ದೆಹಲಿ ಪೊಲೀಸ್ ಅಪರಾಧ ಎಸಗಿದ್ದಾರೆ: CJPಯ ಪ್ರಶ್ನಿಸುವ ಹಕ್ಕಿಗೆ ಅಣ್ಣಾಮಲೈ ಬೆಂಬಲ
ಚೆನ್ನೈ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರು ಎತ್ತಿರುವ ಪ್ರಶ್ನೆಗಳು ಸಮಂಜಸವಾಗಿವೆ ಎಂದು ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಪ್ರತಿಪಾದಿಸಿದ್ದಾರೆ. ಕೊಯಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‘ವೀ ದಿ ಲೀಡರ್ಸ್’ ಚಳವಳಿಯ ಸಂಸ್ಥಾಪಕ ಅಣ್ಣಾಮ

ಚೆನ್ನೈ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರು ಎತ್ತಿರುವ ಪ್ರಶ್ನೆಗಳು ಸಮಂಜಸವಾಗಿವೆ ಎಂದು ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಪ್ರತಿಪಾದಿಸಿದ್ದಾರೆ. ಕೊಯಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‘ವೀ ದಿ ಲೀಡರ್ಸ್’ ಚಳವಳಿಯ ಸಂಸ್ಥಾಪಕ ಅಣ್ಣಾಮಲೈ, ‘ದೆಹಲಿ ಪೊಲೀಸರು ಸಿಜೆಪಿ ನಾಯಕರನ್ನು ಬಂಧಿಸಿ, ಅವರ ವಿರುದ್ಧ ಕೈಗೊಂಡಿರುವ ಕ್ರಮಗಳು ಸರಿಯಲ್ಲ. ಇದು ನಿಜಕ್ಕೂ ಅಪರಾಧದಂತಹ ಕೆಲಸ’ ಎಂದಿದ್ದಾರೆ.ಸರ್ಕಾರ ಅಥವಾ ವ್ಯವಸ್ಥೆ ವಿರುದ್ಧ ಪ್ರಶ್ನೆಗಳನ್ನು ಎತ್ತುವ ಸಿಜೆಪಿಯ ಪ್ರಜಾಸತ್ತಾತ್ಮಕ ಹಕ್ಕನ್ನು ಅಣ್ಣಾಮಲೈ ಸಮರ್ಥಿಸಿಕೊಂಡಿದ್ದಾರೆ. ಆದರೆ, ಅವರು (ಸಿಜೆಪಿ) ಅನುಸರಿಸುವ ತಂತ್ರಗಳು ಅಥವಾ ಪ್ರತಿಭಟನಾ ವಿಧಾನಗಳನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.ಸಿಜೆಪಿ ನಾಯಕರ ನಡವಳಿಕೆ ಅಥವಾ ಪ್ರತಿಭಟನಾ ವಿಧಾನವನ್ನು ನಾನು ಒಪ್ಪದಿರಬಹುದು. ಆದರೆ, ಅವರು ಎತ್ತಲು ಬಯಸುವ ಪ್ರಶ್ನೆಗಳ ವಿಷಯದಲ್ಲಿ ಸಿಜೆಪಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ನಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸುವುದರಿಂದ ಅವರು ಇನ್ನಷ್ಟು ಬಲಶಾಲಿಯಾಗುತ್ತಾರೆ ಎಂದಿದ್ದಾರೆ.ಪ್ರತಿಭಟನಾಕಾರರನ್ನು ಜೈಲಿಗೆ ಹಾಕುವುದರಿಂದ ಮೂಲ ಸಮಸ್ಯೆಗಳು ಬಗೆಹರಿಯುವುದಿಲ್ಲ. ಬದಲಾಗಿ ಬಂಧನಕ್ಕೊಳಗಾದ ನಾಯಕರ ವರ್ಚಸ್ಸು ಹೆಚ್ಚಾಗುತ್ತದೆ ಎಂದಿರುವ ಅಣ್ಣಾಮಲೈ, ಪೊಲೀಸರ ಕಠಿಣ ಕ್ರಮಗಳು ರಾಜಕೀಯವಾಗಿ ತಿರುಗುಬಾಣವಾಗಬಹುದು ಎಂದೂ ಎಚ್ಚರಿಸಿದ್ದಾರೆ. ಪ್ರತಿಭಟನಾಕಾರರನ್ನು ಬಂಧಿಸುವ ಬದಲು, ಅವರು ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರಿಸುವತ್ತ ಅಧಿಕಾರಿಗಳು ಗಮನಹರಿಸಬೇಕು ಎಂದು ಅಣ್ಣಾಮಲೈ ಒತ್ತಾಯಿಸಿದ್ದಾರೆ.ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಎಸ್ಐಆರ್ ಬಗ್ಗೆ ಪ್ರಶ್ನಿಸುವ ಸಂಪೂರ್ಣ ಹಕ್ಕಿದೆ. ಆದರೆ, ಇದರಿಂದ ವ್ಯವಸ್ಥೆಗೆ ಯಾವುದೇ ಹಾನಿಯಾಗಬಾರದು ಎಂದಿದ್ದಾರೆ.