ಮಡಿಕೇರಿ: ‘ಬೆಳಕಿನ ದಸರೆ’ ವಿಜೃಂಭಣೆಯಿಂದ ಆರಂಭ
ಮಡಿಕೇರಿ: ನಗರದಲ್ಲಿ ಬುಧವಾರ ರಾತ್ರಿ ‘ಬೆಳಕಿನ ದಸರೆ’ ವಿಜೃಂಭಣೆಯಿಂದ ಆರಂಭವಾಯಿತು.ಕೆಲವೆಡೆ ಹಗುರ ಮಳೆಯಾಗುತ್ತಿದ್ದು, ಆತಂಕ ಮೂಡಿಸಿದೆ. ನಗರದ ಟಿ.ಜಾನ್ ಬಡಾವಣೆ, ಓಂಕಾರೇಶ್ವರ ದೇಗುಲದ ಸುತ್ತಮುತ್ತ ವಿದ್ಯುತ್ ವ್ಯತ್ಯಯಗೊಂಡಿದೆ. ಅಪಾರ ಸಂಖ್ಯೆಯ ಜನರು ಈಗಾಗಲೇ ನಗರಕ್ಕೆ ಬಂದಿದ್ದಾರೆ. ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಸುಮಾರು 160ಕ್ಕೂ ಅಧಿಕ ವರ್ಷಗಳ ಇತಿ

ಮಡಿಕೇರಿ: ನಗರದಲ್ಲಿ ಬುಧವಾರ ರಾತ್ರಿ ‘ಬೆಳಕಿನ ದಸರೆ’ ವಿಜೃಂಭಣೆಯಿಂದ ಆರಂಭವಾಯಿತು.ಕೆಲವೆಡೆ ಹಗುರ ಮಳೆಯಾಗುತ್ತಿದ್ದು, ಆತಂಕ ಮೂಡಿಸಿದೆ. ನಗರದ ಟಿ.ಜಾನ್ ಬಡಾವಣೆ, ಓಂಕಾರೇಶ್ವರ ದೇಗುಲದ ಸುತ್ತಮುತ್ತ ವಿದ್ಯುತ್ ವ್ಯತ್ಯಯಗೊಂಡಿದೆ. ಅಪಾರ ಸಂಖ್ಯೆಯ ಜನರು ಈಗಾಗಲೇ ನಗರಕ್ಕೆ ಬಂದಿದ್ದಾರೆ. ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಸುಮಾರು 160ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಪೇಟೆ ಶ್ರೀರಾಮಮಂದಿರವು ‘ಶ್ರೀಲಕ್ಷ್ಮೀ ನರಸಿಂಹ ದರ್ಶನ’ ಮಂಟಪವನ್ನು ಈಗಾಗಲೇ ಜನತಾ ಬಜಾರ್ ಮುಂಭಾಗ ಪ್ರದರ್ಶಿಸಿವೆ.ಉಳಿದಂತೆ, 108ನೇ ವರ್ಷದಲ್ಲಿ ಶೋಭಾಯಾತ್ರೆಯಲ್ಲಿ ಭಾಗಿಯಾಗುತ್ತಿರುವ ದೇಚೂರು ಶ್ರೀರಾಮಮಂದಿರವು ‘ಶತಮಹಿಷಿ’ ಕಥಾಪ್ರಸಂಗವನ್ನು, 96ನೇ ವರ್ಷದಲ್ಲಿ ಮಂಪಟ ಹೊರಡಿಸುತ್ತಿರುವ ದಂಡಿನ ಮಾರಿಯಮ್ಮ ಮಂಟಪ ಸಮಿತಿಯು ‘ಮಹಾಕಾಮೇಶ್ವರಾಸ್ತ್ರದಿಂದ ಲಲಿತಾಂಬಿಕೆಯಿಂದ ಭಂಡಾಸುರನ ವಧೆ’ ಕಥಾ ಪ್ರಸಂಗವನ್ನು, 64ನೇ ವರ್ಷದಲ್ಲಿ ಚೌಡೇಶ್ವರಿ ದೇಗುಲವು ‘ಗಣಪತಿಗೆ ಗಜಮುಖ ಪ್ರಾಪ್ತಿ ಮತ್ತು ಗಣಪತಿಯಿಂದ ಗಜಾಸುರನ ವಧಾಖ್ಯಾನ’ವನ್ನು, 63ನೇ ವರ್ಷದ ಪ್ರದರ್ಶನಲ್ಲಿ ಕಂಚಿ ಕಾಮಾಕ್ಷಮ್ಮ, ಮುತ್ತುಮಾರಿಯಮ್ಮ ಬಾಲಕ ಮಂಡಳಿಯು ಕಾರ್ತಿಕೇಯ ಮತ್ತು ಸೂರಪದ್ಮನ ಮಹಾಸಂಗ್ರಾಮವನ್ನು, 53ನೇ ವರ್ಷದಲ್ಲಿ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿಯು ‘ಮಣಿಕಂಠನಿಂದ ಮಹಿಷಿಯ ಸಂಹಾರ’ವನ್ನು, 52ನೇ ವರ್ಷದಲ್ಲಿ ಕೋದಂಡರಾಮ ಮಂದಿರವು ರಾಮಕಥಾಮೃತವನ್ನು, 51ನೇ ವರ್ಷದಲ್ಲಿ ಕೋಟೆ ಮಾರಿಯಮ್ಮ ದೇಗುಲವು ‘ಧೂಮ್ರಕೇತು ಗಣಪತಿಯಿಂದ ಧೂಮ್ರಾಕ್ಷಾಸುರ ಸಂಹಾರ’ವನ್ನು, 50ನೇ ವರ್ಷದ ಸಂಭ್ರಮದಲ್ಲಿರುವ ಕೋಟೆ ಮಹಾಗಣಪತಿಯು ‘ಮಹಾಗಣಪತಿಯಿಂದ ಶಿವಾಂಶ ಕ್ರೋಧಾಸುರನ ಸಂಹಾರ’ವನ್ನು, 31ನೇ ವರ್ಷದಲ್ಲಿ ಕರವಲೆ ಭಗವತಿ ಸಮಿತಿಯು ಶ್ರೀಕೃಷ್ಣನ ಬಾಲಲೀಲೆ, ರಾಕ್ಷಸರ ಸಂಹಾರ, ಕಾಳಿಂಗ ಮರ್ಧನವನ್ನು ಪ್ರದರ್ಶಿಸಲು ಅಣಿಯಾಗಿವೆ.