ಕಾನೂನು ಕಾಳಜಿ: ಬಾಲ್ಯದ ಆಟ, ಪೋಕ್ಸೊ ಪಾಠ– ಈ ಕಾಲದ ಮಕ್ಕಳ ರಕ್ಷಣೆ ಹೇಗೆ?
‘ನಾವು ಮಕ್ಕಳನ್ನು ಸರಿಯಾಗಿ ರಕ್ಷಿಸುತ್ತಿದ್ದೇವೆಯೇ? ಅವರ ನಡವಳಿಕೆಯಿಂದ ಎದುರಾಗಬಹುದಾದ ಪರಿಣಾಮಗಳನ್ನು ಅರ್ಥೈಸಿಕೊಳ್ಳಲು ಅವರನ್ನು ಸಜ್ಜುಗೊಳಿಸುತ್ತಿದ್ದೇವೆಯೇ?’ಮಗು ಎಂದರೆ ಯಾರು?ಸಣ್ಣ ದೇಹದಲ್ಲಿ ದೊಡ್ಡ ಮಿದುಳು ಹೊಂದಿರುವ ಜೀವಿಯೇ? ಅಥವಾ ಹುಟ್ಟುವಾಗಲೇ ತನಗೆಲ್ಲವೂ ತಿಳಿದಿದೆ ಎಂದು ಭಾವಿಸುವ ಮುಗ್ಧ ಜೀವವೇ?ಇಂದಿನ ಮಕ್ಕಳನ್ನು ನೋಡಿದಾಗ ಅವರು ನಿಜಕ್ಕೂ ಮಕ್ಕಳೇ ಅ
‘ನಾವು ಮಕ್ಕಳನ್ನು ಸರಿಯಾಗಿ ರಕ್ಷಿಸುತ್ತಿದ್ದೇವೆಯೇ? ಅವರ ನಡವಳಿಕೆಯಿಂದ ಎದುರಾಗಬಹುದಾದ ಪರಿಣಾಮಗಳನ್ನು ಅರ್ಥೈಸಿಕೊಳ್ಳಲು ಅವರನ್ನು ಸಜ್ಜುಗೊಳಿಸುತ್ತಿದ್ದೇವೆಯೇ?’ಮಗು ಎಂದರೆ ಯಾರು?ಸಣ್ಣ ದೇಹದಲ್ಲಿ ದೊಡ್ಡ ಮಿದುಳು ಹೊಂದಿರುವ ಜೀವಿಯೇ? ಅಥವಾ ಹುಟ್ಟುವಾಗಲೇ ತನಗೆಲ್ಲವೂ ತಿಳಿದಿದೆ ಎಂದು ಭಾವಿಸುವ ಮುಗ್ಧ ಜೀವವೇ?ಇಂದಿನ ಮಕ್ಕಳನ್ನು ನೋಡಿದಾಗ ಅವರು ನಿಜಕ್ಕೂ ಮಕ್ಕಳೇ ಅಥವಾ ಡಿಜಿಟಲ್ ಲೋಕದಲ್ಲಿ ಪ್ರವೀಣರಾಗಿರುವ ‘ಕಿರು ವಯಸ್ಕರೇ’ ಎಂಬ ಅನುಮಾನ ಮೂಡುವುದು ಸಹಜ. ಯಾಕೆಂದರೆ, ಸ್ಮಾರ್ಟ್ಫೋನ್ ಬಳಕೆ, ಸಾಮಾಜಿಕ ಜಾಲತಾಣಗಳ ಜ್ಞಾನದಲ್ಲಿ ಅವರು ಬಹಳ ಮುಂದಿದ್ದಾರೆ. ಪ್ರೀತಿ– ವೈರಾಗ್ಯದ ಬಗ್ಗೆ ವಯಸ್ಸಿಗೂ ಮೀರಿದ ಭಾವನೆ ಹೊಂದಿದ್ದಾರೆ. ಪೋಷಕರನ್ನು ಮುಜುಗರಕ್ಕೀಡು ಮಾಡಬಹುದಾದ ‘ಶಬ್ದ’ಗಳನ್ನೂ ಬಳಸುತ್ತಾರೆ.ಸರಿಯಾಗಿ ಶೂ ಧರಿಸಲು ಬಾರದಿದ್ದರೂ ‘ಹೃದಯದ ಇಮೋಜಿ’ ಕಳುಹಿಸುವುದರಲ್ಲಿ ಇಂದಿನ ಮಕ್ಕಳು ಎತ್ತಿದ ಕೈ. ಅಲ್ಲದೆ, ರಹಸ್ಯವಾಗಿ ಇನ್ಸ್ಟಾಗ್ರಾಂ ಖಾತೆ ಹೊಂದಿರುವುದು, ‘ಅಮ್ಮ, ನಿನಗೆ ನನ್ನ ಭಾವನೆಗಳು ಅರ್ಥವಾಗುವುದಿಲ್ಲ!’ ಎಂದು ಹಟ ಹಿಡಿಯುವುದು ಇಂದಿನ ಪೀಳಿಗೆಯ ಮಕ್ಕಳ ಲಕ್ಷಣ. ಆದರೆ, ಇದೆಲ್ಲದರ ನಡುವೆಯೂ ಗಂಭೀರ ಚರ್ಚೆಗೆ ಅರ್ಹವಾದ ವಿಷಯವೆಂದರೆ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ತಡೆ ಕಾಯ್ದೆ–2012 (ಪೋಕ್ಸೊ).