ಬಳ್ಳಾರಿ ಐತಿಹಾಸಿಕ ಕೋಟೆಯ ಬೆಟ್ಟದ ಹೊಂಡದಲ್ಲಿ ಬಿದ್ದು ತಂದೆ-ಮಗ ದಾರುಣ ಸಾವು
– ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಆಕ್ರಂದನ ಬಳ್ಳಾರಿ: ಹಬ್ಬದ ರಜೆಯ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಐತಿಹಾಸಿಕ ಕೋಟೆ(Ballari Fort) ವೀಕ್ಷಣೆಗೆ ಬಂದಿದ್ದ ತಂದೆ ಹಾಗೂ ಮಗ ಬೆಟ್ಟದ ಮೇಲಿನ ಹೊಂಡದಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ. ಆಂಧ್ರಪ್ರದೇಶದ ಕಣೇಕಲ್ ಮೂಲದ ರಮೇಶ್ (38) ಹಾಗೂ ಅವರ 10 ವರ್ಷದ

– ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಆಕ್ರಂದನ ಬಳ್ಳಾರಿ: ಹಬ್ಬದ ರಜೆಯ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಐತಿಹಾಸಿಕ ಕೋಟೆ(Ballari Fort) ವೀಕ್ಷಣೆಗೆ ಬಂದಿದ್ದ ತಂದೆ ಹಾಗೂ ಮಗ ಬೆಟ್ಟದ ಮೇಲಿನ ಹೊಂಡದಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ. ಆಂಧ್ರಪ್ರದೇಶದ ಕಣೇಕಲ್ ಮೂಲದ ರಮೇಶ್ (38) ಹಾಗೂ ಅವರ 10 ವರ್ಷದ ಪುತ್ರ ಹೊನ್ನೂರಸ್ವಾಮಿ ಮೃತ ದುರ್ದೈವಿಗಳು. ದಸರಾ ಹಬ್ಬದ (Dasara Festival) ಸಂದರ್ಭದಲ್ಲಿ ರಮೇಶ್ ತಮ್ಮ ಕುಟುಂಬದೊಂದಿಗೆ ಬಳ್ಳಾರಿಯ ಐತಿಹಾಸಿಕ ಕೋಟೆ ವೀಕ್ಷಣೆಗೆ ಬಂದಿದ್ದರು. ಕೋಟೆಯ ಬೆಟ್ಟವನ್ನು ಹತ್ತಿದ ನಂತರ, ಬಾಲಕ ಹೊನ್ನೂರಸ್ವಾಮಿ ಅಲ್ಲಿದ್ದ ಪುರಾತನ ನೀರಿನ ಹೊಂಡದಲ್ಲಿ ಮೀನುಗಳನ್ನು ನೋಡಲು ಹೋಗಿದ್ದಾನೆ. ನೀರಿನಲ್ಲಿದ್ದ ಮೀನುಗಳನ್ನು ಕಂಡು ಹಿಡಿಯಲು ಮುಂದಾದಾಗ ಆಯತಪ್ಪಿ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಹೊಂಡದಲ್ಲಿ ಮಗ ಮುಳುಗುತ್ತಿರುವುದನ್ನು ಕಂಡ ತಂದೆ ರಮೇಶ್, ಆತನನ್ನು ರಕ್ಷಿಸಲು ತಕ್ಷಣವೇ ನೀರಿಗೆ ಧುಮುಕಿದ್ದಾರೆ. ಆದರೆ ನೀರಿನ ಆಳ ಮತ್ತು ಪರಿಸ್ಥಿತಿಯ ಗಂಭೀರತೆಯಿಂದಾಗಿ ಇಬ್ಬರಿಗೂ ಈಜಿ ಹೊರಬರಲು ಸಾಧ್ಯವಾಗದೆ, ತಂದೆ-ಮಗ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಕಣ್ಣೆದುರೇ ಇಬ್ಬರು ನೀರುಪಾಲಾಗುವುದನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಹೊಂಡದಿಂದ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಹಬ್ಬದ ದಿನವೇ ಸಂಭವಿಸಿದ ಈ ದುರ್ಘಟನೆ ಇಡೀ ಕುಟುಂಬವನ್ನು ತೀವ್ರ ಶೋಕಸಾಗರದಲ್ಲಿ ಮುಳುಗಿಸಿದೆ.