ಏಷ್ಯನ್ ಪ್ಯಾರಾ ಗೇಮ್ಸ್: ಭಾರತದಿಂದ ಚಿನ್ನದ ಬೇಟೆ, 35ಕ್ಕೆ ಏರಿದ ಪದಕಗಳ ಸಂಖ್ಯೆ
ನಾಗೋಯಾ: ಅನುಭವಿ ಕ್ರೀಡಾಪಟುಗಳಾದ ನಿಶಾದ್ ಕುಮಾರ್ ಮತ್ತು ದೀಪ್ತಿ ಜೀವನ್ಜಿ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಭಾರತವು ಮಂಗಳವಾರ ಏಷ್ಯನ್ ಪ್ಯಾರಾ ಗೇಮ್ಸ್ನ ಅಥ್ಲೆಟಿಕ್ಸ್ನಲ್ಲಿ ಐದು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದೆ.ಮಂಗಳವಾರ ಭಾರತ ಗೆದ್ದ ಎಲ್ಲ ಐದು ಚಿನ್ನದ ಪದಕಗಳು ಅಥ್ಲೆಟಿಕ್ಸ್ನಿಂದಲೇ ಲಭಿಸಿದ್ದು, ನಿಶಾದ್ ಕುಮಾರ್ ದಿನದ ತಾರೆಯಾಗಿ ಮಿಂಚಿದ

ನಾಗೋಯಾ: ಅನುಭವಿ ಕ್ರೀಡಾಪಟುಗಳಾದ ನಿಶಾದ್ ಕುಮಾರ್ ಮತ್ತು ದೀಪ್ತಿ ಜೀವನ್ಜಿ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಭಾರತವು ಮಂಗಳವಾರ ಏಷ್ಯನ್ ಪ್ಯಾರಾ ಗೇಮ್ಸ್ನ ಅಥ್ಲೆಟಿಕ್ಸ್ನಲ್ಲಿ ಐದು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದೆ.ಮಂಗಳವಾರ ಭಾರತ ಗೆದ್ದ ಎಲ್ಲ ಐದು ಚಿನ್ನದ ಪದಕಗಳು ಅಥ್ಲೆಟಿಕ್ಸ್ನಿಂದಲೇ ಲಭಿಸಿದ್ದು, ನಿಶಾದ್ ಕುಮಾರ್ ದಿನದ ತಾರೆಯಾಗಿ ಮಿಂಚಿದ್ದಾರೆ. ಸೋಮವಾರ ಟಿ47 ಲಾಂಗ್ ಜಂಪ್ನಲ್ಲಿ ಚಿನ್ನ ಗೆದ್ದಿದ್ದ ಅವರು, ಮಂಗಳವಾರ ಹೈಜಂಪ್ನಲ್ಲೂ (2.04 ಮೀ, ಕೂಟದ ದಾಖಲೆ) ಅಗ್ರಸ್ಥಾನಕ್ಕೇರುವ ಮೂಲಕ ಒಂದೇ ಪ್ಯಾರಾ ಏಷ್ಯಡ್ನಲ್ಲಿ ಎರಡು ಚಿನ್ನದ ಪದಕ ಗೆದ್ದ ಭಾರತದ ಮೂರನೇ ಅಥ್ಲೀಟ್ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಟ್ಟು ಪದಕಗಳ ಸಂಖ್ಯೆ 35ಕ್ಕೆ ಏರಿಕೆಎರಡನೇ ದಿನದ ಅಂತ್ಯಕ್ಕೆ ಭಾರತವು 9 ಚಿನ್ನ, 11 ಬೆಳ್ಳಿ ಹಾಗೂ 15 ಕಂಚು ಒಳಗೊಂಡಂತೆ ಒಟ್ಟು 35 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಪೈಕಿ 20 ಪದಕಗಳು ಅಥ್ಲೆಟಿಕ್ಸ್ನಿಂದಲೇ ಬಂದಿರುವುದು ವಿಶೇಷ.