ಮೈಸೂರು ದಸರಾ: ಜಂಬೂ ಸವಾರಿಗೂ ಮುನ್ನ ನಡೆಯಬೇಕಿದ್ದ ವಜ್ರಮುಷ್ಠಿ ಕಾಳಗ ರದ್ದು
ಮೈಸೂರು: ಇಲ್ಲಿನ ಅರಮನೆ ಆವರಣದಲ್ಲಿ ಬುಧವಾರ ಜಂಬೂ ಸವಾರಿಗೂ ಮುನ್ನ ನಡೆಯಬೇಕಿದ್ದ ವಜ್ರಮುಷ್ಠಿ ಕಾಳಗವು ಸಮನ್ವಯದ ಕೊರತೆಯಿಂದ ರದ್ದಾಯಿತು. ಜಂಬೂಸವಾರಿ ಆರಂಭಕ್ಕೆ ಮುನ್ನ ಅಖಾಡದಲ್ಲಿ ಜಟ್ಟಿ ಕಾಳಗ ನಡೆಸಿ ಅಲ್ಲಿ ರಕ್ತ ಚೆಲ್ಲಿದ ನಂತರ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡುವುದು ವಾಡಿಕೆ. ಅದರಂತೆ ಬೆಳಿಗ್ಗೆ ಜಟ್ಟಿಗಳು, ಉಸ್ತಾದ್ ಗಳು ಅರಮನೆಗೆ ಬಂದಿದ್ದರು. ಆದರೆ ಅವ

ಮೈಸೂರು: ಇಲ್ಲಿನ ಅರಮನೆ ಆವರಣದಲ್ಲಿ ಬುಧವಾರ ಜಂಬೂ ಸವಾರಿಗೂ ಮುನ್ನ ನಡೆಯಬೇಕಿದ್ದ ವಜ್ರಮುಷ್ಠಿ ಕಾಳಗವು ಸಮನ್ವಯದ ಕೊರತೆಯಿಂದ ರದ್ದಾಯಿತು. ಜಂಬೂಸವಾರಿ ಆರಂಭಕ್ಕೆ ಮುನ್ನ ಅಖಾಡದಲ್ಲಿ ಜಟ್ಟಿ ಕಾಳಗ ನಡೆಸಿ ಅಲ್ಲಿ ರಕ್ತ ಚೆಲ್ಲಿದ ನಂತರ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡುವುದು ವಾಡಿಕೆ. ಅದರಂತೆ ಬೆಳಿಗ್ಗೆ ಜಟ್ಟಿಗಳು, ಉಸ್ತಾದ್ ಗಳು ಅರಮನೆಗೆ ಬಂದಿದ್ದರು. ಆದರೆ ಅವರಿಗೆ ಪ್ರವೇಶ ನೀಡಲು ಪೊಲೀಸರು ಅಡ್ಡಿಪಡಿಸಿದರು. ಇಬ್ಬರ ನಡುವೆ ವಾಗ್ವಾದದಿಂದ ಸಮಯ ಮೀರಿತು. ಹೀಗಾಗಿ ಜಟ್ಟಿಗಳ ಕಾಳಗವು ಇದೇ ಮೊದಲ ಬಾರಿಗೆ ರದ್ದಾಯಿತು.ಮೈಸೂರಿನ ಮಹೇಶ್ ಜಟ್ಟಿ– ಬೆಂಗಳೂರಿನ ಚೇತನ್ ಜಟ್ಟಿ ಹಾಗೂ ಚಾಮರಾಜನಗರದ ಸತೀಶ್ ಜಟ್ಟಿ– ಚನ್ನಪಟ್ಟಣದ ತೇಜಸ್ ನಡುವೆ ಅಂಬಾವಿಲಾಸ ಅರಮನೆ ಆವರಣದ ಸವಾರಿ ತೊಟ್ಟಿ ಅಂಗಳದಲ್ಲಿ ವಜ್ರಮುಷ್ಠಿ ಕಾಳಗ ನಡೆಯಬೇಕಿತ್ತು.
Read the complete story at Prajavani