ಪೊಲೀಸ್ ಇಲಾಖೆ ಅವ್ರ ಮನೆ ಆಳಾ? – RSS ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಬೆಂಗಳೂರು: ಪೊಲೀಸ್ ಇಲಾಖೆ ಅವರ ಮನೆ ಆಳು ಏನ್ರಿ? ಮಾಹಿತಿ ಕೊಟ್ಟಿದ್ದೇವೆ, ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಅನ್ನೋದಲ್ಲ ಎಂದು ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ. ಮಾಧ್ಯಮದವರೊಂದಿಗೆ ಆರ್ಎಸ್ಎಸ್ಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿ, ನಾವು ಕೇಳಿರೋದರಲ್ಲಿ ತಪ್ಪೇನಿದೆ? ಏನಾದರೂ ಲೋಪ ಇದ್ರೆ ನಾವು ತಿದ್ದಿಕೊಳ್ಳುತ್ತೇವೆ. ಬಹಳಷ್ಟು ಕಡೆ ಆರ್ಎ

ಬೆಂಗಳೂರು: ಪೊಲೀಸ್ ಇಲಾಖೆ ಅವರ ಮನೆ ಆಳು ಏನ್ರಿ? ಮಾಹಿತಿ ಕೊಟ್ಟಿದ್ದೇವೆ, ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಅನ್ನೋದಲ್ಲ ಎಂದು ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ. ಮಾಧ್ಯಮದವರೊಂದಿಗೆ ಆರ್ಎಸ್ಎಸ್ಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿ, ನಾವು ಕೇಳಿರೋದರಲ್ಲಿ ತಪ್ಪೇನಿದೆ? ಏನಾದರೂ ಲೋಪ ಇದ್ರೆ ನಾವು ತಿದ್ದಿಕೊಳ್ಳುತ್ತೇವೆ. ಬಹಳಷ್ಟು ಕಡೆ ಆರ್ಎಸ್ಎಸ್ ಪಥಸಂಚಲದ ಬಗ್ಗೆ ಮಾಹಿತಿಗಾಗಿ ಅಂತ ಕೊಡ್ತಾ ಇದ್ದಾರೆ. ಮಾಹಿತಿಗಾಗಿ ಬೇಡ, ದಯವಿಟ್ಟು ಅನುಮತಿಗಾಗಿ ಅಂತ ಕೇಳಿ, ನಾವು ಮಾಡುತ್ತೇವೆ. ಅನುಮತಿ ಕೇಳಲಿ. ಅದರಲ್ಲಿ ಮಾಹಿತಿಗಾಗಿ ಅಂತ ಬರೆದಿದೆ, ಪೊಲೀಸ್ ಇಲಾಖೆ ಅವರ ಮನೆ ಆಳು ಏನ್ರಿ? ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಮೆರಿಕ-ಪಾಕಿಸ್ತಾನ ಸಂಬಂಧ ಎಂದಿಗೂ ಭಾರತದ ಹಿತಾಸಕ್ತಿಗೆ ಧಕ್ಕೆ ತರಲ್ಲ: ರುಬಿಯೊ ಸ್ಪಷ್ಟನೆ ಮಾಹಿತಿ ಕೊಟ್ಟಿದ್ದೇವೆ. ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳೋದಲ್ಲ. ಬಹಳ ಜನ ಹಬ್ಬದ ಆಚರಣೆ ಮಾಡುತ್ತಿದ್ದಾರೆ. ನೀವು ಅನುಮತಿ ಕೇಳಿ, ಸೂಕ್ತ ಅನಿಸಿದ್ರೆ ಭದ್ರತೆ ಕೊಡ್ತೀವಿ. ಗಣಪತಿ ಹಬ್ಬ, ಮನೆ ಕಾರ್ಯಕ್ರಮ ಅಂತ ಅನುಮತಿ ಕೇಳ್ತೀರಾ ಅಲ್ವಾ? ನಿಮಗೆ ಏನು ಕಾನೂನು ಅನ್ವಯಿಸುತ್ತದೆ, ಅದೇ ಆರ್ಎಸ್ಎಸ್ಗೂ ಕೂಡ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಪುಲಿಕೇಶಿ ನಗರದ ಮನೆಯಲ್ಲಿ ಅನುಮಾಸ್ಪದ ವಸ್ತು ಸ್ಫೋಟ ಪ್ರಕರಣ ಬಗ್ಗೆ ಮಾತನಾಡಿ, ಮನೆಯಲ್ಲಿ ಸ್ಫೋಟವಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಏನು ಆಗಿದೆ ಅನ್ನೋದರ ಬಗ್ಗೆ ಮಾಹಿತಿ ಮಧ್ಯಾಹ್ನದ ಬಳಿಕ ಸಿಗುತ್ತೆ. ಸ್ಫೋಟವಾಗಿರುವ ವಸ್ತುಗಳನ್ನ ಎಫ್ಎಸ್ಎಲ್ಗೆ ಕಳಿಸಿಕೊಡಲಾಗಿದೆ. ತನಿಖೆಯ ಬಳಿಕ ಸ್ಫೋಟದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸುತ್ತೂರು ಮಠಕ್ಕೆ ಸಿಎಂ ಡಿಕೆಶಿ – ತಾಯಿ ಚಾಮುಂಡಿಗೆ ವಿಶೇಷ ಪೂಜೆ