ಮಹಿಳೆಯರ 400 ಮೀಟರ್ಸ್ (ಟಿ20) ಓಟದಲ್ಲಿ ದೀಪ್ತಿ ಜೀವನ್ಜಿ 56.36 ಸೆಕೆಂಡುಗಳಲ್ಲಿ ಗುರಿ ತಲುಪಿ ಕೂಟದ ದಾಖಲೆಯೊಂದಿಗೆ ಸತತ ಎರಡನೇ ಬಾರಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 23 ವರ್ಷದ, ತೆಲಂಗಾಣದ ದೀಪ್ತಿ, ಮಾಜಿ ವಿಶ್ವ ಚಾಂಪಿಯನ್ ಆಗಿದ್ದು 2024ರ ಪ್ಯಾರಾಲಿಂಪಿಕ್ಸ್ನಲ್ಲಿ ಕಂಚು ಗೆದ್ದಿದ್ದರು.200 ಮೀಟರ್ಸ್ (ಟಿ12) ಓಟದಲ್ಲಿ ಸಿಮ್ರಾನ್ (24.80 ಸೆಕೆಂಡು-ಕೂಟದ ದಾಖಲೆ), ಡಿಸ್ಕಸ್ ಥ್ರೋನಲ್ಲಿ ಪ್ರಣವ್ ಸೂರ್ಮಾ (ಎಫ್51/52/53) ಮತ್ತು ದೇವೆಂದರ್ ಕುಮಾರ್ (ಎಫ್44/64) ಕೂಡ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ ಚೊಚ್ಚಲ ಬಾರಿಗೆ ಗೇಮ್ಸ್ನಲ್ಲಿ ಕಣಕ್ಕಿಳಿದ ತೇಜಲ್ಬೆನ್ ದಾಮೋರ್ (200 ಮೀ. ಟಿ12) ಕಂಚಿನ ಪದಕ ಪಡೆದರು.APG 2026 | Result | Para AthleticsDouble Medal for India ! Men’s Discus Throw F51/52/53 – FinalASIA RECORD SMASHED, INDIA RULES THE PODIUM! Pranav Soorma (TOPS) unleashes a GOLDEN throw of 11.66 m, setting a NEW ASIA RECORD! Ram Ratan Singh adds to the glory,… pic.twitter.com/Uz3GEP4lw7— SAI Media (@Media_SAI) October 20, 2026 ಶೂಟಿಂಗ್, ಪವರ್ಲಿಫ್ಟಿಂಗ್ನಲ್ಲಿ ಬೆಳ್ಳಿಪುರುಷರ 10 ಮೀಟರ್ ಏರ್ ಪಿಸ್ತೂಲ್ (ಎಸ್ಎಚ್1) ವಿಭಾಗದಲ್ಲಿ 233.7 ಪಾಯಿಂಟ್ಸ್ ಕಲೆಹಾಕಿದ ಮನೀಶ್ ನರ್ವಾಲ್ ಬೆಳ್ಳಿ ಗೆಲ್ಲುವ ಮೂಲಕ 2028ರ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಚೊಚ್ಚಲ ಬಾರಿ ಕಣಕ್ಕಿಳಿದ ಸೃಷ್ಟಿ ಅರೋರಾ ಕಂಚು ಗೆದ್ದಿದ್ದಾರೆ.ಪವರ್ಲಿಫ್ಟಿಂಗ್ನ ಪುರುಷರ 65 ಕೆ.ಜಿ. ವಿಭಾಗದಲ್ಲಿ ಅಶೋಕ್ ಕುಮಾರ್ ಮಲಿಕ್ (192 ಕೆ.ಜಿ. ಭಾರ ಎತ್ತುವ ಮೂಲಕ) ಬೆಳ್ಳಿ ಜಯಿಸಿದ್ದಾರೆ.ಟೇಬಲ್ ಟೆನಿಸ್, ಈಜಿನಲ್ಲಿ ಕಂಚಿನ ಪದಕ:ಈಜುಗಾರರಾದ ಹಿಮಾಂಶು ನಂದಲ್ (ಪುರುಷರ 400 ಮೀಟರ್ಸ್ ಫ್ರೀಸ್ಟೈಲ್ ಎಸ್11) ಮತ್ತು ಕನ್ನಡಿಗ ನಿರಂಜನ್ ಮುಕುಂದನ್ (ಪುರುಷರ 200 ಮೀ. ವೈಯಕ್ತಿಕ ಮೆಡ್ಲೆ ಎಸ್ಎಂ7) ಕಂಚಿನ ಪದಕ ಗೆದ್ದಿದ್ದಾರೆ. ಟೇಬಲ್ ಟೆನಿಸ್ನಲ್ಲಿ ರವಿ ಬೇಬಿ ಸಹಾನಾ, ಪ್ರಾಚಿ ಪಾಂಡೆ, ಭಾವಿನಾ ಪಟೇಲ್ ಮತ್ತು ಸೋನಲ್ಬೆನ್ ಪಟೇಲ್ ಸೆಮಿಫೈನಲ್ನಲ್ಲಿ ಮುಗ್ಗರಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. DOUBLE PODIUM. DOUBLE THE PRIDE! Pranav Soorma strikes GOLD with a NEW ASIA RECORD of 11.66m, while Ram Ratan Singh bags SILVER with 10.35m in Men’s Discus Throw F51/52/52 at #AsianParaGames2026! #TeamIndia #Cheer4Bharat #Praise4Para pic.twitter.com/RQQ3yqbnEp— SAI Media (@Media_SAI) October 20, 2026 ಆರ್ಚರಿ, ಬ್ಯಾಡ್ಮಿಂಟನ್ನಲ್ಲಿ ಪದಕಗಳ ಭರವಸೆಆರ್ಚರಿಯಲ್ಲಿ ಹಾಲಿ ಚಾಂಪಿಯನ್ ಶೀತಲ್ ದೇವಿ ಮತ್ತು ಗೇಮ್ಸ್ಗೆ ಪದಾರ್ಪಣೆ ಮಾಡಿರುವ ಸ್ವಾತಿ ಚೌಧರಿ ತಮ್ಮ ವೈಯಕ್ತಿಕ ವಿಭಾಗಗಳಲ್ಲಿ ಫೈನಲ್ ಪ್ರವೇಶಿಸಿ ಭಾರತಕ್ಕೆ ಕನಿಷ್ಠ ಐದು ಪದಕಗಳನ್ನು ಖಚಿತಪಡಿಸಿದ್ದಾರೆ. ಶೀತಲ್ (ಮಹಿಳೆಯರ ಕಾಂಪೌಂಡ್), ಸ್ವಾತಿ (ಡಬ್ಲ್ಯು1 ವಿಭಾಗ), ಶೀತಲ್–ಪಾಯಲ್ (ಕಾಂಪೌಂಡ್ ಮಹಿಳಾ ಡಬಲ್ಸ್), ಪೂಜಾ-ಭಾವನಾ (ರಿಕರ್ವ್ ಮಹಿಳಾ ಡಬಲ್ಸ್) ಮತ್ತು ಹರ್ವಿಂದರ್ ಸಿಂಗ್–ವಿಜಯ್ ಸುಂಡಿ (ರಿಕರ್ವ್ ಪುರುಷರ ಡಬಲ್ಸ್) ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.ಬ್ಯಾಡ್ಮಿಂಟನ್ನಲ್ಲಿ ವಿಶ್ವ ಚಾಂಪಿಯನ್ ಪ್ರಮೋದ್ ಭಗತ್ ಮತ್ತು ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಕುಮಾರ್ ನಿತೇಶ್ (ಪುರುಷರ ಸಿಂಗಲ್ಸ್ ಎಸ್ಎಲ್3) ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿಕೊಂಡಿದ್ದಾರೆ.INDIA OWNS THE PODIUM APG 2026 | Result | Para AthleticsMen’s Discus Throw F43/F44/F62/F64 – FinalA SPECTACULAR SHOWDOWN OF STRENGTH, SKILL & DETERMINATION! Devender Kumar clinched Gold with an impressive throw of 49.71m (781 points) (F44)! Rakesh secured… pic.twitter.com/RODtW9xqIQ— SAI Media (@Media_SAI) October 20, 2026