ಮನೆಯಲ್ಲಿರುವ ಸೀಲಿಂಗ್ ಫ್ಯಾನ್ ಸ್ವಚ್ಛಗೊಳಿಸಲು ಈ ಸಲಹೆ ಪಾಲಿಸಿ
ಬಹುತೇಕ ಎಲ್ಲರ ಮನೆಗಳಲ್ಲೂ ಸೀಲಿಂಗ್ ಫ್ಯಾನ್ ಇರುತ್ತದೆ. ಕಾಲಕಾಲಕ್ಕೆ ಅವುಗಳನ್ನು ಸ್ವಚ್ಛಗೊಳಿಸದಿದ್ದರೆ, ಧೂಳು ಹಾಗೂ ಜೇಡರ ಬಲೆಗಳಿಂದ ಕೊಳಕಾಗಿ ಕಾಣುವುದಲ್ಲದೆ, ಫ್ಯಾನ್ ರೆಕ್ಕೆಗಳ ಮೇಲೆ ಧೂಳು ಸಂಗ್ರಹಗೊಳ್ಳುತ್ತದೆ. ಇದನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಬೆಲೆಯ ಲಿಕ್ವಿಡ್ಗಳೇ ಬೇಕಾಗಿಲ್ಲ. ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ಸುಲಭವಾಗ

ಬಹುತೇಕ ಎಲ್ಲರ ಮನೆಗಳಲ್ಲೂ ಸೀಲಿಂಗ್ ಫ್ಯಾನ್ ಇರುತ್ತದೆ. ಕಾಲಕಾಲಕ್ಕೆ ಅವುಗಳನ್ನು ಸ್ವಚ್ಛಗೊಳಿಸದಿದ್ದರೆ, ಧೂಳು ಹಾಗೂ ಜೇಡರ ಬಲೆಗಳಿಂದ ಕೊಳಕಾಗಿ ಕಾಣುವುದಲ್ಲದೆ, ಫ್ಯಾನ್ ರೆಕ್ಕೆಗಳ ಮೇಲೆ ಧೂಳು ಸಂಗ್ರಹಗೊಳ್ಳುತ್ತದೆ. ಇದನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಬೆಲೆಯ ಲಿಕ್ವಿಡ್ಗಳೇ ಬೇಕಾಗಿಲ್ಲ. ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ಸುಲಭವಾಗಿ ಸ್ವಚ್ಛಗೊಳಿಸಬಹುದು. ಹಳೆಯ ದಿಂಬಿನ ಕವರ್ಮನೆಯಲ್ಲಿ ಬಳಸದ ಹಳೆಯ ದಿಂಬಿನ ಕವರ್ ತೆಗೆದುಕೊಂಡು ಅದನ್ನು ಫ್ಯಾನ್ ರೆಕ್ಕೆಯ ಮೇಲೆ ಹಾಕಿ. ಬಳಿಕ ಕವರ್ ಅನ್ನು ಮೆಲ್ಲಗೆ ಹೊರಳಿಸುತ್ತಾ ಹೊರಕ್ಕೆ ಎಳೆದುಕೊಂಡರೆ, ಫ್ಯಾನ್ ಮೇಲಿನ ಸಂಪೂರ್ಣ ಧೂಳು ಕವರ್ನೊಳಗೆಯೇ ಸಂಗ್ರಹಗೊಳ್ಳುತ್ತದೆ. ಇದರಿಂದ ಧೂಳು ನೆಲದ ಮೇಲೆ ಬರುವುದು ತಪ್ಪುತ್ತದೆ.ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿಮೈಕ್ರೋಫೈಬರ್ ಬಟ್ಟೆಫ್ಯಾನ್ ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆ ಅತ್ಯುತ್ತಮ ಆಯ್ಕೆಯಾಗಿದೆ. ಒಣ ಅಥವಾ ಸ್ವಲ್ಪ ಒದ್ದೆಯಾದ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಒಂದು ಬಾರಿ ಒರೆಸಿದರೆ, ಧೂಳು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.ವಿನೆಗರ್ ಮತ್ತು ನೀರಿನ ಮಿಶ್ರಣಅಡುಗೆ ಮನೆಯಲ್ಲಿರುವ ಫ್ಯಾನ್ ಮೇಲ್ಮೈ ಕೇವಲ ಧೂಳಿನಿಂದಷ್ಟೇ ಅಲ್ಲದೆ, ಜಿಡ್ಡಿನ ಕಲೆಗಳಿಂದಲೂ ಕೂಡಿರುತ್ತದೆ. ಈ ಕಠಿಣ ಜಿಡ್ಡಿನ ಕಲೆಗಳನ್ನು ಹೋಗಲಾಡಿಸಲು ಒಂದು ಬಟ್ಟಲಿಗೆ ವಿನೆಗರ್ ಹಾಗೂ ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಮಿಶ್ರಣ ಮಾಡಿ. ಬಳಿಕ ಬಟ್ಟೆಯನ್ನು ಅದ್ದಿ ಫ್ಯಾನ್ ಅನ್ನು ಒರೆಸಿದರೆ, ಹಠಮಾರಿ ಜಿಡ್ಡು ಸ್ವಚ್ಛವಾಗುತ್ತದೆ.