋಮವಾರ ಕಂಡುಬಂತು.ಜಿಲ್ಲೆಯಾದ್ಯಂತ ವಿಜಯದಶಮಿ ಮತ್ತು ಆಯುಧಪೂಚೆ ಹಬ್ಬದ ಸಂಭ್ರಮಕ್ಕೆ ಅಗತ್ಯ ಸಿದ್ಧತೆ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಪಟ್ಟಣ ಪ್ರದೇಶಗಳಲ್ಲೂ ವ್ಯಾಪಾರ ವಹಿವಾಟು ಜೋರಾಗಿತ್ತು. ಮಂಡ್

ಮಂಡ್ಯ: ವಾಹನಗಳು, ಕಚೇರಿಗಳು ಹಾಗೂ ಆಯುಧಗಳಿಗೆ ಪೂಜೆ ಮಾಡಲು ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಯ ಭರಾಟೆ ನಗರದಲ್ಲಿ ಸೋಮವಾರ ಕಂಡುಬಂತು.ಜಿಲ್ಲೆಯಾದ್ಯಂತ ವಿಜಯದಶಮಿ ಮತ್ತು ಆಯುಧಪೂಚೆ ಹಬ್ಬದ ಸಂಭ್ರಮಕ್ಕೆ ಅಗತ್ಯ ಸಿದ್ಧತೆ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಪಟ್ಟಣ ಪ್ರದೇಶಗಳಲ್ಲೂ ವ್ಯಾಪಾರ ವಹಿವಾಟು ಜೋರಾಗಿತ್ತು. ಮಂಡ್ಯ ನಗರದ ಪ್ರಮುಖ ಬೀದಿಗಳಾದ ಬೆಂಗಳೂರು ಮೈಸೂರು ಹಳೇ ಹೆದ್ದಾರಿ ಬದಿ, ವಿವಿ ರಸ್ತೆ, ಮಹಾವೀರ ವೃತ್ತ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪ, ಹೊಳಲು ವೃತ್ತ, ಹೊಸಹಳ್ಳಿ ವೃತ್ತ, ಕರ್ನಾಟಕ ಬಾರ್ ಸರ್ಕಲ್, ರೈಲ್ವೆಗೇಟ್, ಫ್ಯಾಕ್ಟರಿ ವೃತ್ತ ಸೇರಿದಂತೆ ಮಾರುಕಟ್ಟೆಯಲ್ಲಿ ಬಾಳೆ ಕಂದು, ಹೂ, ಬೂದುಗುಂಬಳ, ಹಣ್ಣುಗಳ ಖರೀದಿಯಲ್ಲಿ ಜನರು ನಿರತರಾಗಿದ್ದರು.ರಸ್ತೆಗಳಲ್ಲಿ ಬಾಳೆ ಕಂದು, ಹೂವು, ಮಾವಿನ ಸೊಪ್ಪು ಹಾಗೂ ಬೂದುಗುಂಬಳವನ್ನು ವ್ಯಾಪಾರಿಗಳು ಗುಡ್ಡೆ ಹಾಕಿದ್ದವು. ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡಲು ಜನರು ತಂಡೋಪ ತಂಡವಾಗಿ ಗುಂಪುಗೂಡಿರುವುದು ಕಾಣುತ್ತಿತ್ತು. ಕೆಲವು ರಸ್ತೆಗಳು ಸಂಚಾರಕ್ಕೆ ಅಡಚಣೆಯಾಗುತ್ತಿರುವುದನ್ನು ತಪ್ಪಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.ಈ ಹಬ್ಬದಲ್ಲಿ ಪೂಜೆಗೆ ಹೂ ಬಹಳ ಪ್ರಮುಖ ಆಗಿರುವುದರಿಂದ ಬೆಲೆ ಹೆಚ್ಚಾಗಿತ್ತು. ನಾಲ್ಕೈದು ದಿನಗಳ ಹಿಂದಷ್ಟೇ ಒಂದು ಮಾರು ಸೇವಂತಿಗೆ ₹40 ರಿಂದ ₹50 ಬೆಲೆಯಿತ್ತು. ಆಯುಧ ಪೂಜೆ ಹಿನ್ನೆಲೆಯಲ್ಲಿ ₹80 ರಿಂದ ₹100ಕ್ಕೆ ಹೆಚ್ಚಳವಾಗಿತ್ತು.ಇನ್ನೂ ಕಣಗಲೆ ಒಂದು ಮಾರಿಗೆ ₹100, ಕಾಕಡ ₹200, ಕನಕಾಂಬರ ಮತ್ತು ಮಲ್ಲಿಗೆ ₹300 ಬೆಲೆಯಿತ್ತು. ಒಂದು ಸುಗಂಧರಾಜ ಹೂವಿನ ಹಾರ ₹200 ರಿಂದ ₹300 ಮತ್ತು ಗುಲಾಬಿ, ಮಲ್ಲಿಗೆ ಹಾರಗಳು (ಎತ್ತರಕ್ಕೆ ಅನುಗುಣವಾಗಿ) ₹400 ರಿಂದ ₹1 ವಾವಿರದವರೆಗೂ ಮಾರಾಟ ಮಾಡಲಾಗುತ್ತಿತ್ತು. 