ಭಾರತೀಯರೊಂದಿಗೆ 'ಗರ್ಬಾ' ನೃತ್ಯಕ್ಕೆ ಹೆಜ್ಜೆ ಹಾಕಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ
ನ್ಯೂಯಾರ್ಕ್: ನವರಾತ್ರಿ ಮಹೋತ್ಸವದ ಸಂಭ್ರಮದಲ್ಲಿರುವ ಭಾರತೀಯ ಸಮುದಾಯದ ಜೊತೆ ಸೇರಿಕೊಂಡ ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ , ಗರ್ಬಾ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಕಪ್ಪು ಸೂಟ್ ಮೇಲೆ ಸಾಂಪ್ರದಾಯಿಕ ದುಪಟ್ಟಾ ಧರಿಸಿರುವ ಮಮ್ದಾನಿ, ಗುಜರಾತಿ ಜನಪದ ಸಂಗೀತದ ರಾಗಕ್ಕೆ ತಕ್ಕಂತೆ ಉತ್ಸಾಹದಿಂದ ಗರ್ಬಾ ನೃತ್ಯ ಮಾಡುತ್ತಿರುವ ವ

ನ್ಯೂಯಾರ್ಕ್: ನವರಾತ್ರಿ ಮಹೋತ್ಸವದ ಸಂಭ್ರಮದಲ್ಲಿರುವ ಭಾರತೀಯ ಸಮುದಾಯದ ಜೊತೆ ಸೇರಿಕೊಂಡ ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ , ಗರ್ಬಾ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಕಪ್ಪು ಸೂಟ್ ಮೇಲೆ ಸಾಂಪ್ರದಾಯಿಕ ದುಪಟ್ಟಾ ಧರಿಸಿರುವ ಮಮ್ದಾನಿ, ಗುಜರಾತಿ ಜನಪದ ಸಂಗೀತದ ರಾಗಕ್ಕೆ ತಕ್ಕಂತೆ ಉತ್ಸಾಹದಿಂದ ಗರ್ಬಾ ನೃತ್ಯ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.ಬಳಿಕ ಅವರು ಸ್ಥಳೀಯ ದೇವಾಲಯಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದಿದ್ದಾರೆ.Zohran Mamdani is playing garba ❤️ A right winger’s worst nightmare is that people might actually coexist without asking their permission. pic.twitter.com/V9FhmSrKWb— aree_shuklajii (@th_anonymouse) October 20, 2026 ನವರಾತ್ರಿಯ ಶುಭಾಶಯ: ಕೇವಲ ನೃತ್ಯ ಮಾಡಿದ್ದಲ್ಲದೇ ಮಮ್ದಾನಿ ಅವರು ಹಿಂದೂ ಬಾಂಧವರಿಗೆ ನವರಾತ್ರಿಯ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಭಾರತದ ವಿವಿಧ ಪ್ರಾಂತ್ಯಗಳಲ್ಲಿ ದುರ್ಗಾ ಪೂಜಾ, ದಶೇನ್, ದಸರಾ, ಗೊಂಬೆ ಹಬ್ಬ (ಗೊಲು) ಮತ್ತು ಸಿಂಧೂರ್ ಖೇಲಾ ಎಂಬ ವಿವಿಧ ಹೆಸರುಗಳಿಂದ ಆಚರಿಸುವ ಈ ಪವಿತ್ರ ಹಬ್ಬ ಪ್ರತಿಯೊಬ್ಬರ ಜೀವನದಲ್ಲೂ ನವಚೈತನ್ಯ ಮತ್ತು ಸಮೃದ್ಧಿಯನ್ನು ತರಲಿ' ಎಂದು ಹಾರೈಸಿದ್ದಾರೆ.This week, our Hindu neighbors celebrate the Goddess Durga during the festival of Navaratri. Our neighbors will dance Garba, venerate the Goddess Durga with Sindur Khela, receive Tika from elders, set up Golu in their homes, and so much more.Whether your family calls it Durga…— Mayor Zohran Kwame Mamdani (@NYCMayor) October 14, 2026 ನ್ಯೂಯಾರ್ಕ್ನ 112ನೇ ಮೇಯರ್ಭಾರತ ಸಂಜಾತ ಜೊಹ್ರಾನ್ ಮಮ್ದಾನಿ ಅವರು ನ್ಯೂಯಾರ್ಕ್ನ 112ನೇ ಮೇಯರ್. 34 ವರ್ಷದ ಅವರು ಅಮೆರಿಕದ ಅತಿ ದೊಡ್ಡ ನಗರದ ‘ಪ್ರಥಮ ಪ್ರಜೆ’ಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಮುಸ್ಲಿಂ ಹಾಗೂ ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಮ್ದಾನಿ ಅವರು ಭಾರತದ ಸಿನಿಮಾ ನಿರ್ದೇಶಕಿ, ನಿರ್ಮಾಪಕಿ ಮೀರಾ ನಾಯರ್ ಮತ್ತು ಪ್ರೊ. ಮಹಮದ್ ಮಮ್ದಾನಿ ಅವರ ಪುತ್ರ. ಅವರು ಜನಿಸಿದ್ದು ಉಗಾಂಡಾದ ಕಂಪಾಲದಲ್ಲಿ. ಅವರಿಗೆ 7 ವರ್ಷ ಆಗಿದ್ದಾಗ ಕುಟುಂಬವು ನ್ಯೂಯಾರ್ಕ್ಗೆ ವಲಸೆ ಬಂದು ನೆಲಸಿತ್ತು. ಮಮ್ದಾನಿ ಅವರಿಗೆ 2018ರಲ್ಲಿ ಅಮೆರಿಕದ ಪೌರತ್ವ ಲಭಿಸಿತ್ತು. ಮುಸ್ಲಿಂ ಮತ್ತು ಹಿಂದೂ ಎರಡೂ ಸಂಸ್ಕೃತಿಗಳ ವಾತಾವರಣದಲ್ಲಿ ಬೆಳೆದು ಬಂದಿರುವುದು ತಮ್ಮ ಮೌಲ್ಯಗಳನ್ನು ರೂಪಿಸಿದೆ ಎಂದು ಅವರು ಅನೇಕ ಬಾರಿ ಸ್ಮರಿಸಿದ್ದಾರೆ.