ಮಾಸ್ಕ್ ಧರಿಸಿಫ್ಯಾನ್ ಸ್ವಚ್ಛಗೊಳಿಸುವಾಗ ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆಯನ್ನು ಧರಿಸುವುದು ಒಳ್ಳೆಯದು. ತಿಂಗಳುಗಟ್ಟಲೆ ಫ್ಯಾನ್ ಮೇಲೆ ಕುಳಿತಿರುವ ಧೂಳು ಗಾಳಿಯಲ್ಲಿ ಸೇರಿ ಉಸಿರಾಟದ ಸಮಸ್ಯೆ ಅಥವಾ ಅಲರ್ಜಿಗೆ ಕಾರಣವಾಗಬಹುದು. ಹೀಗಾಗಿ ಸ್ವಚ್ಛಗೊಳಿಸುವ ಮುನ್ನ ಎಚ್ಚರಿಕೆ ವಹಿಸುವುದು ಉತ್ತಮ.ಗೃಹಾಲಂಕಾರ; ಸೌಂದರ್ಯದ ಪ್ರತಿಬಿಂಬಮೊದಲು ಫ್ಯಾನ್ ಸ್ವಚ್ಛಗೊಳಿಸಿಮನೆ ಒರೆಸುವ ಅಥವಾ ನೆಲ ಸ್ವಚ್ಛಗೊಳಿಸುವ ಮುನ್ನವೇ ಫ್ಯಾನ್ ಅನ್ನು ಸ್ವಚ್ಛಗೊಳಿಸುವುದು ಸರಿಯಾದ ಕ್ರಮ. ಮೊದಲು ಫ್ಯಾನ್ ಒರೆಸಿದಾಗ ಅದರಲ್ಲಿರುವ ಧೂಳು ಕೆಳಗೆ ಬೀಳುತ್ತದೆ. ನಂತರ ನೆಲವನ್ನು ಒರೆಸಿದರೆ, ಮನೆಯನ್ನು ಎರಡೆರಡು ಬಾರಿ ಸ್ವಚ್ಛಗೊಳಿಸುವ ಪರಿಶ್ರಮ ತಪ್ಪುತ್ತದೆ.ಲಾಂಗ್-ಹ್ಯಾಂಡ್ ಡಸ್ಟರ್ (ಉದ್ದನೆಯ ಕೋಲಿನ ಬ್ರಷ್):ಉದ್ದವಾದ ಹ್ಯಾಂಡ್ ಇರುವ ಡಸ್ಟರ್ ಬಳಸಿಕೊಂಡು ನೆಲದ ಮೇಲೆಯೇ ನಿಂತು ಫ್ಯಾನ್ ಒರೆಸಬಹುದು. ಕುರ್ಚಿ ಅಥವಾ ಮೇಜಿನ ಮೇಲೆ ನಿಂತು ಸ್ವಚ್ಛಗೊಳಿಸುವಾಗ ಆಯತಪ್ಪಿ ಬೀಳುವ ಅಪಾಯವಿರುತ್ತದೆ. ಉದ್ದನೆಯ ಡಸ್ಟರ್ನಿಂದ ಫ್ಯಾನ್ನ ಎಲ್ಲಾ ಮೂಲೆಗಳಿಗೂ ಸುಲಭವಾಗಿ ತಲುಪುತ್ತದೆ.ಎರಡು ವಾರಗಳಿಗೊಮ್ಮೆ ಸ್ವಚ್ಛಗೊಳಿಸಿಹೆಚ್ಚು ದಿನಗಳವರೆಗೆ ಫ್ಯಾನ್ ಸ್ವಚ್ಛಗೊಳಿಸದಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಧೂಳು ಶೇಖರಗೊಳ್ಳುತ್ತದೆ. ಹಾಗಾಗಿ ಕನಿಷ್ಠ ಎರಡು ವಾರಗಳಿಗೊಮ್ಮೆ ಸ್ವಚ್ಛಗೊಳಿಸುವುದು ಉತ್ತಮ. ಹಳೆಯ ಪೇಂಟ್ ಬ್ರಷ್ ಬಳಸಿಕೊಂಡು ಫ್ಯಾನ್ನ ಅಂಚು ಹಾಗೂ ಸಂದುಗಳನ್ನು ಸುಲಭವಾಗಿ ಕ್ಲೀನ್ ಮಾಡಬಹುದು.ಟಿವಿ ಸ್ಕ್ರೀನ್ ಮೇಲೆ ಧೂಳು, ಜಿಡ್ಡು ಇದೆಯಾ? ಈ ರೀತಿ ಸ್ವಚ್ಛಗೊಳಿಸಿ...ಎಚ್ಚರಿಕೆಫ್ಯಾನ್ ಸ್ವಚ್ಛಗೊಳಿಸುವ ಮೊದಲು ಅದರ ಸ್ವಿಚ್ ಆಫ್ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೈಯಿಂದ ಮುಟ್ಟಿ ಸ್ವಚ್ಛಗೊಳಿಸಲು ಮುಂದಾದಾಗ, ಸುರಕ್ಷತೆಯ ದೃಷ್ಟಿಯಿಂದ ಮನೆಯ ಮುಖ್ಯ ಸ್ವಿಚ್ (Main Switch) ಅನ್ನು ಆಫ್ ಮಾಡುವುದು ಅತ್ಯಂತ ಸುರಕ್ಷಿತ.