ಮೆಕ್ಕಾಗೆ ತೆರಳಿದ್ದ ಶಿಕ್ಷಕಿ ಸಾವು
ಹರಪನಹಳ್ಳಿ (ವಿಜಯನಗರ ಜಿಲ್ಲೆ): ನಗರದ 9ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದ ನಗೀನಾಬಾನು(45) ಅನಾರೋಗ್ಯದಿಂದ ಮೆಕ್ಕಾದಲ್ಲಿ ನಿಧನರಾಗಿದ್ದಾರೆ.ದಸರಾ ರಜೆ ಹಿನ್ನೆಲೆಯಲ್ಲಿ ತವರೂರಿ ದಾವಣಗೆರೆ ಜಿಲ್ಲೆ ನಲ್ಲೂರಿನ ತಮ್ಮ ತವರೂರಿಗೆ ತೆರಳಿದ್ದ ನಗೀನಾಬಾನು ಕುಟುಂಬದವರೊಂದಿಗೆ ಮೆಕ್ಕಾಗೆ ಉಮ್ರಾ ಯಾತ್ರೆಯನ್ನು ಅಕ್ಟೊಬರ್ 3 ರಂದು ಕೈಗೊಂಡಿದ್ದರ
ಹರಪನಹಳ್ಳಿ (ವಿಜಯನಗರ ಜಿಲ್ಲೆ): ನಗರದ 9ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದ ನಗೀನಾಬಾನು(45) ಅನಾರೋಗ್ಯದಿಂದ ಮೆಕ್ಕಾದಲ್ಲಿ ನಿಧನರಾಗಿದ್ದಾರೆ.ದಸರಾ ರಜೆ ಹಿನ್ನೆಲೆಯಲ್ಲಿ ತವರೂರಿ ದಾವಣಗೆರೆ ಜಿಲ್ಲೆ ನಲ್ಲೂರಿನ ತಮ್ಮ ತವರೂರಿಗೆ ತೆರಳಿದ್ದ ನಗೀನಾಬಾನು ಕುಟುಂಬದವರೊಂದಿಗೆ ಮೆಕ್ಕಾಗೆ ಉಮ್ರಾ ಯಾತ್ರೆಯನ್ನು ಅಕ್ಟೊಬರ್ 3 ರಂದು ಕೈಗೊಂಡಿದ್ದರು. ಮೆಕ್ಕಾ ತಲುಪಿದಾಗ ಅನಾರೋಗ್ಯ ಉಂಟಾಗಿ ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಬುಧವಾರ ನಿಧನರಾದರು. ಅಂತಿಮ ಸಂಸ್ಕಾರವನ್ನು ಮೆಕ್ಕಾದಲ್ಲಿಯೇ ನೆರವೇರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಶಿಕ್ಷಕ ದಂಪತಿಯಾದ ಅತಾವುಲ್ಲಾ ಮತ್ತು ನಗೀನಾಬಾನು ಅವರು ಆಚಾರ್ಯ ಬಡಾವಣೆಯಲ್ಲಿ ವಾಸವಾಗಿದ್ದರು. ಪತಿ ಅತಾವುಲ್ಲಾ ಅವರು ಬಾಣಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಮೆನ್ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.
Read the complete story at Prajavani