ಮಡಚುವ ಚಮಚ:ಶಾರ್ಕ್ ಟ್ಯಾಂಕ್ನಲ್ಲಿ ಭಾರತಮೂಲದ ಉದ್ಯಮಿಗೆ ಸಿಕ್ತು₹2.9ಕೋಟಿ ಹೂಡಿಕೆ
ಅಡುಗೆ ಮನೆಯಲ್ಲಿ ಪ್ರತಿಯೊಂದು ಪದಾರ್ಥಕ್ಕೂ ಬೇರೆ ಬೇರೆ ಅಳತೆಯ ಚಮಚಗಳನ್ನು ಬಳಸುವುದು ಸಾಮಾನ್ಯ. ಆದರೆ ಈ ಸಮಸ್ಯೆಗೆ ಸರಳ ಪರಿಹಾರ ಕಂಡುಕೊಂಡಿದ್ದಾರೆ ಭಾರತೀಯ ಮೂಲದ ಉದ್ಯಮಿ ರಾಹುಲ್ ಅಗರ್ವಾಲ್. ಆರು ವಿಭಿನ್ನ ಅಳತೆಗಳ ಕೆಲಸವನ್ನು ಕೇವಲ ಎರಡೇ ಚಮಚಗಳಲ್ಲಿ ಮಾಡಬಲ್ಲ 'ಪಾಲಿಗಾನ್ಸ್' ಎಂಬ ಮಡಚಬಹುದಾದ ಚಮಚವನ್ನು ಇವರು ಆವಿಷ್ಕರಿಸಿದ್ದಾರೆ.ಅಹಮದಾಬಾದ್ನ ಪ್ರತಿಷ್ಠಿತ 'ನ

ಅಡುಗೆ ಮನೆಯಲ್ಲಿ ಪ್ರತಿಯೊಂದು ಪದಾರ್ಥಕ್ಕೂ ಬೇರೆ ಬೇರೆ ಅಳತೆಯ ಚಮಚಗಳನ್ನು ಬಳಸುವುದು ಸಾಮಾನ್ಯ. ಆದರೆ ಈ ಸಮಸ್ಯೆಗೆ ಸರಳ ಪರಿಹಾರ ಕಂಡುಕೊಂಡಿದ್ದಾರೆ ಭಾರತೀಯ ಮೂಲದ ಉದ್ಯಮಿ ರಾಹುಲ್ ಅಗರ್ವಾಲ್. ಆರು ವಿಭಿನ್ನ ಅಳತೆಗಳ ಕೆಲಸವನ್ನು ಕೇವಲ ಎರಡೇ ಚಮಚಗಳಲ್ಲಿ ಮಾಡಬಲ್ಲ 'ಪಾಲಿಗಾನ್ಸ್' ಎಂಬ ಮಡಚಬಹುದಾದ ಚಮಚವನ್ನು ಇವರು ಆವಿಷ್ಕರಿಸಿದ್ದಾರೆ.ಅಹಮದಾಬಾದ್ನ ಪ್ರತಿಷ್ಠಿತ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್' (NID) ಹಳೆಯ ವಿದ್ಯಾರ್ಥಿಯಾಗಿರುವ ರಾಹುಲ್, 'ಪಾಲಿಗಾನ್ಸ್ ಡಿಸೈನ್' ಸಂಸ್ಥೆಯ ಸಂಸ್ಥಾಪಕರು. ಜಪಾನಿನ ಕಾಗದ ಮಡಚುವ 'ಒರಿಗಾಮಿ' ಕಲೆಯಿಂದ ಪ್ರೇರಣೆ ಪಡೆದು ಇವರು ಈ ಚಮಚವನ್ನು ರೂಪಿಸಿದ್ದಾರೆ.ಎರಡೇ ಚಮಚ, ಆರು ಅಳತೆದೊಡ್ಡ ಚಮಚ: 1/2 ಚಮಚ, 1 ಚಮಚ ಹಾಗೂ 2 ಚಮಚ (tablespoon) ಅಳತೆಗಳಿಗೆ ಮಡಚಿಕೊಳ್ಳುತ್ತದೆ.ಸಣ್ಣ ಚಮಚ: 1/4, 1/2 ಮತ್ತು 1 ಟೀಚಮಚದ (teaspoon) ಅಳತೆಗೆ ಸೂಕ್ತವಾಗಿದೆ.ದ್ರವ ಮತ್ತು ಒಣ ಪದಾರ್ಥಗಳೆರಡಕ್ಕೂ ಇದನ್ನು ಬಳಸಬಹುದು. ಬಳಸದಿರುವಾಗ ಇದು ಸಂಪೂರ್ಣವಾಗಿ ತೆಳುವಾಗಿ (ಫ್ಲಾಟ್) ಇರುವುದರಿಂದ ಜಾಗ ಉಳಿತಾಯವಾಗುತ್ತದೆ. ಹೀಗಾಗಿ ಬಳಕೆ ಹಾಗೂ ನಿರ್ವಹಣೆ ಸುಲಭ.ಇದನ್ನು ಆಹಾರ-ಸುರಕ್ಷಿತ ಥರ್ಮೋಪ್ಲಾಸ್ಟಿಕ್, ಸಿಲಿಕಾನ್ ಮತ್ತು ಸಣ್ಣ ಆಯಸ್ಕಾಂತಗಳನ್ನು ಬಳಸಿ ತಯಾರಿಸಲಾಗಿದೆ. View this post on Instagram ಶಾರ್ಕ್ ಟ್ಯಾಂಕ್ನಲ್ಲಿ ಯಶಸ್ಸುಅಮೆರಿಕದ ಪ್ರಸಿದ್ಧ 'ಶಾರ್ಕ್ ಟ್ಯಾಂಕ್ ಯುಎಸ್ಎ' ಸೀಸನ್ 18ರ 4ನೇ ಸಂಚಿಕೆಯಲ್ಲಿ ರಾಹುಲ್ ತಮ್ಮ ಈ ಆವಿಷ್ಕಾರವನ್ನು ಪ್ರಸ್ತುತಪಡಿಸಿದರು. ಪ್ರದರ್ಶನದಿಂದ ಪ್ರಭಾವಿತರಾದ ಹೂಡಿಕೆದಾರರಾದ ಲೋರಿ ಗ್ರೈನರ್ ಮತ್ತು ಮಿಂಡಿ ಕಾಲಿಂಗ್ ಇದನ್ನು 'ಬುದ್ಧಿವಂತಿಕೆಯ ವಿನ್ಯಾಸ' ಎಂದು ಮೆಚ್ಚಿಕೊಂಡರು.ರಾಹುಲ್ ತಮ್ಮ ಕಂಪನಿಯ ಶೇ 8 ಈಕ್ವಿಟಿ ಮತ್ತು ಶೇ 2 ಅಡ್ವೈಸರಿ ಷೇರುಗಳನ್ನು ನೀಡಿ, 350,000 ಡಾಲರ್ (ಸುಮಾರು ₹2.9 ಕೋಟಿ) ಹೂಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಒಪ್ಪಂದದೊಂದಿಗೆ ಅವರ 'ಪಾಲಿಗಾನ್ಸ್ ಡಿಸೈನ್' ಕಂಪನಿಯ ಒಟ್ಟು ಮೌಲ್ಯ ಈಗ ₹29 ಕೋಟಿಗೆ ತಲುಪಿದೆ.