ಹಳಿಯಾಳ ತುಳಜಾಭವಾನಿ ಮಂದಿರದಲ್ಲಿ ನವಚಂಡಿ ಹವನ, ವಿಶೇಷ ಪೂಜೆ
ಹಳಿಯಾಳ: ಪಟ್ಟಣದ ತುಳಜಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸೋಮವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ನವಚಂಡಿ ಹವನ ನಡೆಯಿತು.ಬೆಳಿಗ್ಗೆ ಅಶ್ವೀಜ ಶುದ್ಧ ಅಷ್ಟಮಿ, ಪ್ರಾರ್ಥನೆ, ಗಣೇಶ ಪೂಜನ, ಪುಣ್ಯಾಹವಾಚನ, ದೇವನಾಂದಿ, ಕಲಶ ಸ್ಥಾಪನ, ದೇವತಾ ಆವಾಹನ, ಪೂಜನ, ನವಗ್ರಹ ಪುರಸ್ಸರ, ನವಚಂಡಿ ಹವನ, ಮಧ್ಯಾಹ್ನ ಪೂರ್ಣಾಹುತಿ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನ

ಹಳಿಯಾಳ: ಪಟ್ಟಣದ ತುಳಜಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸೋಮವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ನವಚಂಡಿ ಹವನ ನಡೆಯಿತು.ಬೆಳಿಗ್ಗೆ ಅಶ್ವೀಜ ಶುದ್ಧ ಅಷ್ಟಮಿ, ಪ್ರಾರ್ಥನೆ, ಗಣೇಶ ಪೂಜನ, ಪುಣ್ಯಾಹವಾಚನ, ದೇವನಾಂದಿ, ಕಲಶ ಸ್ಥಾಪನ, ದೇವತಾ ಆವಾಹನ, ಪೂಜನ, ನವಗ್ರಹ ಪುರಸ್ಸರ, ನವಚಂಡಿ ಹವನ, ಮಧ್ಯಾಹ್ನ ಪೂರ್ಣಾಹುತಿ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.ಪೂಜಾ ವಿಧಿ ವಿಧಾನಗಳಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್.ವಿ. ದೇಶಪಾಂಡೆ ಕುಟುಂಬ ಸಮೇತ ಪಾಲ್ಗೊಂಡಿದ್ದರು.ಅ.20ರಂದು ಅಶ್ವೀಜಶುದ್ಧ ದಶಮಿ ವಿಜಯದಶಮಿ ಕಾರ್ಯಕ್ರಮ ಶಮೀ ಪೂಜನ, ಮತ್ತು ಉಡಿ ತುಂಬುವುದು ದಸರಾ ಆಚರಣೆ ನಡೆಯಲಿದೆ.ದಾಂಡೇಲಿ: ನಗರದ ಶಿವ ಪ್ರತಿಷ್ಠಾನ ಹಿಂದುಸ್ತಾನ್ ವತಿಯಿಂದ 9 ದಿನ ನಡೆಯುವ ದುರ್ಗಾ ಮಾತಾ ದೌಡ್ ನ ಹಾಲಮಡ್ಡಿ ದಾಂಡೇಲಪ್ಪ ದೇವಸ್ಥಾನದಲ್ಲಿ ಸೋಮವಾರ ಮಹಾ ಮಂಗಳಾರತಿಯೊಂದಿಗೆ ದುರ್ಗಾದೌಡ್ ಕಾರ್ಯಕ್ರಮ ಸಂಪನ್ನಗೊಂಡಿತು..ದೌಡ್ ಸಮಿತಿ ಪ್ರಮುಖರಾದ ಕೃಷ್ಣಾ ಬೊಂಬಾಟಿ ಮಾತನಾಡಿ, ಸತತ ಒಂಬತ್ತು ದಿನಗಳ ಕಾಲ ಈ ದುರ್ಗಾದೌಡ್ ಹಿಂದೂ ಸೈನ್ಯದ ರೀತಿಯಲ್ಲಿ ನಡೆದಿರುವುದು ಹೆಮ್ಮೆಯ ವಿಷಯವಾಗಿದೆ.261020-20-1350599680