ದೇಗುಲ ನಿರ್ಮಾಣಕ್ಕೆ 40 ಸಾವಿರKG ತುಪ್ಪ ಬಳಕೆ; ರಾಜಸ್ಥಾನದ ಅಪರೂಪದ ಮಂದಿರವಿದು...
ಪ್ರಯಾಣ ಮಾಡಬೇಕು, ದೇಶ ಸುತ್ತಬೇಕು ಎನ್ನುವ ಅನೇಕರಿಗೆ ರಾಜಸ್ಥಾನಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು ಎನ್ನುವ ಕನಸಿರುತ್ತದೆ. ಮರಳು ದಿಬ್ಬಗಳು, ಕೋಟೆ ಹಾಗೂ ಅರಮನೆ, ಮಹಲುಗಳು, ಅಪರೂಪದ ಆಚರಣೆಗಳು ಕಣ್ಮನ ಸೆಳೆಯುತ್ತವೆ. ರಾಜಸ್ಥಾನದ ಇನ್ನೊಂದು ಆಕರ್ಷಣೆಯೆಂದರೆ ಬಿಕಾನೇರ್ನಲ್ಲಿರುವ 550 ವರ್ಷ ಹಳೆಯ ಬಂಡಾಸರ ಜೈನ ದೇಗುಲ. ಸ್ಥಳೀಯರು ಹೇಳುವ ಪ್ರಕಾರ, 15 ನೇ ಶತಮಾ

ಪ್ರಯಾಣ ಮಾಡಬೇಕು, ದೇಶ ಸುತ್ತಬೇಕು ಎನ್ನುವ ಅನೇಕರಿಗೆ ರಾಜಸ್ಥಾನಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು ಎನ್ನುವ ಕನಸಿರುತ್ತದೆ. ಮರಳು ದಿಬ್ಬಗಳು, ಕೋಟೆ ಹಾಗೂ ಅರಮನೆ, ಮಹಲುಗಳು, ಅಪರೂಪದ ಆಚರಣೆಗಳು ಕಣ್ಮನ ಸೆಳೆಯುತ್ತವೆ. ರಾಜಸ್ಥಾನದ ಇನ್ನೊಂದು ಆಕರ್ಷಣೆಯೆಂದರೆ ಬಿಕಾನೇರ್ನಲ್ಲಿರುವ 550 ವರ್ಷ ಹಳೆಯ ಬಂಡಾಸರ ಜೈನ ದೇಗುಲ. ಸ್ಥಳೀಯರು ಹೇಳುವ ಪ್ರಕಾರ, 15 ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇಗುಲದ ನಿರ್ಮಾಣಕ್ಕೆ ನೀರಿನ ಬದಲು ಸುಮಾರು 40,000 ಕೆಜಿ (40 ಟನ್) ಶುದ್ಧ ತುಪ್ಪವನ್ನು ಬಳಸಲಾಗಿದೆ. ಹೀಗಾಗಿ ಈ ಜೈನ ದೇಗುಲ ವಿಶೇಷವಾಗಿದೆ. ಬಿಕಾನೇರ್ ನಗರದ ದಕ್ಷಿಣ ಭಾಗದಲ್ಲಿರುವ ಭಂಡಾಸರ್ ಜೈನ ದೇವಾಲಯದ ನಿರ್ಮಾಣ ಕಾರ್ಯವನ್ನು ಕ್ರಿ.ಶ. 1411ರಲ್ಲಿ ಭಂಡಾ ಎಂಬುವವರು ಆರಂಭಿಸಿದರು. ಅವರ ಕಾಲಾನಂತರ ಅವರ ಮಗಳು ಇದರ ನಿರ್ಮಾಣವನ್ನು ಪೂರ್ಣಗೊಳಿಸಿದರು. ಈ ದೇವಾಲಯವು ಐದನೇ ಜೈನ ತೀರ್ಥಂಕರರಾದ ಸುಮತಿನಾಥರಿಗೆ ಸಮರ್ಪಿತವಾಗಿದ್ದು, ಇದನ್ನು ‘ತ್ರೈಲೋಕ್ಯ ದೀಪಕ ಪ್ರಸಾದ’ ಎಂದೂ ಕರೆಯಲಾಗುತ್ತದೆ.40,000 ಕೆಜಿ ತುಪ್ಪದ ಬಳಕೆರಾಜಸ್ಥಾನವು ಮರುಭೂಮಿ ಪ್ರದೇಶವಾಗಿರುವುದರಿಂದ ಬಿಕಾನೇರ್ ಪ್ರದೇಶದಲ್ಲಿ ನೀರಿನ ಅಭಾವವಿತ್ತು. ದೇವಾಲಯದ ಅಡಿಪಾಯಕ್ಕೆ ಸಿಮೆಂಟ್ ಮತ್ತು ಗಾರೆಯ ಮಿಶ್ರಣಕ್ಕಾಗಿ ನೀರಿನ ಬದಲು 40,000 ಕೆಜಿ ದೇಸಿ ತುಪ್ಪ ಮತ್ತು ಸುಣ್ಣವನ್ನು ಬಳಸಲಾಗಿದೆ ಎನ್ನುತ್ತದೆ ಇತಿಹಾಸ.