ಕಾನೂನು ಕಾಳಜಿ: ಆರೋಪಿ ಅಪರಾಧಿಯಲ್ಲ; ತನಿಖೆಗೂ, ಬೆದರಿಕೆಗೂ ಇದೆ ವ್ಯತ್ಯಾಸಕಾನೂನು–ಕಾಳಜಿ: ಹೆತ್ತವರನ್ನು ನೋಡಿಕೊಳ್ಳದಿದ್ದರೆ, ಆಸ್ತಿ ಮರಳಿ ಪಡೆಯಬಹುದು!1990ರ ಬಾಲ್ಯದ ನೆನಪು ಹಾಗೂ ಇಂದಿನ ವಾಸ್ತವ1990ರ ದಶಕದ ಬಾಲ್ಯವನ್ನು ನೆನಪಿಸಿಕೊಂಡರೆ ಭಿನ್ನ ಚಿತ್ರಣ ಕಣ್ಣಮುಂದೆ ಬರುತ್ತದೆ. ಅಂದಿನ ಮಕ್ಕಳಿಗೆ ಸಂಬಂಧಗಳು, ಆಕರ್ಷಣೆ, ಸುರಕ್ಷಿತ ಅಥವಾ ಅಸುರಕ್ಷಿತ ಸ್ಪರ್ಶದ ಕುರಿತು ಅರಿವಿರಲಿಲ್ಲ. ಕಾಲು ನೋವು ಬರುವವರೆಗೆ ಅಥವಾ ಹೊಟ್ಟೆ ಹಸಿಯುವವರೆಗೆ ಮತ್ತು ಮನೆಯವರು ಜೋರಾಗಿ ಕೂಗಿ ಕರೆಯುವವರೆಗೆ ಆಟವಾಡುವುದೇ ದಿನಚರಿಯಾಗಿತ್ತು.‘ಮನೆಗೆ ಬಾ, ನಿಮ್ಮಪ್ಪನಿಗೆ ಹೇಳುತ್ತೇನೆ’ ಎಂದು ಅಮ್ಮ ಹೇಳಿದಾಗಲೇ ಭಯ ಉಂಟಾಗುತ್ತಿತ್ತು.ಅಂದು ಪೋಷಕರು ಮೊಬೈಲ್ ಆ್ಯಪ್ಗಳನ್ನು ಬಳಸುತ್ತಿರಲಿಲ್ಲ. ಸಾಮಾಜಿಕ ಜಾಲತಾಣಗಳು, ಚಾಟಿಂಗ್ ವೇದಿಕೆಗಳು, ದೊಡ್ಡವರಾಗುವ ಮೊದಲೇ, ‘ವಯಸ್ಕರ ವಿಚಾರ’ಗಳನ್ನು ಪರಿಚಯಿಸುವ ಸ್ಮಾರ್ಟ್ಫೋನ್ಗಳು ಆ ದಿನಗಳಲ್ಲಿ ಇರಲಿಲ್ಲ. ಹಾಗೆಂದ ಮಾತ್ರಕ್ಕೆ 1990ರ ದಶಕವು ಪರಿಪೂರ್ಣವಾಗಿತ್ತು ಎಂದರ್ಥವಲ್ಲ. ಲೈಂಗಿಕ ಶೋಷಣೆ ಅಂದೂ ಇತ್ತು. ಆದರೆ, ತಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮಾತನಾಡುವ ಧೈರ್ಯವಾಗಲಿ, ವಿಷಯವನ್ನು ತಿಳಿಸುವ ರೀತಿಯಾಗಲಿ ಸಂತ್ರಸ್ತ ಮಕ್ಕಳಿಗೆ ತಿಳಿದಿರಲಿಲ್ಲ. ಹಾಗಾಗಿ, ಎಷ್ಟೋ ಜನರು ಮೌನವಾಗಿ ಆ ನೋವುಗಳನ್ನು ಅನುಭವಿಸಿದ್ದರು. ಆದರೆ, ಈಗಿನ ವಾತಾವರಣ ಭಿನ್ನವಾಗಿದೆ. ಮಕ್ಕಳಿಗೆ ಧೈರ್ಯವೂ ಇದೆ.ಹಾಗೆಂದ ಮಾತ್ರಕ್ಕೆ ಅವರಿಗೆ ಎಲ್ಲವೂ ತಿಳಿದಿದೆ ಎಂದಲ್ಲ. ಡಿಜಿಟಲ್ ಯುಗದ ಪರಿಣಾಮವಾಗಿ ಅವರು ಬಹುಬೇಗನೆ ಕೆಲ ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ಪ್ರೇಮ, ಸಂಬಂಧ, ಲೈಂಗಿಕ ವಿಚಾರಗಳ ಬಗ್ಗೆ ವಯಸ್ಸಿಗೆ ಮೀರಿದ ಭಾವನೆ ಅವರಲ್ಲಿವೆ. ಆದರೆ, ಈ ವಿಚಾರಗಳಲ್ಲಿ ಇರಬೇಕಾದ ಪರಿಪಕ್ವತೆ ಅವರಲ್ಲಿ ಇಲ್ಲ. ‘ನನಗೆ ಎಲ್ಲವೂ ಗೊತ್ತು’ ಎಂದು ಹೇಳುವ ಮಗುವಿಗೆ, ತನ್ನ ನಡೆಯಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಅರಿವಿಲ್ಲ.