ಚೆನ್ನೈ: ಸೈಬರ್ ಕಿರುಕುಳದಿಂದ ಕಂಟೆಂಟ್ ಕ್ರಿಯೇಟರ್ ಆತ್ಮಹತ್ಯೆ
ಚೆನ್ನೈ: ಚೆನ್ನೈನ ಮುಟ್ಟುಕಡುವಿನಲ್ಲಿ ಹಣಕಾಸು ವಿಚಾರಗಳಿಗೆ ಸಂಬಂಧಿಸಿದ ಕಂಟೆಂಟ್ ಕ್ರಿಯೇಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಸೈಬರ್ ಕಿರುಕುಳವೇ ಅವರ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ.ಆತ್ಮಹತ್ಯೆ ಮಾಡಿಕೊಂಡಿರುವ ವಿ.ಹರೀಶ್, ‘ಫೈನಾನ್ಸ್ ವಿಥ್ ಹರೀಶ್’ ಎಂಬ ಹೆಸರಿನ ಜನಪ್ರಿಯ ಚಾನೆಲ್ ಹೊಂದಿದ್ದರು ಹಾಗೂ ಹಣಕಾಸು ಮತ್ತು ಹೂಡಿಕೆಯ ಬಗ್ಗೆ ವಿಡಿಯೊ ಮಾ

ಚೆನ್ನೈ: ಚೆನ್ನೈನ ಮುಟ್ಟುಕಡುವಿನಲ್ಲಿ ಹಣಕಾಸು ವಿಚಾರಗಳಿಗೆ ಸಂಬಂಧಿಸಿದ ಕಂಟೆಂಟ್ ಕ್ರಿಯೇಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಸೈಬರ್ ಕಿರುಕುಳವೇ ಅವರ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ.ಆತ್ಮಹತ್ಯೆ ಮಾಡಿಕೊಂಡಿರುವ ವಿ.ಹರೀಶ್, ‘ಫೈನಾನ್ಸ್ ವಿಥ್ ಹರೀಶ್’ ಎಂಬ ಹೆಸರಿನ ಜನಪ್ರಿಯ ಚಾನೆಲ್ ಹೊಂದಿದ್ದರು ಹಾಗೂ ಹಣಕಾಸು ಮತ್ತು ಹೂಡಿಕೆಯ ಬಗ್ಗೆ ವಿಡಿಯೊ ಮಾಡುತ್ತಿದ್ದ ಅವರು ಇನ್ಸ್ಟಾಗ್ರಾಂ ಮತ್ತು ಯುಟ್ಯೂಬ್ನಲ್ಲಿ 13 ಲಕ್ಷ ಫಾಲೋವರ್ಸ್ ಹೊಂದಿದ್ದರು. ಹರೀಶ್ ತಂದೆ ವಿನಯಗಂ ಅವರು ಯುಟ್ಯೂಬರ್ ಮತ್ತು ಝೆಮುರಿಯಾ ಇಂಕ್.ಸಿಇಒ ಜೇಸನ್ ಸಾಮುಯೆಲ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.‘ಸಾಮುಯೆಲ್ ಅವರು ಅಕ್ಟೋಬರ್ 18ರಂದು ವಿಡಿಯೊ ಪೋಸ್ಟ್ ಮಾಡಿದ್ದು, ಅದರಲ್ಲಿ, ಭಾರತೀಯ ಷೇರುಪೇಟೆ ಮಂಡಳಿ(ಸೆಬಿ) ಮತ್ತು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ(ಎಎಂಎಫ್ಐ)ಕ್ಕೆ ಸಂಬಂಧಿಸಿದ ಹರೀಶ್ ಅವರ ದಾಖಲೆಗಳ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವಿಡಿಯೊ ಬಿಡುಗಡೆ ಬಳಿಕ ಹರೀಶ್ ಅವರ ಸಾಮಾಜಿಕ ಜಾಲತಾಣ ಖಾತೆಗಳು ನಿಷ್ಕ್ರಿಯಗೊಂಡಿತ್ತು. ಆನ್ಲೈನ್ ಕಿರುಕುಳ ಮತ್ತು ಒತ್ತಡದ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಆರೋಪವನ್ನು ನಿರಾಕರಿಸಿರುವ ಸಾಮುಯೆಲ್, ಹರೀಶ್ ಸೆಬಿಯ ಪರವಾನಗಿ ಹೊಂದಿರಲಿಲ್ಲ. ನಿಯಮಗಳ ಉಲ್ಲಂಘನೆ ಮತ್ತು ನಕಲಿ ಪರವಾನಗಿಯ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತೆ ಆಗುವುದಿಲ್ಲ ಎಂದು ಹೇಳಿದ್ದಾರೆ.ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹರೀಶ್ ಸಾವಿಗೂ ಮುನ್ನ ಮಾಡಿದ್ದ ವಿಡಿಯೊ ಸೇರಿದಂತೆ ಡಿಜಿಟಲ್ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.