ಭಾರತಕ್ಕೆ ಆಗಮಿಸಿದ ಮಾರ್ಕೊ ರುಬಿಯೊ: ವಾಣಿಜ್ಯ ಒಪ್ಪಂದ, ಇಂಧನ ವಲಯದತ್ತ ಚಿತ್ತ
ಮುಂಬೈ/ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮಂಗಳವಾರದಿಂದ ತಮ್ಮ ಮೂರು ದಿನಗಳ ಭಾರತ ಪ್ರವಾಸವನ್ನು ಆರಂಭಿಸಿದ್ದಾರೆ.ರುಬಿಯೊ ಅವರು ಇಂದು (ಮಂಗಳವಾರ) ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ರುಬಿಯೊ ಅವರ ಭಾರತ ಭೇಟಿಯ ವೇಳೆ ಇಂಧನ, ವಾಣಿಜ್ಯ, ಹೂಡಿಕೆ, ರಕ್ಷಣೆ, ತಂತ್ರಜ್ಞಾನ ಕ್ಷ

ಮುಂಬೈ/ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮಂಗಳವಾರದಿಂದ ತಮ್ಮ ಮೂರು ದಿನಗಳ ಭಾರತ ಪ್ರವಾಸವನ್ನು ಆರಂಭಿಸಿದ್ದಾರೆ.ರುಬಿಯೊ ಅವರು ಇಂದು (ಮಂಗಳವಾರ) ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ರುಬಿಯೊ ಅವರ ಭಾರತ ಭೇಟಿಯ ವೇಳೆ ಇಂಧನ, ವಾಣಿಜ್ಯ, ಹೂಡಿಕೆ, ರಕ್ಷಣೆ, ತಂತ್ರಜ್ಞಾನ ಕ್ಷೇತ್ರ, ಪಶ್ಚಿಮ ಏಷ್ಯಾ ಬಿಕ್ಕಟ್ಟು ಸೇರಿದಂತೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಒತ್ತು ನೀಡಲಾಗಿದೆ. ಭಾರತ ಹಾಗೂ ಅಮೆರಿಕ ನಡುವಣ ದ್ವಿಪಕ್ಷೀಯ ಬಾಂಧವ್ಯದಲ್ಲಿ ಸ್ವಲ್ಪ ಬಿರುಕು ಮೂಡಿರುವ ಮಧ್ಯೆಯೇ ರುಬಿಯೊ ಪ್ರಸಕ್ತ ಸಾಲಿನಲ್ಲಿ ಎರಡನೇ ಸಲ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ ಮೇ ತಿಂಗಳಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಅಲ್ಲದೆ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲೂ ಪಾಲ್ಗೊಂಡಿದ್ದರು.VIDEO | Maharashtra: US Secretary of State Marco Rubio arrives at Mumbai airport.Source: AFP/PTI (Only to use in India)(Full video available on PTI Videos - https://t.co/d8jp61yd2p) pic.twitter.com/eDcQuwuv1Q— Press Trust of India (@PTI_News) October 20, 2026 ಬೃಹತ್ ವಾಣಿಜ್ಯ ನಿಯೋಗದೊಂದಿಗೆ ಆಗಮಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯವರ ಈ ಭೇಟಿಯು, ಭಾರತ-ಅಮೆರಿಕ ಆರ್ಥಿಕ ಒಪ್ಪಂದಗಳಿಗೆ ಒತ್ತು ನೀಡುವ ಸಾಧ್ಯತೆಯಿದೆ.ಇಂದು (ಮಂಗಳವಾರ) ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ, ಜೈಶಂಕರ್ ಮತ್ತು ರುಬಿಯೊ ಅವರು ಭಾರತ-ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸುವ ನಿರೀಕ್ಷೆಯಿದೆ.ತಮ್ಮ ಭೇಟಿಗೂ ಮುನ್ನ ಉಜ್ಬೇಕಿಸ್ತಾನದಲ್ಲಿ ಮಾತನಾಡಿದ್ದ ರುಬಿಯೊ, ಅಮೆರಿಕವು ಭಾರತದೊಂದಿಗಿನ ವಾಣಿಜ್ಯ ಒಪ್ಪಂದವನ್ನು ಅಂತಿಮಗೊಳಿಸುವ 'ಸನಿಹದಲ್ಲಿದೆ' ಎಂದಿದ್ದರು. #WATCH | Mumbai, Maharashtra: On his India visit, US Secretary of State Marco Rubio says, "... As far as the trade agreement is concerned, the State Department doesn't negotiate trade agreements, but we are very much involved in what's happening. My counterpart, the National… pic.twitter.com/Nx0yvuD2tE— ANI (@ANI) October 20, 2026 ASEAN Summit: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಜೊತೆ ಜೈಶಂಕರ್ ಚರ್ಚೆಮುಂದಿನ ವಾರ ಝೆಲೆನ್ಸ್ಕಿ ಜೊತೆ ಟ್ರಂಪ್ ಮಾತುಕತೆ: ಮಾರ್ಕೊ ರುಬಿಯೊ