ವಿಶ್ವಾಸಮತ ಯಾಚನೆ ನಡೆದರೆ 275 ಶಾಸಕರ ಬೆಂಬಲ ಸಿಗಲಿದೆ: ಸುವೇಂದು
ಕೊಲ್ಕತ್ತ: ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ನಡೆದರೆ, 294 ಶಾಸಕರ ಪೈಕಿ 275ಕ್ಕೂ ಅಧಿಕ ಶಾಸಕರ ಬೆಂಬಲ ಸಿಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ. ಟಿಎಂಸಿ ಟಿಕೆಟ್ ಪಡೆದು ಗೆದ್ದಿರುವ 64 ಮಂದಿ ಶಾಸಕರು ಸಹ ನಮ್ಮನ್ನು ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ.'ನಾವು ಕೇವಲ ಸಾಮಾಜಿಕ ಮಾಧ್ಯಮ ಅಥವಾ ದೂರದರ್ಶನಗಳ ಚರ್ಚಾ ಕಾರ್ಯಕ್ರಮ ಮ

ಕೊಲ್ಕತ್ತ: ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ನಡೆದರೆ, 294 ಶಾಸಕರ ಪೈಕಿ 275ಕ್ಕೂ ಅಧಿಕ ಶಾಸಕರ ಬೆಂಬಲ ಸಿಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ. ಟಿಎಂಸಿ ಟಿಕೆಟ್ ಪಡೆದು ಗೆದ್ದಿರುವ 64 ಮಂದಿ ಶಾಸಕರು ಸಹ ನಮ್ಮನ್ನು ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ.'ನಾವು ಕೇವಲ ಸಾಮಾಜಿಕ ಮಾಧ್ಯಮ ಅಥವಾ ದೂರದರ್ಶನಗಳ ಚರ್ಚಾ ಕಾರ್ಯಕ್ರಮ ಮೂಲಕ ಗೆದ್ದಿಲ್ಲ. ಜನರಿಂದ ಆಯ್ಕೆಯಾಗಿದ್ದೇವೆ. ನಮ್ಮದು ಸನಾತನಿ ಸರ್ಕಾರ. ಭವಾನಿಪುರದಲ್ಲೇ ಮಮತಾ ಬ್ಯಾನರ್ಜಿಗೆ ಸೋಲುಣಿಸಿದ್ದೇನೆ’ ಎಂದಿದ್ದಾರೆ. ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆದರೆ ನಮಗೆ 275ಕ್ಕೂ ಅಧಿಕ ಶಾಸಕರ ಬೆಂಬಲ ಸಿಗಲಿದೆ. 6 ತಿಂಗಳ ಹಿಂದಷ್ಟೇ ನಾವು ಅಧಿಕಾರಕ್ಕೆ ಬಂದಿದ್ದೇವೆ. 49 ವರ್ಷಗಳಲ್ಲಿ ಸಿಪಿಎಂ ಮತ್ತು ಟಿಎಂಸಿ ಮಾಡಿರುವ ಕೊಳಕನ್ನು ತೊಳೆಯಲು ಸಮಯ ಹಿಡಿಯಲಿದೆ ಎಂದಿದ್ದಾರೆ.ರಾಜ್ಯದಲ್ಲಿ ಮಮತಾ ಅವರ ಟಿಎಂಸಿ ಪಕ್ಷ ತನ್ನ ಅಸ್ತಿತ್ವ, ಸಂಖ್ಯಾಬಲ ಮತ್ತು ಧ್ವಜವನ್ನೂ ಕಳೆದುಕೊಳ್ಳಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.ಈ ವರ್ಷ ಏಪ್ರಿಲ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 208 ಸ್ಥಾನಗಳನ್ನು ಗೆದ್ದಿತ್ತು. ಆ ಮೂಲಕ, ತೃಣಮೂಲ ಕಾಂಗ್ರೆಸ್ನ 15 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿತ್ತು.