ಶಿಗ್ಗಾವಿಯಲ್ಲಿ ದಸರಾ ಗೊಂಬೆಗಳ ವಿಶೇಷ ಪೂಜೆ
ಶಿಗ್ಗಾವಿ: ದಸರಾ ಹಬ್ಬ ಪ್ರಯುಕ್ತ ಗೊಂಬೆಗಳನ್ನು ಇಟ್ಟು, ಪೂಜಿಸಲಾಗುತ್ತಿದೆ. ತಾಲ್ಲೂಕಿನ ಬಂಕಾಪುರ ಪಟ್ಟಣದ ಶಿಕ್ಷಕಿ ಪದ್ಮಾ ಹಿರೇಮಠ ಅವರ ಮನೆಯಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚಿನ ದಸರಾ ಗೊಂಬೆಗಳನ್ನು ಇಟ್ಟು ವಿಶೇಷ ಪೂಜೆ ಮಾಡಲಾಗುತ್ತಿದೆ.ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಶಿಕ್ಷಕಿ ಪದ್ಮಾ ಹಿರೇಮಠ ಮಾತನಾಡಿ, ‘ನವರಾತ್ರಿ ಹಬ್ಬದ ಅಂಗವಾಗಿ ದಸರಾ ಗೊಂಬೆಗಳನ್ನು ಒಂಬ

ಶಿಗ್ಗಾವಿ: ದಸರಾ ಹಬ್ಬ ಪ್ರಯುಕ್ತ ಗೊಂಬೆಗಳನ್ನು ಇಟ್ಟು, ಪೂಜಿಸಲಾಗುತ್ತಿದೆ. ತಾಲ್ಲೂಕಿನ ಬಂಕಾಪುರ ಪಟ್ಟಣದ ಶಿಕ್ಷಕಿ ಪದ್ಮಾ ಹಿರೇಮಠ ಅವರ ಮನೆಯಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚಿನ ದಸರಾ ಗೊಂಬೆಗಳನ್ನು ಇಟ್ಟು ವಿಶೇಷ ಪೂಜೆ ಮಾಡಲಾಗುತ್ತಿದೆ.ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಶಿಕ್ಷಕಿ ಪದ್ಮಾ ಹಿರೇಮಠ ಮಾತನಾಡಿ, ‘ನವರಾತ್ರಿ ಹಬ್ಬದ ಅಂಗವಾಗಿ ದಸರಾ ಗೊಂಬೆಗಳನ್ನು ಒಂಬತ್ತು ದಿನಗಳ ವರೆಗೆ ಕೊರಿಸುವ ವಾಡಿಕೆಪರಂಪರಾಗತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಷ್ಟಲಕ್ಷ್ಮೀಯರು, ದಶಾವತಾರದ ಗೊಂಬೆಗಳು, ಜನಪದ ಗೀತೆ ಹೇಳುವ ಗೊಂಬೆಗಳು, ರಾಧಾಕೃಷ್ಣ, ಸೀತಾ ಕಲ್ಯಾಣದ ಜೋಡಿಗಳು,ಲವ, ಕುಶಲ, ಶ್ರೀನಿವಾಸ ಕಲ್ಯಾಣ, ಗುರು ಚರಿತ್ರೆ, ದೇವಿ ಮಹಾತ್ಮೆ, ಗಣಪ, ಶಿವಪಾರ್ವತಿ, ಚಾಮುಡೇಶ್ವರಿ, ಮೈಸಾಸೂರ, ವಿಷ್ಣುವಿನ ದಶಾವತಾರ, ವಿವಿಧ ಪಕ್ಷಿಗಳು, ಒಂಟಿ, ಆನೆ, ತರಕಾರಿ,ಹಣ್ಣುಗಳು ಸೇರಿದಂತೆ ನವದೇವಿಗಳನ್ನು ಕೊರಿಸಿ ಅಲಂಕಾರ ಮಾಡಲಾಗುತ್ತಿದೆ’ ಎಂದರು.‘ಗೊಂಬೆಗಳು ಮಹಾಭಾರತ, ರಾಮಾಯಣ ಮಹಾಕಾವ್ಯಗಳು, ವಿವಿಧರಾಜ ಅರಸು ಮನೆತನಗಳ ತ್ಯಾಗದ ಕೊಡುಗೆಗಳನ್ನು ಸ್ಮರಿಸುತ್ತಿವೆ. ಅಲ್ಲದೆ ವಿವಿಧ ಭಾರತೀಯ ಮಹತ್ವದ ಕಥೆಗಳನ್ನು ಪ್ರತಿಬಿಂಸುತ್ತಿವೆ. ಮಕ್ಕಳಿಗೆ ಅವುಗಳ ಬಗ್ಗೆ ಅರಿವು ಮೂಡಿಸುವ ಜತೆಗೆಭಾರತೀಯ ಪೌರಾಣಿಕ ಹಿನ್ನೆಲೆ, ಕಲೆ, ಸಂಪ್ರದಾಯ, ಸಂಸ್ಕಾರಗಳನ್ನು ತುಂಬುವ ಕಾರ್ಯ ನಡೆಯುತ್ತಿದೆ. ಅಲ್ಲದೆ ಜನ ಜೀವನವನ್ನು ದಸರಾ ಗೊಂಬೆಗಳು ಸಾರುತ್ತಿವೆ ಎಂದರು.ಕುಂಕುಮಾರ್ಚನೆ ಪಾಯಸ, ಸಿಹಿ ಪೊಂಗಲ್, ಕೋಸಂಬರಿ, ಕಡಲೆ ಉಸುಲಿ ಸೇರಿದಂತೆ ವಿವಿಧ ಪದಾರ್ಥಗಳ ನವೇದ್ಯಗಳೊಂದಿಗೆ ಗೊಂಬೆಗಳ ರೂಪದಲ್ಲಿರುವ ನವದೇವತೆಗಳಿಗೆ ವಿಶೇಷ ಪೂಜೆಸಲ್ಲಿಸಲಾಗುತ್ತಿದೆ. ನಂತರ ಪ್ರಸಾದ ವಿತರಣೆ ಮಾಡಲಾಗುತ್ತಿದೆ’ ಎಂದರು.ಸಿಂಧಗಿಮಠದ ಶಿವಾನಂದಸ್ವಾಮಿ ಹಿರೇಮಠ, ಗವಿಸಿದ್ದಯ್ಯಸ್ವಾಮಿ ಹಿರೇಮಠ, ಸುಬ್ಬಲಕ್ಷ್ಮಮ್ಮ, ಲಕ್ಮೀ ದೊಡ್ಡಮನಿ, ಶಿಲ್ಪಾ ದೊಡ್ಡಮನಿ, ವಿದ್ಯಾ ಕೆ, ಸೌಮ್ಯಾ ಕೆ, ಇಂದಿರಾ ನರಸಣ್ಣವರ, ಸುಮಾಪೂಜಾರ, ಪದ್ಮಾ ಪೂಜಾರ, ನಾಗಮ್ಮ ಕಮ್ಮಾರ, ಸಿಂಚನಾ,ಚೈತ್ರಾ, ಪರಿಷಿಕಾ, ಪ್ರೀಯಾಂಕಾ, ಖುಷಿ, ಅದವಿತಾ ಸಮೃದ್ಧಿ, ಮನ್ವಿತಾ, ಪುಣರ್ವಿ ಇದ್ದರು.261020-22-406428567