ಸಮೃದ್ಧೀಕರಿಸಿದ ಯುರೇನಿಯಂ ಹಸ್ತಾಂತರಿಸಲಾಗದು: ಇರಾನ್ ಸ್ಪಷ್ಟ ಸಂದೇಶ
ಟೆಹರಾನ್: ತನ್ನ ಬಳಿಯಿರುವ ಸಮೃದ್ಧೀಕರಿಸಿದ ಯುರೇನಿಯಂ ಅನ್ನು ಮೂರನೇ ದೇಶಕ್ಕೆ ಹಸ್ತಾಂತರಿಸುವ ಯೋಜನೆಯನ್ನು ಇರಾನ್ ತಳ್ಳಿಹಾಕಿದೆ. ಯಾವುದೇ ಕಾರಣಕ್ಕೂ ದೇಶದ ಪರಮಾಣು ಉಪಕರಣಗಳು ಅಥವಾ ವಸ್ತುಗಳು ಇರಾನ್ನಿಂದ ಹೊರ ಹೋಗುವುದಿಲ್ಲ ಎಂದು ಇರಾನ್ನ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ರೆಜಾಯ್ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀ

ಟೆಹರಾನ್: ತನ್ನ ಬಳಿಯಿರುವ ಸಮೃದ್ಧೀಕರಿಸಿದ ಯುರೇನಿಯಂ ಅನ್ನು ಮೂರನೇ ದೇಶಕ್ಕೆ ಹಸ್ತಾಂತರಿಸುವ ಯೋಜನೆಯನ್ನು ಇರಾನ್ ತಳ್ಳಿಹಾಕಿದೆ. ಯಾವುದೇ ಕಾರಣಕ್ಕೂ ದೇಶದ ಪರಮಾಣು ಉಪಕರಣಗಳು ಅಥವಾ ವಸ್ತುಗಳು ಇರಾನ್ನಿಂದ ಹೊರ ಹೋಗುವುದಿಲ್ಲ ಎಂದು ಇರಾನ್ನ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ರೆಜಾಯ್ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಅವರಿಗೆ ಸ್ಪಷ್ಟಪಡಿಸಿದ್ದಾರೆ.ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಅಂತ್ಯಗೊಳಿಸಲು ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ, ಸಮೃದ್ಧೀಕರಿಸಿದ ಯುರೇನಿಯಂನ ಒಂದು ಭಾಗವನ್ನು ಬೇರೆ ದೇಶಕ್ಕೆ ಹಸ್ತಾಂತರಿಸಬೇಕು ಎಂಬ ಪ್ರಸ್ತಾಪವನ್ನು ಇರಾನ್ ಮುಂದಿಟ್ಟಿತ್ತು. ಈ ಪ್ರಸ್ತಾಪವನ್ನು ಟೆಹರಾನ್ ಸಾರಾಸಗಟಾಗಿ ತಿರಸ್ಕರಿಸಿದೆ.'ಅದು ನಮ್ಮ ರಾಷ್ಟ್ರೀಯ ಸಂಪತ್ತು':ಶಾಂತಿ ಒಪ್ಪಂದದ ಮಾತುಕತೆಗಾಗಿ ಟೆಹರಾನ್ಗೆ ಭೇಟಿ ನೀಡಿರುವ ಪಾಕ್ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಅವರೊಂದಿಗಿನ ಸಭೆಯಲ್ಲಿ ಮಾತನಾಡಿದ ರೆಜಾಯ್, 'ಸಮೃದ್ಧೀಕರಿಸಿದ ಯುರೇನಿಯಂನ ಸಣ್ಣ ಕಣವೂ ಇರಾನ್ನಿಂದ ಹೊರ ಹೋಗುವುದಿಲ್ಲ. ಇದು ಇರಾನ್ ಜನತೆಯ ಪ್ರಮುಖ ಆಸ್ತಿ ಮತ್ತು ರಾಷ್ಟ್ರೀಯ ಸಂಪತ್ತಾಗಿದ್ದು, ದೇಶದೊಳಗಿನ ಬಳಕೆಗಾಗಿಯೇ ಕಾಯ್ದಿರಿಸಲಾಗಿದೆ' ಎಂದಿದ್ದಾರೆ.