ಅಮಿತ್ ಶಾನೇ ಲಾರೆನ್ಸ್ ಬಿಷ್ಣೋಯಿ: ಸಂಜಯ್ ರಾವುತ್ ಆರೋಪ
ಮುಂಬೈ: ‘ಲಾರೆನ್ಸ್ ಬಿಷ್ಣೋಯಿ ಎಂಬ ವ್ಯಕ್ತಿಯೇ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಲಾರೆನ್ಸ್ ಬಿಷ್ಣೋಯಿ’ ಎಂದು ಶಿವಸೇನೆ (ಯುಬಿಟಿ) ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಆರೋಪಿಸಿದ್ದಾರೆ.ಮುಂಬೈನಲ್ಲಿ ನಡೆದ ವಾರ್ಷಿಕ ದಸರಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಟೈಗರ್ ಶ್ರಾಫ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಸೇರಿ

ಮುಂಬೈ: ‘ಲಾರೆನ್ಸ್ ಬಿಷ್ಣೋಯಿ ಎಂಬ ವ್ಯಕ್ತಿಯೇ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಲಾರೆನ್ಸ್ ಬಿಷ್ಣೋಯಿ’ ಎಂದು ಶಿವಸೇನೆ (ಯುಬಿಟಿ) ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಆರೋಪಿಸಿದ್ದಾರೆ.ಮುಂಬೈನಲ್ಲಿ ನಡೆದ ವಾರ್ಷಿಕ ದಸರಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಟೈಗರ್ ಶ್ರಾಫ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಸೇರಿದಂತೆ ಹಲವು ತಾರೆಯರಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಬರುತ್ತಿರುವ ಬೆದರಿಕೆಗಳ ಕುರಿತು ಪ್ರಸ್ತಾಪಿಸಿದ್ದಾರೆ.ರಾವುತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಬಿಜೆಪಿ ಸಚಿವ ನಿತೇಶ್ ರಾಣೆ, ‘ಸಾಬರಮತಿ ಜೈಲಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ನೀವು ಅಲ್ಲಿ ಕಸ ಗುಡಿಸುತ್ತಿದ್ದೀರಾ?’ ಎಂದು ತಿರುಗೇಟು ನೀಡಿದ್ದಾರೆ.‘ವಿರೋಧ ಪಕ್ಷದವರಿಗೆ ಅಮಿತ್ ಶಾ ಅವರಲ್ಲಿ ಲಾರೆನ್ಸ್ ಬಿಷ್ಣೋಯಿ ಕಾಣಿಸುತ್ತಾರೆ. ಆದರೆ, ನಮಗೆ ಉದ್ಧವ್ ಠಾಕ್ರೆ ಅವರಲ್ಲಿ ದಾವೂದ್ ಇಬ್ರಾಹಿಂ ಕಾಣಿಸುತ್ತಾರೆ. ಉದ್ಧವ್ ಅವರೇ ದಾವೂದ್ ಇಬ್ರಾಹಿಂ ಎಂದು ನಮಗೆ ಅನಿಸುತ್ತದೆ’ ಎಂದು ರಾಣೆ ಹೇಳಿದ್ದಾರೆ.ಅಂತರರಾಷ್ಟ್ರೀಯ ಅಪರಾಧ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾದ ಲಾರೆನ್ಸ್ ಬಿಷ್ಣೋಯಿ, ಮಾದಕವಸ್ತು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಗುಜರಾತ್ನ ಸಾಬರಮತಿ ಜೈಲಿನಲ್ಲಿ ಬಂಧನದಲ್ಲಿದ್ದಾನೆ.