ಪ್ರತಿಭಟನೆಗೆ ವಲಸೆಯೇ ಕಾರಣ: ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ;ಟ್ರಂಪ್
ವಾಷಿಂಗ್ಟನ್: ಫ್ರಾನ್ಸ್ನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಿಗೆ ದೇಶದ ವಲಸೆ ನೀತಿಯೇ ಮುಖ್ಯ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುರೋಪ್ ದೇಶಗಳು ತಮ್ಮ ಗಡಿಗಳನ್ನು ತಕ್ಷಣವೇ ಬಿಗಿಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.ವಾಷಿಂಗ್ಟನ್ನಲ್ಲಿ ಸ
ವಾಷಿಂಗ್ಟನ್: ಫ್ರಾನ್ಸ್ನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಿಗೆ ದೇಶದ ವಲಸೆ ನೀತಿಯೇ ಮುಖ್ಯ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುರೋಪ್ ದೇಶಗಳು ತಮ್ಮ ಗಡಿಗಳನ್ನು ತಕ್ಷಣವೇ ಬಿಗಿಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.ವಾಷಿಂಗ್ಟನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ʼಫ್ರಾನ್ಸ್ನಲ್ಲಿ ಪ್ರಸ್ತುತ ಸಂಭವಿಸುತ್ತಿರುವ ಘಟನೆಗಳಿಗೆ ವಲಸೆಯೇ ಕಾರಣ ಹೊರತು ಶಿಕ್ಷಣ ಅಥವಾ ಇತರ ವಿಷಯಗಳಲ್ಲ. ಗಡಿಗಳನ್ನು ಮುಚ್ಚುವಂತೆ ನಾನು ಮ್ಯಾಕ್ರನ್ ಅವರಿಗೆ ತಿಳಿಸಿದ್ದೇನೆʼ ಎಂದಿದ್ದಾರೆ.ವಿಜಯದಶಮಿ ಮೆರವಣಿಗೆಗೆ ತಯಾರಿ: ಅದ್ದೂರಿ ಜಂಬೂಸವಾರಿಗೆ ಕಾತರಕೊಲಂಬಿಯಾ: ಚಿನ್ನದ ಗಣಿ ಕುಸಿದು 14 ಮಂದಿ ಸಾವು, ಹಲವರಿಗೆ ಗಂಭೀರ ಗಾಯ ಬೆಲೆ ಏರಿಕೆಯನ್ನು ಖಂಡಿಸಿ ಪ್ಯಾರಿಸ್ ಸೇರಿದಂತೆ ಫ್ರಾನ್ಸ್ನ ವಿವಿಧ ನಗರಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದು, ಇದು ಹಿಂಸಾಚಾರಕ್ಕೆ ತಿರುಗಿದೆ.ಮ್ಯಾಕ್ರನ್ ಅವರೊಂದಿಗಿನ ಹಿಂದಿನ ಸಂಭಾಷಣೆಯನ್ನು ನೆನಪಿಸಿಕೊಂಡ ಟ್ರಂಪ್, ʼನೀವು ಜಗತ್ತಿನ ಪ್ರತಿಯೊಬ್ಬರಿಗೂ ಒಳಬರಲು ಅವಕಾಶ ನೀಡುವ ಮೂಲಕ ದೊಡ್ಡ ತಪ್ಪು ಮಾಡುತ್ತಿದ್ದೀರಿ. ಹೀಗೆಯೇ ಮುಂದುವರಿದರೆ ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ ಎಂದು ನಾನು ಬಹಳ ಹಿಂದೆಯೇ ಮ್ಯಾಕ್ರನ್ ಅವರಿಗೆ ಹೇಳಿದ್ದೆʼ ಎಂದು ತಿಳಿಸಿದರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.ʼಗಡಿಗಳನ್ನು ಮುಚ್ಚದಿದ್ದರೆ ಮತ್ತು ಪ್ರತಿಭಟನೆ ನಡೆಸಿ ಹಿಂಸಾಚಾರದಲ್ಲಿ ತೊಡಗಿರುವ ಅಪರಾಧಿಗಳನ್ನು ಹೊರಹಾಕದಿದ್ದರೆ, ಯುರೋಪ್ನ ಭವಿಷ್ಯ ಅಂತ್ಯಗೊಳ್ಳಲಿದೆʼ ಎಂದೂ ಟ್ರಂಪ್ ಎಚ್ಚರಿಸಿದ್ದಾರೆ.ಮೈಸೂರು ಕಂಬಳ: ವಿಜೇತರಿಗೆ ಬಹುಮಾನ ವಿತರಣೆವಿಡಿಯೊ: 2028ಕ್ಕೆ ಸಿ.ಎಂ. ಆಗ್ತಾರಾ ಕುಮಾರಸ್ವಾಮಿ ?