ಕಾನೂನು–ಕಾಳಜಿ: ರಸ್ತೆ ಬದಿ ವಾಹನ ಪಾರ್ಕಿಂಗ್ ಕುರಿತು ಕಾನೂನು ಹೇಳುವುದೇನು?ಕಾನೂನು–ಕಾಳಜಿ: ಶಾಲೆಯಲ್ಲಿ ಮಕ್ಕಳನ್ನು ಶಿಕ್ಷಿಸಬೇಕೆ; ವ್ಯವಸ್ಥೆ ಎಡವಿದ್ದೆಲ್ಲಿ?ಡಿಎಲ್ಎಸ್ಎ ಪ್ಯಾನೆಲ್ ವಕೀಲೆಯಾಗಿ ನನ್ನ ಅನುಭವಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (ಡಿಎಲ್ಎಸ್ಎ) ಪ್ಯಾನೆಲ್ ವಕೀಲೆಯಾಗಿ ಕಾರ್ಯನಿರ್ವಹಿಸಿದ ಅನುಭವದಲ್ಲಿ, ಪೋಕ್ಸೊ ಕಾಯ್ದೆಗೆ ಸಂಬಂಧಿಸಿದ ಹಲವು ಪ್ರಕರಣಗಳು ಮನಸ್ಸಿನಲ್ಲಿ ಉಳಿದುಹೋಗಿವೆ. ಕೆಲವು ಪ್ರಕರಣಗಳು ಹೃದಯವಿದ್ರಾವಕ. ಓದು ಬರಹ, ಸ್ನೇಹ ಮತ್ತು ಆಟಗಳ ಬಗ್ಗೆ ಯೋಚಿಸಬೇಕಾದ ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ಆ ಮಗುವಿನ ಬಾಲ್ಯ ಏನಾಗಬೇಡ.ಅತ್ಯಂತ ಬೇಸರದ ಸಂಗತಿಯೆಂದರೆ, ತಮಗೆ ಏನಾಯಿತು ಎಂಬುದನ್ನು ಹೇಳುವ ಬಗೆ ಮಕ್ಕಳಿಗೆ ತಿಳಿದಿರುವುದಿಲ್ಲ. ತಮ್ಮೊಂದಿಗೆ ನಡೆದದ್ದು ತಪ್ಪು ಎಂಬುದೂ ಕೆಲವೊಮ್ಮೆ ಅವರಿಗೆ ಅರ್ಥವಾಗಿರುವುದಿಲ್ಲ. ತಮ್ಮನ್ನೇ ನಿಂದಿಸಿಕೊಳ್ಳುತ್ತಾರೆ. ವಿಚಾರ ಹೇಳಿದರೆ, ಪೋಷಕರು ಬೈಯುತ್ತಾರೆಂದು ಹೆದರುತ್ತಾರೆ. ತನ್ನ ಸುತ್ತಲಿನವರನ್ನು ನಂಬುತ್ತಿದ್ದ ಮಗು ಭಯಗೊಂಡು, ಗೊಂದಲಕ್ಕೊಳಗಾಗುತ್ತದೆ. ಅಂತರ್ಮುಖಿಯಾಗಿ ಬದಲಾಗುತ್ತದೆ.ಇಂತಹ ಮಗು ಕೊನೆಗೂ ಘಟನೆಯನ್ನು ತಿಳಿಸಿದಾಗ, ‘ಮುಂಚಿತವಾಗಿ ಏಕೆ ಹೇಳಲಿಲ್ಲ?’ ಎಂದು ಪೋಷಕರು ಗದರಬಾರದು. ‘ಯಾವ ಭಯವೂ ಬೇಡ. ನಿನ್ನೊಂದಿಗೆ ನಾವಿದ್ದೇವೆ’ ಎಂದು ಧೈರ್ಯ ತುಂಬಬೇಕು.ವಯಸ್ಕರೇ ಅರ್ಥಮಾಡಿಕೊಳ್ಳಲು ಹೆಣಗಾಡುವ ಪರಿಸ್ಥಿತಿಗಳಲ್ಲಿ ಮಕ್ಕಳು ಬುದ್ಧಿವಂತಿಕೆಯಿಂದ ವರ್ತಿಸಬೇಕು ಎಂದು ಬಯಸುತ್ತೇವೆ. ಆದರೆ ಅನಾಹುತ ನಡೆದಾಗ, ಕೃತ್ಯ ಎಸಗಿದ ವ್ಯಕ್ತಿಯನ್ನು ಪ್ರಶ್ನಿಸುವ ಬದಲು ಮಗುವಿನ ನಡವಳಿಕೆಯನ್ನೇ ಪ್ರಶ್ನಿಸುತ್ತೇವೆ.