100 ಗ್ರಾಂ ಸಣ್ಣ ಗುಲಾಬಿ ಹೂವಿಗೆ ₹60 ರಿಂದ ₹80 ರವರೆಗೆ ಬಿಕರಿ ಆಗುತ್ತಿದ್ದವು.ಹಣ್ಣುಗಳ ಬೆಲೆಯಲ್ಲಿಯೂ ಹೆಚ್ಚಳವಾಗಿದ್ದು, ಕೆಜಿಗೆ ಏಲಕ್ಕಿ ಬಾಳೆಹಣ್ಣು ₹100 ರಿಂದ ₹120, ಪಚ್ಚಬಾಳೆ ₹50, ಸೇಬು ₹180 ರಿಂದ ₹200, ಕಿತ್ತಳೆ ₹120, ಕಿತ್ತಳೆ ₹200 ರಿಂದ ₹250, ಮೂಸಂಬಿ ₹80 ರಿಂದ ₹100, ಸಣ್ಣ ದ್ರಾಕ್ಷಿ ₹160, ಸಪೋಟ ₹100, ಪಪ್ಪಾಯಿ, ಅನಾನಸ್ ₹50, ಸೀತಾಫಲ ₹200, ಮರಸೇಬು ₹200 ಮಾರಾಟವಾಗುತ್ತಿತ್ತು. ಬೂದಗುಂಬಳವನ್ನು ಕೆಜಿಗೆ 25, ಜೋಡಿ ಬಾಳೆ ಕಂದಿಗೆ ಗಾತ್ರದ ಮೇಲೆ ₹20 ರಿಂದ ₹200, ಒಂದು ಕಬ್ಬಿನ ತೊಂಡೆಗೆ ₹20 ಬೆಲೆ ಇತ್ತು. ನಿಂಬೆ ಹಣ್ಣು ಒಂದಕ್ಕೆ ₹5 ರಿಂದ ₹10ಕ್ಕೆ ಮಾರಾಟಮಾಡಲಾಗುತ್ತಿತ್ತು.ವಿಶೇಷವಾಗಿ ಕಡ್ಲೆ ಪುರಿ ಮತ್ತು ಸಿಹಿ ಬೂಂದಿ ಹಾಗೂ ಸಿಹಿ ತಿನಿಸುಗಳನ್ನು ಬೇಕರಿಯಲ್ಲಿ ಖರೀದಿಸಲು ಜನಜಂಗುಳಿ ಇರುವುದು ಕಂಡು ಬಂದಿತು. ಆಯುಧ ಪೂಜೆಗೆಂದು ವಾಹನಗಳ ದುರಸ್ತಿ, ವಾಟರ್ ಸರ್ವೀಸ್ ಸ್ಟೇಷನ್ಗಳಲ್ಲಿ ಸರತಿ ಸಾಲಿನಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಒಟ್ಟಾರೆಯಾಗಿ ಮಂಗಳವಾರ ನಡೆಯುವ ಆಯುಧ ಪೂಜೆಯ ಸಿದ್ಧತೆಗೆ ಜನರು ಅಣಿಯಾಗಿದ್ದರು.ಬೆಲೆ ಏರಿಕೆಯಲ್ಲೂ ಖರೀದಿ ಭರಾಟೆಮಳವಳ್ಳಿ: ವಿಜಯದಶಮಿ ಹಾಗೂ ಆಯುಧ ಪೂಜೆ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಪೇಟೆ ಬೀದಿ ಸೇರಿದಂತೆ ಹಲವೆಡೆ ಹೂವು, ಹಣ್ಣು, ಬೂದುಕುಂಬಳ ಸೇರಿದಂತೆ ಅಗತ್ಯ ಸಾಮಗ್ರಿಗಳ ಖರೀದಿ ಜೋರಾಗಿತ್ತು.ಜೀವನಕ್ಕೆ ಆಧಾರವಾಗಿರುವ ಕೃಷಿ ಉಪಕರಣಗಳು, ವಾಹನಗಳು, ಅಂಗಡಿ, ಕಚೇರಿ ಸೇರಿದಂತೆ ಇತರೆ ಉಪಕರಣಗಳನ್ನು ಹೂವಿನಿಂದ ಶೃಂಗರಿಸಿ ಪೂಜಿಸುವ ಉದ್ದೇಶದಿಂದ ಜನರು ಬೆಲೆ ಏರಿಕೆಯ ನಡುವೆಯೂ ವಸ್ತುಗಳ ಖರೀದಿಗೆ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು.ಬೂದು ಕುಂಬಳಕಾಯಿಗೆ ಎಲ್ಲೆಡೆ ಬೇಡಿಕೆ ಹೆಚ್ಚಿತು. ಸೇವಂತಿಗೆ, ಕನಕಾಂಬರ, ಚೆಂಡು ಹೂವುಗಳನ್ನು ಕೊಂಡುಕೊಳ್ಳುವಲ್ಲಿ ಗ್ರಾಹಕರು ನಿರತರಾದರು. ಮನೆ, ಅಂಗಡಿ ಮತ್ತು ವಾಹನಗಳ ಅಲಂಕಾರಕ್ಕಾಗಿ ಮಾವಿನ ಎಲೆ ಹಾಗೂ ಬಾಳೆ ಕಂಬಗಳ ಮಾರಾಟವೂ ಜೋರಾಗಿಯೇ ನಡೆಯಿತು. ಅಂಗಡಿಗಳನ್ನು ಸ್ವಚ್ಛಗೊಳಿಸುವ ದೃಶ್ಯ ಹಲವೆಡೆ ಕಂಡುಬಂತು.261020-40-971335613