SBI ಮೇಲೆ ಸೈಬರ್ ದಾಳಿ – 3,897 ಗ್ರಾಹಕರ ವೈಯಕ್ತಿಕ ಡೇಟಾ ಡಾರ್ಕ್ವೆಬ್ನಲ್ಲಿ ಬಹಿರಂಗ!
ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮೇಲೆ ಭಾರೀ ಸೈಬರ್ ದಾಳಿ ನಡೆದಿದೆ. ಸುಮಾರು 3,897 ಗ್ರಾಹಕರ (SBI Customers) ವೈಯಕ್ತಿಕ ಡೇಟಾಗಳು ಡಾರ್ಕ್ ವೆಬ್ನಲ್ಲಿ ಸೋರಿಕೆಯಾಗಿರುವುದನ್ನ ಬ್ಯಾಂಕ್ ದೃಢಪಡಿಸಿದೆ. ಬ್ಯಾಂಕ್ ಅಧಿಕಾರಿಗಳ ಮಾಹಿತಿ ಪ್ರಕಾರ, ಸೋರಿಕೆಯಾಗಿರುವ ಡೇಟಾದಲ್ಲಿ (Data leak) ಗ್ರಾಹಕರ ಹೆಸರು, ವಾಸಸ್ಥಳದ ವಿಳಾಸ, ಫೋನ್ ನಂಬರ್, ಜನ್ಮ ದ

ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮೇಲೆ ಭಾರೀ ಸೈಬರ್ ದಾಳಿ ನಡೆದಿದೆ. ಸುಮಾರು 3,897 ಗ್ರಾಹಕರ (SBI Customers) ವೈಯಕ್ತಿಕ ಡೇಟಾಗಳು ಡಾರ್ಕ್ ವೆಬ್ನಲ್ಲಿ ಸೋರಿಕೆಯಾಗಿರುವುದನ್ನ ಬ್ಯಾಂಕ್ ದೃಢಪಡಿಸಿದೆ. ಬ್ಯಾಂಕ್ ಅಧಿಕಾರಿಗಳ ಮಾಹಿತಿ ಪ್ರಕಾರ, ಸೋರಿಕೆಯಾಗಿರುವ ಡೇಟಾದಲ್ಲಿ (Data leak) ಗ್ರಾಹಕರ ಹೆಸರು, ವಾಸಸ್ಥಳದ ವಿಳಾಸ, ಫೋನ್ ನಂಬರ್, ಜನ್ಮ ದಿನಾಂಕ, ಲೋನ್ ಪಡೆಯಲು ನೀಡಿರುವ ಅಗತ್ಯ ದಾಖಲೆಗಳು, ಪ್ರಮುಖ ಐಡಿಗಳು ಸೇರಿವೆ. ಷೇರು ವಿನಿಮಯ ಕೇಂದ್ರಕ್ಕೆ ನೀಡಿರುವ ಮಾಹಿತಿಯಲ್ಲಿ ಡಾರ್ಕ್ ವೆಬ್ನಲ್ಲಿ ಪತ್ತೆಯಾದ ಸುಮಾರು 3.75 ಲಕ್ಷ ದಾಖಲೆಗಳ ಪ್ರಾಥಮಿಕ ತನಿಖೆಯ ಬಳಿಕ 3,897 ಗ್ರಾಹಕರ ವೈಯುಕ್ತಿಕ ಗುರುತಿನ ಮಾಹಿತಿ ಲೀಕ್ ಆಗಿದೆ ಅನ್ನೋದನ್ನ ಬ್ಯಾಂಕ್ ಖಚಿತಪಡಿಸಿದೆ. ಎಸ್ಬಿಐ ಮೂಲಗಳ ಪ್ರಕಾರ, ಅಕ್ಟೋಬರ್ 16ರಂದೇ ಗ್ರಾಹಕರ ಡೇಟಾ ಸೋರಿಕೆಯಾಗುವ ಸಾಧ್ಯತೆಯ ಕುರಿತಂತೆ ‘ಥ್ರೆಟ್ ಇಂಟೆಲಿಜೆನ್ಸ್’ ಸೇವಾ ಪೂರೈಕೆದಾರರು, ಡಿಫೆನ್ಸ್ ಸೈಬರ್ ಏಜೆನ್ಸಿ ಮತ್ತು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ನಿಂದ ಎಚ್ಚರಿಕೆಯ ಸಂದೇಶವೊಂದು ಬಂದಿತ್ತು. ಇದರ ಬೆನ್ನಲ್ಲೇ, ಬ್ಯಾಂಕ್ ತಕ್ಷಣವೇ ತನ್ನ ಸೈಬರ್ ಘಟನೆ ನಿರ್ವಹಣಾ ವ್ಯವಸ್ಥೆ ಮತ್ತು ಭದ್ರತಾ ನಿಯಮಾವಳಿಗಳನ್ನ ಜಾರಿಗೆ ತಂದಿತು ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಗಳ ಪ್ರಕಾರ, ಸೋರಿಕೆಯಾದ ದತ್ತಾಂಶಗಳ ಪೈಕಿ ಗ್ರಾಹಕರ ನೋಂದಾಯಿತ ಮೊಬೈಲ್ ನಂಬರ್, ಹೆಸರು, ಲಿಂಗ, ಇಮೇಲ್ ಐಡಿಗಳು, ಮನೆಯ ವಿಳಾಸ, ಜನ್ಮದಿನಾಂಕ, ಬ್ರ್ಯಾಂಚ್ ಕೋಡ್ಗಳು ಸೇರಿವೆ. ಇದರ ಜೊತೆಗೆ ಸಾಲದ ದಾಖಲೆ, ಗ್ರಾಹಕರ ಮಾಹಿತಿ ಕಡತಗಳಿಗೆ ಸಂಬಂಧಿಸಿದ ದಾಖಲೆಗಳು ಕೂಡ ಇದರಲ್ಲಿವೆ ಎಂದು ತಿಳಿದು ಬಂದಿದೆ. ಸಂಭಾವ್ಯ ಮೂಲ ಮತ್ತು ಮಾನ್ಯತೆಯ ವ್ಯಾಪ್ತಿಯನ್ನ ನಿರ್ಧರಿಸಲು ಮತ್ತು ಗ್ರಾಹಕರು ಮತ್ತು ಬ್ಯಾಂಕಿಗೆ ಸಂಬಂಧಿಸಿದ ಅಪಾಯಗಳನ್ನ ನಿರ್ಣಯಿಸಲು ವಿವರವಾದ ತನಿಖೆ ಅಗತ್ಯವಿದೆ ಎಂದು ಬ್ಯಾಂಕ್ ಹೇಳಿದೆ.