VIDEO| ಶಿವಮೊಗ್ಗ ದಸರಾದಲ್ಲಿ ಆನೆ ಅವಾಂತರ; ಪಟಾಕಿ ಸದ್ದಿಗೆ ಬೆದರಿದ ಸೋಮಣ್ಣ
ಶಿವಮೊಗ್ಗದಲ್ಲಿ ಇಂದು (ಅ.21) ವಿಜಯದಶಮಿ ದಸರಾ ಜಂಬೂಸವಾರಿ ಮೆರವಣಿಗೆ ವೇಳೆ ಆನೆ ಸೋಮಣ್ಣನಿಂದ ಅವಾಂತರ ಸಂಭವಿಸಿದೆ. ಮಧ್ಯಾಹ್ನ ಸುಮಾರು 3.30ರ ವೇಳೆಗೆ ಶಿವಪ್ಪನಾಯಕ ಅರಮನೆಯಿಂದ ಆರಂಭವಾದ ಮೆರವಣಿಗೆ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪ ತಲುಪುತ್ತಿದ್ದಂತೆ ಜನಜಂಗುಳಿ ಹಾಗೂ ವಾದ್ಯಗಳ ಸದ್ದಿಗೆ ಗಾಬರಿಗೊಂಡ ಆನೆ ಸೋಮಣ್ಣ ದಿಕ್ಕಾಪಾಲಾಗಿ ಓಡಿದೆ. ಈ ವೇಳೆ ಅಂಬಾರಿ ಕ

ಶಿವಮೊಗ್ಗದಲ್ಲಿ ಇಂದು (ಅ.21) ವಿಜಯದಶಮಿ ದಸರಾ ಜಂಬೂಸವಾರಿ ಮೆರವಣಿಗೆ ವೇಳೆ ಆನೆ ಸೋಮಣ್ಣನಿಂದ ಅವಾಂತರ ಸಂಭವಿಸಿದೆ. ಮಧ್ಯಾಹ್ನ ಸುಮಾರು 3.30ರ ವೇಳೆಗೆ ಶಿವಪ್ಪನಾಯಕ ಅರಮನೆಯಿಂದ ಆರಂಭವಾದ ಮೆರವಣಿಗೆ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪ ತಲುಪುತ್ತಿದ್ದಂತೆ ಜನಜಂಗುಳಿ ಹಾಗೂ ವಾದ್ಯಗಳ ಸದ್ದಿಗೆ ಗಾಬರಿಗೊಂಡ ಆನೆ ಸೋಮಣ್ಣ ದಿಕ್ಕಾಪಾಲಾಗಿ ಓಡಿದೆ. ಈ ವೇಳೆ ಅಂಬಾರಿ ಕೆಳಕ್ಕೆ ಬಿದ್ದು ಹಾನಿಯಾಗಿದ್ದು, ವಾಹನಗಳಿಗೂ ಹಾನಿಯಾಗಿದೆ. ಆನೆಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯರು ಹರಸಾಹಸ ಪಟ್ಟಿದ್ದು, ಅರೆವಳಿಕೆ ಚುಚ್ಚುಮದ್ದು ನೀಡಿ ನಿಯಂತ್ರಣಕ್ಕೆ ತಂದಿದ್ದಾರೆ.
Read the complete story at Prajavani