ಬೆಂಗಳೂರಿನಲ್ಲಿ ಸಂಜೆ ಕಸ ಸಂಗ್ರಹಣೆ ಶುರು; 5 ವಾರ್ಡ್ಗಳಲ್ಲಿ ಪ್ರಾಯೋಗಿಕ ಜಾರಿ
ಬೆಂಗಳೂರು: ಕಸದ ಗಾಡಿ ಬರುವಾಗ ಕೆಲಸಕ್ಕೆ ಹೋಗಿರ್ತೀವಿ, ಮಕ್ಕಳನ್ನು ಶಾಲೆಗೆ ಬಿಡಲು ಹೋಗರ್ತೀವಿ, ಕಸ ಎಲ್ಲಿ ಹಾಕಬೇಕು..? ಅನ್ನೋದು ಬೆಂಗಳೂರಿಗರ ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿಯೇ ಈಗ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಕಸ ಸಂಗ್ರಹಣೆ ಶುರುವಾಗಿದೆ. ಮುಂಜಾನೆ ಕೆಲಸಕ್ಕೆ ಹೋಗುವವರಿಗೆ ಶಾಲಾ-ಕಾಲೇಜಿಗೆ ಹೋಗೋರಿಗೆ, ಕೆಲ್ಸದ ಬ್ಯುಸಿ ಮಧ್ಯೆ ಕಸ ಕೊಡೋಕೆ ಆಗದವರಿಗೆ ಈಗ ಗು

ಬೆಂಗಳೂರು: ಕಸದ ಗಾಡಿ ಬರುವಾಗ ಕೆಲಸಕ್ಕೆ ಹೋಗಿರ್ತೀವಿ, ಮಕ್ಕಳನ್ನು ಶಾಲೆಗೆ ಬಿಡಲು ಹೋಗರ್ತೀವಿ, ಕಸ ಎಲ್ಲಿ ಹಾಕಬೇಕು..? ಅನ್ನೋದು ಬೆಂಗಳೂರಿಗರ ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿಯೇ ಈಗ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಕಸ ಸಂಗ್ರಹಣೆ ಶುರುವಾಗಿದೆ. ಮುಂಜಾನೆ ಕೆಲಸಕ್ಕೆ ಹೋಗುವವರಿಗೆ ಶಾಲಾ-ಕಾಲೇಜಿಗೆ ಹೋಗೋರಿಗೆ, ಕೆಲ್ಸದ ಬ್ಯುಸಿ ಮಧ್ಯೆ ಕಸ ಕೊಡೋಕೆ ಆಗದವರಿಗೆ ಈಗ ಗುಡ್ನ್ಯೂಸ್ ಸಿಕ್ಕಿದೆ. ಬೆಂಗಳೂರಿನಲ್ಲಿ (Bengaluru) ಇನ್ಮುಂದೆ ಸಂಜೆ ಕಸ ಸಂಗ್ರಹಣೆ ಶುರುವಾಗಲಿದೆ. ಸಂಜೆ 5 ಗಂಟೆಯಿಂದ ರಾತ್ರಿ 12 ರ ತನಕ ಕಸ ಸಂಗ್ರಹ ಮಾಡಲಾಗುತ್ತದೆ. ಬೆಂಗಳೂರು ದಕ್ಷಿಣದಲ್ಲಿ ಪ್ರಾಯೋಗಿಕ ಜಾರಿ ಶುರುವಾಗಲಿದೆ. ಇದನ್ನೂ ಓದಿ: ವಿಜಯೆಂದ್ರ ಜೊತೆಗೆ ಯಾವುದೇ ಹೊಂದಾಣಿಕೆ ಇಲ್ಲ: ಯತ್ನಾಳ್ ರಸ್ತೆಬದಿಯ ಕಸದ ಬ್ಲಾಕ್ಸ್ಪಾಟ್ಗಳ ನಿಯಂತ್ರಣಕ್ಕೆ ನೂತನ ಕ್ರಮ ವಹಿಸಿದ್ದು, ಕಸ ವಿಲೇವಾರಿ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸಲು ಪ್ರಯತ್ನಿಸಲಾಗಿದೆ. 5 ವಾರ್ಡ್ಗಳಲ್ಲಿ ಇದನ್ನು ಪ್ರಾಯೋಗಿಕ ಜಾರಿಗೊಳಿಸಲಾಗಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4 ವಾರ್ಡ್ಗಳು ಹಾಗೂ ಹೊಂಗಸಂದ್ರ ವಾರ್ಡ್ ಸೇರಿದಂತೆ ಒಟ್ಟು 5 ವಾರ್ಡ್ಗಳಲ್ಲಿ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ 5 ವಾರ್ಡ್ಗಳಲ್ಲಿ ಬೆಳಗ್ಗೆ ಒಟ್ಟು 160 ಕಸ ಸಂಗ್ರಹಿಸುವ ವಾಹನಗಳು ಸಂಚರಿಸುತ್ತಿದ್ದು, ಸಂಜೆ ವೇಳೆ 20 ರಿಂದ 25 ಆಟೋಗಳ ಮೂಲಕ ಯಶಸ್ವಿಯಾಗಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ವಿಜಯೇಂದ್ರ-ಯತ್ನಾಳ ಭೇಟಿ ವಿಚಾರದಲ್ಲಿ ವಿಶೇಷ ಏನೂ ಇಲ್ಲ: ಸತೀಶ್ ಜಾರಕಿಹೊಳಿ