ಏಷ್ಯನ್ ಪ್ಯಾರಾ ಗೇಮ್ಸ್ ಶಾಟ್ಪಟ್: ಸ್ವರ್ಣ ಪದಕಕ್ಕೆ ಕೊರಳೊಡ್ಡಿದ ಆಯುಷ್ ವರ್ಮಾ
ನಾಗೋಯಾ: ಭಾರತದ ಕ್ರೀಡಾಪಟುಗಳು ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಪದಕ ಬೇಟೆಯನ್ನು ಮುಂದುವರಿಸಿದ್ದಾರೆ.ಏಷ್ಯನ್ ಪ್ಯಾರಾ ಗೇಮ್ಸ್ನ ಪುರುಷರ ಶಾಟ್ಪಟ್ ವಿಭಾಗದಲ್ಲಿ ಭಾರತದ ಆಯುಷ್ ವರ್ಮಾ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಪ್ರಸಕ್ತ ಕ್ರೀಡಾಕೂಟದಲ್ಲಿ ಆಯುಷ್ ಎರಡನೇ ಪದಕ ಇದಾಗಿದೆ.ಆಯುಷ್ ಅವರು ಐದನೇ ಪ್ರಯತ್ನದಲ್ಲಿ 8.16 ಮೀಟರ್ ದೂರಕ್ಕೆ ಗುಂಡು ಎಸೆಯುವ ಮೂ

ನಾಗೋಯಾ: ಭಾರತದ ಕ್ರೀಡಾಪಟುಗಳು ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಪದಕ ಬೇಟೆಯನ್ನು ಮುಂದುವರಿಸಿದ್ದಾರೆ.ಏಷ್ಯನ್ ಪ್ಯಾರಾ ಗೇಮ್ಸ್ನ ಪುರುಷರ ಶಾಟ್ಪಟ್ ವಿಭಾಗದಲ್ಲಿ ಭಾರತದ ಆಯುಷ್ ವರ್ಮಾ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಪ್ರಸಕ್ತ ಕ್ರೀಡಾಕೂಟದಲ್ಲಿ ಆಯುಷ್ ಎರಡನೇ ಪದಕ ಇದಾಗಿದೆ.ಆಯುಷ್ ಅವರು ಐದನೇ ಪ್ರಯತ್ನದಲ್ಲಿ 8.16 ಮೀಟರ್ ದೂರಕ್ಕೆ ಗುಂಡು ಎಸೆಯುವ ಮೂಲಕ ಅಗ್ರಸ್ಥಾನ ಖಚಿತಪಡಿಸಿಕೊಂಡರು. ಇರಾನ್ನ ಅಲಿರೆಜಾ ಹೆಮಾಮಿ 8.09 ಮೀಟರ್ ದೂರಕ್ಕೆ ಗುಂಡು ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರೆ, ಕಜಕಿಸ್ತಾನದ ಮಖಾಂಬೆತ್ ಸೆರಿಕ್ಕಾಲಿಯೆವ್ ಮೂರನೇ ಸ್ಥಾನ ಪಡೆದರು.ಇದಕ್ಕೂ ಮುನ್ನ ಮಂಗಳವಾರ ನಡೆದ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಆಯುಷ್ ಕಂಚಿನ ಪದಕ ಗೆದ್ದಿದ್ದರು.ಶೀತಲ್ ದೇವಿಶೀತಲ್-ಪಾಯಲ್ ಜೋಡಿಗೆ ಬೆಳ್ಳಿ ಪದಕಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತದ ಯುವ ಆಟಗಾರ್ತಿಯರಾದ ಶೀತಲ್ ದೇವಿ ಮತ್ತು ಪಾಯಲ್ ನಾಗ್ ಅವರು ಮಹಿಳೆಯರ ಕಾಂಪೌಂಡ್ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.ಫೈನಲ್ನಲ್ಲಿ ಶೀತಲ್ –ಪಾಯಲ್ ಜೋಡಿ ಚೀನಾದ ಕ್ಸು ಕ್ಸುಕ್ವಿಂಗ್ ಮತ್ತು ಝಾವೋ ಜಿಂಗ್ ಜೋಡಿಯ ವಿರುದ್ಧ 141-150 ಅಂತರದಲ್ಲಿ ಪರಾಭವಗೊಂಡರು.ಶೀತಲ್ ಅವರು ಕಳೆದ ಬಾರಿಯ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಸರಿತಾ ದೇವಿ ಅವರೊಂದಿಗೆ ಸೇರಿ ಇದೇ ವಿಭಾಗದಲ್ಲಿ ರಜತ ಪದಕ ಗೆದ್ದಿದ್ದರು.