ಬಾಲ್ಯ ನಮ್ಮ ಜೀವನದ ‘ಸುವರ್ಣ ದಿನ’ಗಳು ಎಂಬ ಮಾತಿದೆ. ಅಂತೆಯೇ, ಮಕ್ಕಳು ಬಾಲ್ಯವನ್ನು ಮುಗ್ಧತೆಯಿಂದ ಕಳೆಯಬೇಕೇ ಹೊರತು, ಯಾರೋ ಮಾಡಿದ ತಪ್ಪಿಗೆ ತಾನು ಪರಿತಪಿಸುವಂತಾಗಬಾರದು. ಜೀವನಪರ್ಯಂತ ಅದೇ ಕೆಟ್ಟ ನೆನಪಿನಲ್ಲಿ ಯಾತನೆ ಅನುಭವಿಸುವಂತಾಗಬಾರದು.ಹದಿಹರೆಯದ ಪ್ರೇಮ ಪ್ರಸಂಗ ಮತ್ತು ಕಾನೂನುಇದೊಂದು ದೃಷ್ಟಾಂತ. ‘15 ವರ್ಷದ ಬಾಲಕಿ ಮತ್ತು 18 ವರ್ಷದ ಬಾಲಕ ಪರಸ್ಪರ ಪ್ರೀತಿಸುತ್ತಿದ್ದಾರೆ. ಅವರು ನಿತ್ಯವೂ ಚಾಟ್ ಮಾಡುತ್ತಾರೆ. ಹೃದಯದ ಇಮೋಜಿಗಳನ್ನು ಕಳುಹಿಸುತ್ತಾರೆ. ಕೆಲವರು ಮುಂದುವರಿದು ಚುಂಬನವನ್ನೂ ಮಾಡಿರುತ್ತಾರೆ. ತಾವು ‘ಪ್ರೇಮಲೋಕ’ದಲ್ಲಿ ಜೀವಿಸುತ್ತಿದ್ದೇವೆ ಎಂದು ಭಾವಿಸುತ್ತಾರೆ. ಆದರೆ, ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ ಎಂದು ಪೋಷಕರು ಭಾವಿಸಿರುತ್ತಾರೆ.ಒಂದು ದಿನ ಆ ಹುಡುಗಿಗೆ ಗರ್ಭಧಾರಣೆಯಾಗಿರುತ್ತದೆ. ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತದೆ. ಪೊಲೀಸ್ ದೂರು ದಾಖಲಾಗಿ, ಕಾನೂನು ಪ್ರಕ್ರಿಯೆಗಳು ಆರಂಭವಾಗುತ್ತವೆ. ಹದಿಹರೆಯದವರ ಪ್ರೇಮ ಸಂಬಂಧವು ಕ್ರಿಮಿನಲ್ ತನಿಖೆಯಾಗಿ ಮಾರ್ಪಡುತ್ತದೆ. ಬಾಲಕನು ಪೋಕ್ಸೊ ಕಾಯ್ದೆಯಡಿ ವಿಚಾರಣೆ, ಜೈಲು ಶಿಕ್ಷೆಯ ಸಾಧ್ಯತೆ ಮತ್ತು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.ಪೋಕ್ಸೊ ಕಾಯ್ದೆಯ ಸೆಕ್ಷನ್ 2(ಡಿ) ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಅಪ್ರಾಪ್ತ ವಯಸ್ಸಿನವರು ಎಂದು ಪರಿಗಣಿಸಲಾಗುತ್ತದೆ. ಪ್ರೀತಿಸುತ್ತಿದ್ದೇವೆ ಎಂಬ ಕಾರಣಕ್ಕೆ ಪ್ರಾಪ್ತವಯಸ್ಕರಲ್ಲದವರ ಸಮ್ಮತಿಯ ಲೈಂಗಿಕ ಚಟುವಟಿಕೆಗೆ ಕಾನೂನಿನಲ್ಲಿ ಯಾವುದೇ ಸಾಮಾನ್ಯ ವಿನಾಯಿತಿ ಇಲ್ಲ. ಆದ್ದರಿಂದ, 15 ವರ್ಷದ ಬಾಲಕಿಯು 18 ವರ್ಷದ ಬಾಲಕನೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದಾಗ, ಬಾಲಕಿಯ ಸ್ವಯಂಪ್ರೇರಿತ ಸಮ್ಮತಿಯು ಪೋಕ್ಸೊ ಅಡಿಯಲ್ಲಿ ರಕ್ಷಣೆಯಾಗುವುದಿಲ್ಲ.ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಸಂತ್ರಸ್ತೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೆ ಸೆಕ್ಷನ್ 4ರ ಅಡಿಯಲ್ಲಿ ಕನಿಷ್ಠ 10 ವರ್ಷಗಳಿಂದ ಜೀವಾವಧಿ ಶಿಕ್ಷೆಯವರೆಗೆ ಅವಕಾಶವಿದೆ. ಆದರೆ, ಎಲ್ಲ ಪ್ರಕರಣಗಳಲ್ಲೂ ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ಅಥವಾ ₹5 ಲಕ್ಷ ದಂಡ ವಿಧಿಸಲಾಗುವುದಿಲ್ಲ. ಶಿಕ್ಷೆಯು ಅಪರಾಧ ಮತ್ತು ಅನ್ವಯವಾಗುವ ಕಾನೂನನ್ನು ಆಧರಿಸಿರುತ್ತದೆ.ಬಾಲಕಿಯ ಸಮ್ಮತಿ ಮತ್ತು ಸುಪ್ರೀಂ ಕೋರ್ಟ್ ತೀರ್ಪು18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕ ಅಥವಾ ಬಾಲಕಿಯ ಸಮ್ಮತಿ ಪಡೆದು, ಅವರೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದರೆ ಪೋಕ್ಸೊ ಕಾಯ್ದೆಯು ಅದನ್ನು ಒಪ್ಪುವುದಿಲ್ಲ. ‘ನಾವಿಬ್ಬರು ಪ್ರೀತಿಸುತ್ತಿದ್ದೇವೆ. ಆಕೆ ನನಗೆ ರೊಮ್ಯಾಂಟಿಕ್ ಸಂದೇಶಗಳನ್ನು ಕಳುಹಿಸಿದ್ದಾಳೆ. ಅವಳ ಅನುಮತಿ ಪಡೆದೇ ನಾನು ಮುಂದುವರಿದಿದ್ದೆ’ ಎಂದು ಗೋಗರೆದರೂ ಕಾನೂನು ಅದನ್ನು ಮಾನ್ಯಗೊಳಿಸುವುದಿಲ್ಲ.2025ರ ‘ಇನ್ ರೀ: ರೈಟ್ ಟು ಪ್ರೈವಸಿ ಆಫ್ ಅಡೋಲೆಸೆಂಟ್ಸ್’ (In Re: Right to Privacy of Adolescents) ಸ್ವಯಂಪ್ರೇರಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಕೂಡ ನ್ಯಾಯಾಲಯಗಳು ಈ ವಿಷಯಗಳನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತವೆ ಎಂಬುದನ್ನು ತೋರಿಸುತ್ತದೆ.ಹದಿಹರೆಯದವರು 30 ವರ್ಷ ವಯಸ್ಸಿನ ವ್ಯಕ್ತಿಯಷ್ಟು ಭಾವನಾತ್ಮಕ ಪರಿಪಕ್ವತೆಯನ್ನು ಹೊಂದಿರುತ್ತಾರೆಂದರೆ ಅದು ಸಾಧ್ಯವೆ? ಅಥವಾ ಅವರಿಗೆ ಸಂಬಂಧಗಳ ಅರಿವೇ ಇಲ್ಲ ಎಂದರೆ ಒಪ್ಪಬೇಕೇ?.