ಒಣ ಹವಾಮಾನ ಮತ್ತು ಅತಿಯಾದ ಶಾಖದಲ್ಲಿ ಇಟ್ಟಿಗೆ ಮತ್ತು ಕಲ್ಲುಗಳು ಗಟ್ಟಿಯಾಗಿ ಹಿಡಿದುಕೊಳ್ಳಲು ತುಪ್ಪ ಮತ್ತು ಸುಣ್ಣದ ಮಿಶ್ರಣವು ನೈಸರ್ಗಿಕ ಬೈಂಡರ್ ಆಗಿ ಕೆಲಸ ಮಾಡುತ್ತದೆ ಎಂದೇ ನಂಬಲಾಗಿದೆ.ಇಂದಿಗೂ ಬೇಸಿಗೆಯ ದಿನಗಳಲ್ಲಿ ದೇವಾಲಯದ ನೆಲ ಮತ್ತು ಗೋಡೆಗಳಿಂದ ತುಪ್ಪದ ಸಣ್ಣ ಹನಿಗಳು ಜಿನುಗುವುದು, ತುಪ್ಪದ ವಾಸನೆ ಬರುವುದು ಈ ದೇವಾಲಯದ ವಿಶೇಷತೆಯಾಗಿದೆ ಎನ್ನುತ್ತಾರೆ ಸ್ಥಳೀಯರು.ಈ ದೇವಾಲಯವು ಮೂರು ಅಂತಸ್ತುಗಳನ್ನು ಹೊಂದಿದ್ದು, ಕೆಂಪು ಬೆಣಚು ಕಲ್ಲು ಮತ್ತು ಮಾರ್ಬಲ್ ಬಳಸಿ ನಿರ್ಮಿಸಲಾಗಿದೆ. ದೇವಾಲಯದ ಒಳಭಾಗದಲ್ಲಿ ಜೈನ ತೀರ್ಥಂಕರರ ಜೀವನ ಚರಿತ್ರೆ, ಸುಂದರವಾದ ಹೂವಿನ ಕಲಾಕೃತಿಗಳು, ಚಿನ್ನದ ಎಲೆಯ ವರ್ಣಚಿತ್ರಗಳಿವೆ. ದೇಗುಲದ ಶಿಖರದಲ್ಲಿ ಸಾಂಪ್ರದಾಯಿಕ ಶೈಲಿ ಹಾಗೂ ಮಂಟಪದಲ್ಲಿ ಮೊಘಲ್ ಶೈಲಿಯ ನಿರ್ಮಾಣವನ್ನೂ ಕಾಣಬಹುದು. ಹೊರಭಾಗವು ‘ಉರು ಶೃಂಗ’ಗಳಿಂದ (ಎತ್ತರದ ಶಿಖರದ ) ಅಲಂಕೃತಗೊಂಡಿದೆ.ಪ್ರಸ್ತುತ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಈ ದೇವಾಲಯವನ್ನು ಪಾರಂಪರಿಕ ರಚನೆಯಾಗಿ ಸಂರಕ್ಷಿಸುತ್ತಿದೆ.Situated in the southern part of the city of Bikaner, Bhandasar Jain Temple was founded by Bhanda in 1411 CE and was later completed by his daughter. The temple is dedicated to Sumatinatha, the fifth Jaina Tirthankara, and is also known as Trailokya Dipaka Prasada.The temple… pic.twitter.com/14UGrTwvRo— Archaeological Survey of India (@ASIGoI) May 16, 2026