ಆಲಿಯಾ ಭಟ್ ಜತೆ ನಟಿಸಿದ್ದ ಪೋಷಕ ನಟಿ ದಿವ್ಯಾ ವಿನೇಕರ್ ನಿಧನ
ಬಾಲಿವುಡ್ ಚಿತ್ರರಂಗದ ಪೋಷಕ ನಟಿ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ದಿವ್ಯಾ ವಿನೇಕರ್ (34) ಅವರು ಅಕ್ಟೋಬರ್ 19ರಂದು ನಿಧನರಾಗಿದ್ದಾರೆ.ಆಲಿಯಾ ಭಟ್ ಹಾಗೂ ಶೆಫಾಲಿ ಶಾ ನಟನೆಯ ‘ಡಾರ್ಲಿಂಗ್ಸ್’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದ ದಿವ್ಯಾ ವಿನೇಕರ್, ತಮ್ಮ ನಟನೆಯಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ನಿನ್ನೆ ಅವರ ಅಂತ್ಯಕ್ರಿಯೆಯನ್ನು ಮುಂಬೈನ ಶಿವ

ಬಾಲಿವುಡ್ ಚಿತ್ರರಂಗದ ಪೋಷಕ ನಟಿ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ದಿವ್ಯಾ ವಿನೇಕರ್ (34) ಅವರು ಅಕ್ಟೋಬರ್ 19ರಂದು ನಿಧನರಾಗಿದ್ದಾರೆ.ಆಲಿಯಾ ಭಟ್ ಹಾಗೂ ಶೆಫಾಲಿ ಶಾ ನಟನೆಯ ‘ಡಾರ್ಲಿಂಗ್ಸ್’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದ ದಿವ್ಯಾ ವಿನೇಕರ್, ತಮ್ಮ ನಟನೆಯಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ನಿನ್ನೆ ಅವರ ಅಂತ್ಯಕ್ರಿಯೆಯನ್ನು ಮುಂಬೈನ ಶಿವಾಜಿ ಪಾರ್ಕ್ನಲ್ಲಿರುವ ಹಿಂದೂ ಸ್ಮಶಾನದಲ್ಲಿ ನೆರವೇರಿಸಲಾಗಿದೆ.ಡೀಪ್ಫೇಕ್ ವಿಡಿಯೊ ವಿರುದ್ಧ ಬಾಲಿವುಡ್ ನಟಿ ನೇಹಾ ಶರ್ಮಾ ಗರಂದಿವ್ಯಾ ವಿನೇಕರ್ ಅವರ ನಿಧನದ ಸುದ್ದಿಯನ್ನು ಅವರ ಸ್ನೇಹಿತೆ, ಆರ್ಜೆ ರೋಹಿಣಿ ರಾಮನಾಥನ್ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ದೃಢಪಡಿಸಿದ್ದು, ಗೆಳತಿಯ ಆಕಸ್ಮಿಕ ಸಾವಿಗೆ ಆಘಾತ ವ್ಯಕ್ತಪಡಿಸಿದ್ದಾರೆ.‘ಮಹಾಭಾರತ’ ಧಾರಾವಾಹಿಯಲ್ಲಿ ನಟಿಸಿದ್ದ ಬಾಲಿವುಡ್ ಹಿರಿಯ ನಟಿ ಆಶಾ ಸಿಂಗ್ ನಿಧನ‘ನಮ್ಮ ಹೆಮ್ಮೆಯ ಡಿವಿ (ದಿವ್ಯಾ ವಿನೇಕರ್) ಸ್ವರ್ಗಸ್ಥರಾಗಿದ್ದಾರೆ ಎಂಬ ವಿಷಯವನ್ನು ಅತ್ಯಂತ ದುಃಖ ಮತ್ತು ಆಘಾತದಿಂದ ತಿಳಿಸುತ್ತಿದ್ದೇನೆ. ಇದು ಅತ್ಯಂತ ಆಕಸ್ಮಿಕ ಹಾಗೂ ಅನಿರೀಕ್ಷಿತ ಘಟನೆಯಾಗಿದೆ. ದಿವ್ಯಾ ಇನ್ನಿಲ್ಲ ಎಂಬುದು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ದಯವಿಟ್ಟು ಯಾರೂ ಅವರ ಸಾವಿನ ಕಾರಣದ ಬಗ್ಗೆ ಪ್ರಶ್ನಿಸಬೇಡಿ’ ಎಂದು ಮನವಿ ಮಾಡಿದ್ದಾರೆ. View this post on Instagram ‘ನನ್ನ ವೈಯಕ್ತಿಕ ಜೀವನದಲ್ಲಿ ಡಿವಿ ಒಂದು ಭದ್ರವಾದ ಸ್ತಂಭವಾಗಿದ್ದರು. ಕೆಲಸದ ಮೇಲಿನ ಶ್ರದ್ಧೆ ಹಾಗೂ ಜ್ಞಾನ ಅವರನ್ನು ಎಲ್ಲರಿಗಿಂತ ವಿಭಿನ್ನವಾಗಿಸಿತ್ತು. ನಿನ್ನ ನೆನಪು ಸದಾ ಕಾಡುತ್ತದೆ. ನಮ್ಮ ಬದುಕಿನ ಭಾಗವಾಗಿದ್ದಕ್ಕೆ ಧನ್ಯವಾದಗಳು. ನಿನ್ನಂತಹ ಗೆಳತಿಯನ್ನು ಪಡೆಯಲು ನಾವು ಪುಣ್ಯ ಮಾಡಿದ್ದೆವು’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.ದಿವ್ಯಾ ವಿನೇಕರ್ ಅವರು ಸಣ್ಣ ಪಾತ್ರಗಳನ್ನು ನಿರ್ವಹಿಸಿದರೂ, ತಮ್ಮ ನಟನೆಯಿಂದ ಗಮನ ಸೆಳೆಯುತ್ತಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಮಾಡುತ್ತಿದ್ದ ಕೊಂಕಣಿ ಭಾಷೆಯ ರೀಲ್ಸ್ಗಳು ಪ್ರೇಕ್ಷಕರ ಮನಗೆದ್ದಿದ್ದವು. ಇವರು ‘ಜಲ್ಸಾ’, ‘ಕುಚ್ ಸಪ್ನೇ ಅಪ್ನೇ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.