ಹದಿಹರೆಯದವರ ಪ್ರೇಮ ಸಂಬಂಧವನ್ನು, ವಯಸ್ಕರು ಎಸಗುವ ದೌರ್ಜನ್ಯ ಮತ್ತು ಶೋಷಣೆಯ ಪ್ರಕರಣಗಳಂತೆಯೇ ಪರಿಗಣಿಸಬೇಕೇ? ಈ ವಿಚಾರವಾಗಿ ಶಾಸನಸಭೆಗಳ ಸದಸ್ಯರು ಮತ್ತು ಸಮಾಜ ಆಲೋಚಿಸಬೇಕಿದೆ.ಪೋಷಕರು ಹಾಗೂ ಶಾಲೆಗಳ ಕರ್ತವ್ಯಪೋಷಕರಾದವರು,ಅ ವರ ತಂದೆ– ತಾಯಿಗೆ ಎಷ್ಟು ವಿಧೇಯರಾಗಿದ್ದಾರೆ ಎನ್ನುವುದಕ್ಕಿಂತ, ಮಕ್ಕಳೊಂದಿಗೆ ಸ್ನೇಹಭಾವದಿಂದ ವರ್ತಿಸುವುದು ಇಂದಿನ ಅಗತ್ಯ. ಏಕಾಏಕಿ ಹೊಡೆಯುವುದು, ಸುಖಾಸುಮ್ಮನೆ ಬೈಯ್ಯುವುದನ್ನು ನಿಲ್ಲಿಸಿ. ಸ್ನೇಹ, ಪ್ರೀತಿ, ಸಂಬಂಧ, ಖಾಸಗಿತನ, ಆನ್ಲೈನ್ ಶೋಷಣೆ, ಸ್ಪರ್ಶ, ಲೈಂಗಿಕತೆ... ಈ ರೀತಿಯ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ. ಖಾಸಗಿ ಫೋಟೊಗಳ ದುರ್ಬಳಕೆ, ಪ್ರೀತಿಯ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗುವವರ ಬಗ್ಗೆ ಎಚ್ಚರವಿರುವಂತೆ ತಿಳಿಸಿ. ಸಮ್ಮತಿ ಇಲ್ಲದೆ ದೇಹವನ್ನು ಸ್ಪರ್ಶಿಸುವ ಅಧಿಕಾರ ಯಾರಿಗೂ ಇಲ್ಲ ಎಂಬುದನ್ನು ತಿಳಿ ಹೇಳಿ.ಒಂದು ವೇಳೆ, ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು, ಆ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಮುಂದೆಬಂದಾಗ ತಾಳ್ಮೆಯಿಂದ ಆಲಿಸಿ. ಅರ್ಧಂಬರ್ಧ ಕೇಳಿಸಿಕೊಂಡು, ಕೂಗಾಡದಿರಿ. ಅವರ ಮೇಲೆಯೇ ತಪ್ಪು ಹೊರಿಸಬೇಡಿ. ಅಗತ್ಯವಿದ್ದರೆ, ವೃತ್ತಿಪರರಿಂದ ನೆರವು ಪಡೆಯಿರಿ. ರಾಜಿ– ಪಂಚಾಯಿತಿಗೆ ಮುಂದಾಗಬೇಡಿ.ಅಪರಾಧ ಎಸಗಿದವರು ಅಪ್ರಾಪ್ತ ವಯಸ್ಸಿನವರಾಗಿದ್ದರೂ, ಸಂಬಂಧಪಟ್ಟ ಕಾನೂನಿನ ಅಡಿ ಶಿಕ್ಷೆಗೆ ಅವರು ಅರ್ಹರು.ಶಾಲೆಗಳು ಕೇವಲ ಪಠ್ಯ ಬೋಧಿಸಿ, ತಮ್ಮ ಜವಾಬ್ದಾರಿ ಮುಗಿಯಿತೆಂದು ಭಾವಿಸಬಾರದು. ಖಾಸಗಿತನ, ದೇಹ ಸ್ಪರ್ಶ, ಪ್ರೀತಿಯ ನೆಪದಲ್ಲಿ ನಡೆಯಬಹುದಾದ ಲೈಂಗಿಕ ದೌರ್ಜನ್ಯ, ಸಾಮಾಜಿಕ ಜಾಲತಾಣಗಳ ಮಿತಬಳಕೆ ಮತ್ತು ಸಂಬಂಧಗಳ ಬಗ್ಗೆ ಅರಿವು ಮೂಡಿಸಬೇಕು. ಈ ವಿಚಾರಗಳು ಶಿಕ್ಷಣದ ಭಾಗವಾಗಬೇಕು. ಪೋಕ್ಸೊ ಕಾಯ್ದೆಯ ಸೆಕ್ಷನ್ 19ರ ಪ್ರಕಾರ, ಅಪರಾಧದ ಕುರಿತು ಮಾಹಿತಿ ಅಥವಾ ಅನುಮಾನ ಬಂದ ತಕ್ಷಣ ಅದನ್ನು ವಿಶೇಷ ಬಾಲಾಪರಾಧಿ ಪೊಲೀಸ್ ಘಟಕಕ್ಕೆ ಅಥವಾ ಸ್ಥಳೀಯ ಪೊಲೀಸರಿಗೆ ವರದಿ ಮಾಡುವುದು ಕಡ್ಡಾಯ. ಶಾಲೆಗಳು ಈ ಕಾನೂನು ಹೊಣೆಗಾರಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಮಗುವಿನ ಘನತೆ ಮತ್ತು ಕಾನೂನಿನ ಚೌಕಟ್ಟುಪೋಕ್ಸೊ ಕಾಯ್ದೆಯು ಕೇವಲ ಶಿಕ್ಷೆಯನ್ನು ವಿಧಿಸುವ ಶಾಸನವಲ್ಲ. ಅದು ಮಗು–ಸ್ನೇಹಿ ವಾತಾವರಣವನ್ನು ನಿರ್ಮಿಸುತ್ತದೆ. ಸೆಕ್ಷನ್ 28 ಮತ್ತು 33 ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮತ್ತು ವಿಚಾರಣಾ ಪ್ರಕ್ರಿಯೆಯ ಬಗ್ಗೆ ತಿಳಿಸುತ್ತವೆ. ಸೆಕ್ಷನ್ 36 ಸಂತ್ರಸ್ತ ಮಗು ಆರೋಪಿಗೆ ಮುಖಾಮುಖಿಯಾಗದೆ ಗೋಪ್ಯವಾಗಿ ಸಾಕ್ಷ್ಯ ನುಡಿಯಲು ಅವಕಾಶ ನೀಡಿದರೆ, ಸೆಕ್ಷನ್ 37 ಮುಚ್ಚಿದ ಬಾಗಿಲ ವಿಚಾರಣೆಗೆ ಅವಕಾಶ ಕಲ್ಪಿಸುತ್ತದೆ. ಸೆಕ್ಷನ್ 23ರ ಅಡಿಯಲ್ಲಿ ಮಾಧ್ಯಮಗಳು ಮಗುವಿನ ಗುರುತನ್ನು ಬಹಿರಂಗಪಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.ಅದೇ ರೀತಿ, ಆರೋಪಿಗೂ ನ್ಯಾಯಸಮ್ಮತ ವಿಚಾರಣೆಯ ಹಕ್ಕಿರುತ್ತದೆ. ಸೆಕ್ಷನ್ 29 ಮತ್ತು 30 ಶಾಸನಬದ್ಧ ಪೂರ್ವಭಾವಿ ಊಹೆಗಳನ್ನು ಹೊಂದಿದ್ದು, ಊಹೆಗಳಿಗಿಂತಲೂ ಸಾಕ್ಷ್ಯಾಧಾರಗಳು ಮುಖ್ಯವಾಗುತ್ತವೆ ಎಂದು ಹೇಳುತ್ತವೆ. ಕಾಯ್ದೆಯ ಗುರಿ ಮಕ್ಕಳ ರಕ್ಷಣೆ ಮತ್ತು ನ್ಯಾಯಸಮ್ಮತ ಕಾನೂನು ಪ್ರಕ್ರಿಯೆಯನ್ನು ಖಚಿತಪಡಿಸುವುದೇ ಆಗಿದೆ.ಸಂರಕ್ಷಣೆ ಮತ್ತು ಜಾಗೃತಿಯ ಅಗತ್ಯನನ್ನ ವೃತ್ತಿಯಲ್ಲಿ ಒಂದೊಂದು ಪೋಕ್ಸೊ ಪ್ರಕರಣಗಳ ಹಿಂದೆಯೂ ಹಲವು ಆಯಾಮಗಳಿರುವುದನ್ನು ನೋಡಿದ್ದೇನೆ. ತನ್ನ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ಹೆಣಗಾಡುತ್ತಿರುವ ಮಗು, ನ್ಯಾಯವನ್ನು ಅರಸಿ ಅಲೆಯುತ್ತಿರುವ ಕುಟುಂಬ, ಪ್ರೀತಿ ಅಥವಾ ಇನ್ಯಾವುದೋ ಕಾರಣದಿಂದಾಗಿ ತಾನು ಎಸಗಿದ ಕೃತ್ಯದ ಕಾನೂನು ಪರಿಣಾಮಗಳನ್ನು ಅರ್ಥಮಾಡಿಕೊಳ್ಳದ ಹದಿಹರೆಯದ ಬಾಲಕ, ತನ್ನ ಮೇಲಿನ ಸುಳ್ಳು ಆರೋಪಗಳಿಂದ ಮುಕ್ತನಾಗಲು ಹೋರಾಡುವ ಆರೋಪಿ– ಹೀಗೆ ಭಿನ್ನ ಆಯಾಮಗಳಿವೆ. ಕಾನೂನು ಸಂತ್ರಸ್ತ ವ್ಯಕ್ತಿ– ಆರೋಪಿಗೆ ಸಂಬಂಧಿಸಿದವರು ಸೃಷ್ಟಿಸುವ ಗದ್ದಲವನ್ನು ಲೆಕ್ಕಿಸದೆ, ಕೇವಲ ವಾಸ್ತವ ಸಂಗತಿಗಳನ್ನು ಪರಿಗಣಿಸಬೇಕು.ಪೋಷಕರು ಮತ್ತು ಮಕ್ಕಳ ನಡುವೆ ಮುಕ್ತ ಸಂವಹನ, ಶಾಲೆಗಳಲ್ಲಿ ಅರ್ಥಪೂರ್ಣ ಶಿಕ್ಷಣ, ಸಂವೇದನಾಶೀಲ ತನಿಖೆ, ಸಮಯೋಚಿತ ನ್ಯಾಯ... ಇವೆಲ್ಲವೂ ಈ ಕಾಲದ ಅಗತ್ಯಗಳಾಗಿವೆ.ಈಗ, ಆರಂಭದಲ್ಲಿ ನಾನು ಕೇಳಿದ ಪ್ರಶ್ನೆಯನ್ನು ನೆನಪಿಸಿಕೊಳ್ಳಿ. ಮಗು ಎಂದರೆ, ಸಣ್ಣ ದೇಹದಲ್ಲಿ ದೊಡ್ಡ ಮಿದುಳು ಹೊಂದಿರುವ ಜೀವಿಯಷ್ಟೇ ಅಲ್ಲ. ಸ್ಪಂದನೆ, ಮಾರ್ಗದರ್ಶನ ಮತ್ತು ರಕ್ಷಣೆ ಬಯಸುವ ಹಾಗೂ ಭಯವಿಲ್ಲದ ವಾತಾವರಣ... ಇವುಗಳನ್ನು ಬಯಸುವ ಅಮಾಯಕ ಜೀವಿ. ನಾವು ಚಿಕ್ಕವರಿದ್ದಾಗ ಸುಸ್ತಾಗುವವರೆಗೆ ಆಡುವುದನ್ನು ಬಯಸುತ್ತಿದ್ದೆವು ನಿಜ. ಆದರೆ, ಈಗಿನ ಮಕ್ಕಳಿಗೆ ಸಂಬಂಧಗಳ ಬಗ್ಗೆ, ತಂತ್ರಜ್ಞಾನಗಳ ಅರಿಯುವ ಬಗ್ಗೆ ಕುತೂಹಲ ಇರಬಹುದು. ನಮ್ಮ ಮಕ್ಕಳು ನಾವು ಇದ್ದಂತೆಯೇ ಇರಬೇಕೆಂದು ಬಯಸುವುದು ತಪ್ಪಾಗಬಹುದು.ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಬದಲಾವಣೆಗಳು ನಿಲ್ಲುವುದೂ ಇಲ್ಲ. ಆದರೆ, ನಮ್ಮ ಮಕ್ಕಳು ಇಂದಿನ ಅಗತ್ಯದ ವಿಚಾರಗಳ ಬಗ್ಗೆ ಅರಿವು ಹೊಂದಿರುವಂತೆ ಮಾಡುವುದು ನಮ್ಮ ಜವಾಬ್ದಾರಿ. ನಮ್ಮ ಮಕ್ಕಳು ಅಪರಾಧ ಕೃತ್ಯಗಳನ್ನು ಎಸಗದಂತೆ ಮತ್ತು ದೌರ್ಜನ್ಯಕ್ಕೆ ಗುರಿಯಾಗದಂತೆ ಅವರಲ್ಲಿ ಅರಿವು ಮೂಡಿಸಬೇಕಿದೆ. ಸಣ್ಣ ವಯಸ್ಸಿನಲ್ಲೇ ಅವರು ವಯಸ್ಕರಂತೆ ವರ್ತಿಸಬೇಕೆಂದು ಬಯಸುವುದು ತರವಲ್ಲ.ಬಾಲ್ಯವು ಅಪರಾಧವಲ್ಲ, ಪ್ರೀತಿಯು ಸಮ್ಮತಿಗೆ ಪರ್ಯಾಯವಲ್ಲ. ಮಗುವಿಗೆ ಬಾಲ್ಯದ ಹಕ್ಕಿದೆ, ಅದನ್ನು ರಕ್ಷಿಸುವುದು ವಯಸ್ಕರ ಹೊಣೆ.