ದಸರಾ, ಆಯುಧ ಪೂಜೆ ಸಂಭ್ರಮ: ಕೆ.ಆರ್ ಮಾರ್ಕೆಟ್ನಲ್ಲಿ ಖರೀದಿ ಭರಾಟೆ ಜೋರು
– ಪೂಜಾ ಸಾಮಗ್ರಿ, ಹಣ್ಣು, ಹೂವುಗಳ ಬೆಲೆ ಏರಿಕೆ ಬೆಂಗಳೂರು: ದಸರಾ ಹಾಗೂ ಆಯುಧ ಪೂಜೆ ಹಿನ್ನೆಲೆ ಕೆ.ಆರ್ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದ್ದು, ಪೂಜಾ ಸಾಮಗ್ರಿ, ಹಣ್ಣು, ಹೂವುಗಳ ಬೆಲೆ ಏರಿಕೆಯಾಗಿದೆ. ನಿನ್ನೆಯಿಂದಲೇ ಕೆ.ಆರ್ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಹಣ್ಣು, ಹೂವು ಮತ್ತು ಪೂಜಾ ಸಾಮಾಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಇದನ್ನೂ ಓದಿ

– ಪೂಜಾ ಸಾಮಗ್ರಿ, ಹಣ್ಣು, ಹೂವುಗಳ ಬೆಲೆ ಏರಿಕೆ ಬೆಂಗಳೂರು: ದಸರಾ ಹಾಗೂ ಆಯುಧ ಪೂಜೆ ಹಿನ್ನೆಲೆ ಕೆ.ಆರ್ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದ್ದು, ಪೂಜಾ ಸಾಮಗ್ರಿ, ಹಣ್ಣು, ಹೂವುಗಳ ಬೆಲೆ ಏರಿಕೆಯಾಗಿದೆ. ನಿನ್ನೆಯಿಂದಲೇ ಕೆ.ಆರ್ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಹಣ್ಣು, ಹೂವು ಮತ್ತು ಪೂಜಾ ಸಾಮಾಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ದುಷ್ಟತನದ ವಿರುದ್ಧ ದೈವತ್ವದ ವಿಜಯ ಸಾರುವ ಹಬ್ಬ – ವಿಜಯದಶಮಿಯ ಪೌರಾಣಿಕ ಮಹತ್ವವೇನು? ಹೂವು, ಹಣ್ಣುಗಳ ಬೆಲೆ ಏರಿಕೆ: * ನಿಂಬೆಹಣ್ಣಿನ ಬೆಲೆ 8 ರೂ.-12 ರೂ.ಗೆ ಏರಿಕೆಯಾಗಿದೆ. * ಬೂದುಕುಂಬಳ ಕೆ.ಜಿ.ಗೆ 30 ರೂ.ಗೆ ಏರಿಕೆ * ಸೇವಂತಿ ಹೂವು ಕೆ.ಜಿ.ಗೆ 200 ರೂ. – 250 ರೂ.ಗೆ ಏರಿಕೆ * ಚೆಂಡು ಹೂವು ಕೆ.ಜಿ.ಗೆ 60 ರೂ.ಗೆ ಏರಿಕೆ * ಮಲ್ಲಿಗೆ ಮೊಗ್ಗು ಕೆ.ಜಿ.ಗೆ 500 ರೂ.ಗೆ ಏರಿಕೆ * ಸೇವಂತಿ ಹೂವಿನ ಒಂದು ಮಾರು 100 ರಿಂದ 150 ರೂ.ನಷ್ಟಿದೆ. * ಮಲ್ಲಿಗೆ ಹೂವು ಮೊಳಕ್ಕೆ 60 ರಿಂದ 80 ರೂ.ವರೆಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿರುವ ಕಾರಣ ಕೆ.ಆರ್. ಮಾರ್ಕೆಟ್ನಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.ಇದನ್ನೂ ಓದಿ: ಪಾಕಿಸ್ತಾನಕ್ಕೆ ನೀರಿನ ಬಿಕ್ಕಟ್ಟು – ಸಿಂಧೂ ಜಲ ಒಪ್ಪಂದ ವಿವಾದದ ನಡುವೆ ಗೋಧಿ ಬೆಳೆಗೂ ಸಂಕಷ್ಟ?