ಅಲ್ಲದೇ ಅಮೆರಿಕ ಮೊದಲು ನಮ್ಮ ನಂಬಿಕೆ ಗಳಿಸುವತ್ತ ಹೆಜ್ಜೆ ಇಡಬೇಕು. ಇರಾನ್ ವಿಧಿಸಿರುವ ಷರತ್ತುಗಳನ್ನು ಈಡೇರಿಸುವ ಮೂಲಕವೇ ಈ ಪ್ರಕ್ರಿಯೆ ಆರಂಭವಾಗಬೇಕಿದ್ದು, ಅಲ್ಲಿಯವರೆಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ರೆಜಾಯ್ ಸ್ಪಷ್ಟಪಡಿಸಿದ್ದಾರೆ.ಅಮೆರಿಕದ ಬೆದರಿಕೆಗೆ ಮಣಿಯುವುದಿಲ್ಲ - ಪಜೆಶ್ಕಿಯಾನ್: ಇರಾನ್ ಅಧ್ಯಕ್ಷ ಮಸೂದ್ ಪಜೆಶ್ಕಿಯಾನ್ ಹಾಗೂ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್ ಕೂಡ ಮುನಿರ್ ಅವರಿಗೆ ಇದೇ ರೀತಿಯ ಕಠಿಣ ಸಂದೇಶ ರವಾನಿಸಿದ್ದಾರೆ. 'ಅಮೆರಿಕ ವಿಧಿಸಿರುವ ನಿರ್ಬಂಧಗಳನ್ನು ಹಿಂಪಡೆಯಬೇಕು, ಆ ನಂತರವಷ್ಟೇ ನಾವು ಮಾತುಕತೆಯಲ್ಲಿ ತೊಡಗಿಸಿಕೊಳ್ಳಬಹುದು. ನಮಗೆ ಆ ದೇಶದ (ಅಮೆರಿಕ) ಮೇಲೆ ನಂಬಿಕೆಯಿಲ್ಲ. ಮಾತುಕತೆಗೆ ಮುಂದಾದರೆ ಅವರು ಮತ್ತೆ ನಮ್ಮ ಮೇಲೆ ದಾಳಿ ಮಾಡುತ್ತಾರೆ ಎಂದು ನಮ್ಮ ಜನ ನಂಬಿದ್ದಾರೆ' ಎಂದು ಅಧ್ಯಕ್ಷ ಪೆಜೆಶ್ಕಿಯನ್ ತಿಳಿಸಿದ್ದಾರೆ. ಸ್ಪೀಕರ್ ಖಾಲೀಬಾಫ್ ಮಾತನಾಡಿ, 'ನಮಗೆ ಹೊಸದಾಗಿ ಹೇಳಲು ಏನೂ ಇಲ್ಲ. ಇರಾನ್ ವಿಧಿಸಿರುವ ಏಳು ಷರತ್ತುಗಳನ್ನು ಈಡೇರಿಸದ ಹೊರತು ಅಮೆರಿಕಕ್ಕೆ ನಮ್ಮ ನಂಬಿಕೆ ಗಳಿಸಲು ಸಾಧ್ಯವಿಲ್ಲ. ಬೆದರಿಕೆಗಳು ಅಥವಾ ಮಿಲಿಟರಿ ತಂತ್ರಗಳು ಇರಾನ್ನ ತಾಂತ್ರಿಕ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ' ಎಂದು ಪ್ರತಿಪಾದಿಸಿದ್ದಾರೆ. ಸಮೃದ್ಧೀಕರಿಸಿದ ಯುರೇನಿಯಂ ವಿದೇಶಕ್ಕೆ ಕಳುಹಿಸಬೇಡಿ: ಖಮೇನಿಸಮೃದ್ಧೀಕರಿಸಿದ ಯುರೇನಿಯಂ ಹಸ್ತಾಂತರಿಸಲು ಇರಾನ್ ಒಪ್ಪಿದೆ: ಟ್ರಂಪ್