ವೈಭವದ ತುಮಕೂರು ದಸರಾಗೆ ಅದ್ಧೂರಿ ತೆರೆ
ತುಮಕೂರು: ವೈಭವದ ತುಮಕೂರು ದಸರಾಗೆ (Tumakuru Dasara) ಅದ್ದೂರಿಯಾಗಿ ತೆರೆ ಬಿದ್ದಿದೆ. ಜಂಬೂ ಸವಾರಿ (Jamboo Savari) ಮೂಲಕ ತುಮಕೂರು ದಸರಾ ಉತ್ಸವ ಸಂಪನ್ನಗೊಂಡಿದೆ. ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಜನಸಾಗರವೇ ನೆರೆದಿತ್ತು. ಟೌನ್ ಹಾಲ್ ವೃತ್ತದಿಂದ ಅದ್ಧೂರಿ ಜಂಬೂ ಸವಾರಿಗೆ ಚಾಲನೆ ಸಿಕ್ಕಿತು. ತಾಯಿ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಿದ

ತುಮಕೂರು: ವೈಭವದ ತುಮಕೂರು ದಸರಾಗೆ (Tumakuru Dasara) ಅದ್ದೂರಿಯಾಗಿ ತೆರೆ ಬಿದ್ದಿದೆ. ಜಂಬೂ ಸವಾರಿ (Jamboo Savari) ಮೂಲಕ ತುಮಕೂರು ದಸರಾ ಉತ್ಸವ ಸಂಪನ್ನಗೊಂಡಿದೆ. ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಜನಸಾಗರವೇ ನೆರೆದಿತ್ತು. ಟೌನ್ ಹಾಲ್ ವೃತ್ತದಿಂದ ಅದ್ಧೂರಿ ಜಂಬೂ ಸವಾರಿಗೆ ಚಾಲನೆ ಸಿಕ್ಕಿತು. ತಾಯಿ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಿದ ಆನೆ ಲಕ್ಷ್ಮಣ ಟೌನ್ ಹಾಲ್ ವೃತ್ತಕ್ಕೆ ಆಗಮಿಸುತ್ತಿದ್ದಂತೆ ದಸರಾ ಉತ್ಸವಕ್ಕೆ ಮತ್ತಷ್ಟು ಮೆರುಗು ಬಂತು. ಅಂಬಾರಿ ಹೊತ್ತ ಲಕ್ಷ್ಮಣನಿಗೆ ಎರಡು ಲಕ್ಷ್ಮೀ ಆನೆಗಳು ಸಾಥ್ ನೀಡಿದವು. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಂಠಪೂರ್ತಿ ಕುಡಿದು ಕೆರೆಗೆ ಹಾರಿ ವ್ಯಕ್ತಿ ಸಾವು ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಈ ವೇಳೆ ಡಿಸಿಎಂ ಪತ್ನಿ ಕನ್ನಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ನಗರ ಶಾಸಕ ಜ್ಯೋತಿಗಣೇಶ್ ಉಪಸ್ಥಿತರಿದ್ದರು. ಅಷ್ಟೇ ಅಲ್ಲ, ಈ ಬಾರಿಯ ಮೆರವಣಿಗೆಯಲ್ಲಿ ಹತ್ತು ಜೊತೆ ವಿವಿಧ ತಳಿಯ ಎತ್ತುಗಳು, 20ಕ್ಕೂ ಹೆಚ್ಚು ಗ್ರಾಮದೇವತೆಗಳು ಹಾಗೂ 8 ಕುದುರೆಗಳು ಭಾಗಿಯಾಗಿ ಮೆರವಣಿಗೆಗೆ ಮೆರುಗು ನೀಡಿದ್ದವು. ವಿವಿಧ ಕಲಾತಂಡಗಳು ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಿದವು. ಇದನ್ನೂ ಓದಿ: ಜೆಫ್ರಿ ಎಪ್ಸ್ಟೀನ್ ಜೊತೆ ಹರ್ದೀಪ್ ಸಿಂಗ್ ಪುರಿ ಫೋಟೋ – ಕೇಂದ್ರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು ಟೌನ್ ಹಾಲ್ನಿಂದ ಆರಂಭವಾದ ಈ ಜಂಬೂ ಸವಾರಿ ಮೆರವಣಿಗೆ, ಅಶೋಕ ರಸ್ತೆ, ಚರ್ಚ್ ಸರ್ಕಲ್, ದೊಡ್ಡ ಆಂಜನೇಯ ಸ್ವಾಮಿ ಸರ್ಕಲ್, ಅಮಾನಿಕೆರೆ ರಸ್ತೆ ಮೂಲಕ ಕೋತಿತೋಪು, ಶಿವಕುಮಾರ ಸ್ವಾಮೀಜಿ ಸರ್ಕಲ್ನಿಂದ ಬಿ.ಹೆಚ್ ರಸ್ತೆ ಮೂಲಕ ಭದ್ರಮ್ಮ ಸರ್ಕಲ್ ತಲುಪಿ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕೊನೆಗೊಂಡಿತು. ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಶಮಿ ಪೂಜೆಯೊಂದಿಗೆ ಜಂಬೂ ಸವಾರಿ ಮುಕ್ತಾಯಗೊಂಡಿತು. ಇದನ್ನೂ ಓದಿ: ಐದು ಭಾಷೆಗಳಲ್ಲಿ ಬರಲಿದೆ ನವರಸನ್ ನಿರ್ದೇಶನದ ಆದಿ ರುದ್ರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಲೆಗೆ ಪೇಟ ಧರಿಸಿ, ಕೈಯಲ್ಲಿ ಖಡ್ಗ ಹಿಡಿದು ಬನ್ನಿ ಕತ್ತರಿಸುವ ಮೂಲಕ ಶಮಿ ಪೂಜೆ ನೆರವೇರಿಸಿದರು. ಅವರಿಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಜ್ಯೋತಿಗಣೇಶ್ ಸಾಥ್ ನೀಡಿದರು. ಶಮಿ ಪೂಜೆಯ ಬಳಿಕ ಧ್ವಜ ಕೆಳಗಿಳಿಸುವ ಮೂಲಕ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ತುಮಕೂರು ದಸರಾಗೆ ಅಧಿಕೃತವಾಗಿ ತೆರೆ ಎಳೆದರು. ಇದನ್ನೂ ಓದಿ: ವಿಶ್ವಪ್ರಸಿದ್ಧ ಮೈಸೂರು ಜಂಬೂ ಸವಾರಿ ಸಂಪನ್ನ – ಮೊದಲಬಾರಿಗೆ ಅಂಬಾರಿ ಹೊತ್ತ ಪ್ರಶಾಂತ