ರಾಮಾಯಣ: ರಾವಣನ ಶಿವ ತಾಂಡವದಲ್ಲಿ ಯಶ್ ಅಬ್ಬರ
ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೇ ಚಿತ್ರತಂಡವು ವಿಜಯದಶಮಿ ಪ್ರಯುಕ್ತ ರಾವಣನ ಪಾತ್ರವನ್ನು ಪರಿಚಯಿಸುವ ‘ರಾವಣ ತಾಂಡವ’ ಎಂಬ ವಿಶೇಷ ವಿಡಿಯೊ ತುಣುಕನ್ನು ಬಿಡುಗಡೆ ಮಾಡಿದೆ.ರಾಮಾಯಣ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ಯೂಟ್ಯೂಬ್ನಲ್ಲಿ ‘

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೇ ಚಿತ್ರತಂಡವು ವಿಜಯದಶಮಿ ಪ್ರಯುಕ್ತ ರಾವಣನ ಪಾತ್ರವನ್ನು ಪರಿಚಯಿಸುವ ‘ರಾವಣ ತಾಂಡವ’ ಎಂಬ ವಿಶೇಷ ವಿಡಿಯೊ ತುಣುಕನ್ನು ಬಿಡುಗಡೆ ಮಾಡಿದೆ.ರಾಮಾಯಣ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ಯೂಟ್ಯೂಬ್ನಲ್ಲಿ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಎಂಬ ಶೀರ್ಷಿಕೆಯೊಂದಿಗೆ ಈ ವಿಶೇಷ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಶಿವನ ಪರಮ ಭಕ್ತನಾಗಿರುವ ರಾವಣನ ಪಾತ್ರದಲ್ಲಿ ಯಶ್ ಅವರು ಶಿವ ತಾಂಡವ ನೃತ್ಯ ಮಾಡಿದ್ದು, ಸದ್ಯ ಅವರ ನೃತ್ಯಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.'ರಾಮಾಯಣ' ಮುಂಗಡ ಬುಕಿಂಗ್ ಆರಂಭ: ಟಿಕೆಟ್ ದರ ಎಷ್ಟು?ಈ ವಿಡಿಯೊದಲ್ಲಿ ರಾವಣನ ಭಕ್ತಿ, ಶಕ್ತಿ, ಗಂಭೀರ ಧ್ವನಿ, ರಾಜಗಾಂಭೀರ್ಯದ ನಡಿಗೆ ಹಾಗೂ ಆವೇಶಭರಿತ ಮುಖಭಾವವನ್ನು ಅದ್ಭುತವಾಗಿ ತೋರಿಸಲಾಗಿದೆ. ಹ್ಯಾನ್ಸ್ ಜಿಮ್ಮರ್ ಮತ್ತು ಎ. ಆರ್. ರೆಹಮಾನ್ ಅವರು ‘ಶಿವ ತಾಂಡವ ಸ್ತೋತ್ರಕ್ಕೆ’ ಹಿನ್ನೆಲೆ ಸಂಗೀತ ನೀಡಿದ್ದಾರೆ.ದಸರಾ ಹಬ್ಬದ ದಿನ ರಾವಣನ ಮೇಲೆ ರಾಮನು ಸಾಧಿಸಿದ ವಿಜಯವನ್ನು ಸ್ಮರಿಸಲಾಗುತ್ತದೆ. ಈ ಸಂದರ್ಭದಲ್ಲಿ ಚಿತ್ರತಂಡವು ರಾವಣನ ವಿಶೇಷ ನೃತ್ಯದ ಲುಕ್ ಬಿಡುಗಡೆ ಮಾಡಿದೆ. ಈಗಾಗಲೇ ಚಿತ್ರದ ಮುಂಗಡ ಬುಕಿಂಗ್ ಆರಂಭವಾಗಿದೆ. ಸೀತೆಯಾಗಿ ಸಾಯಿ ಪಲ್ಲವು ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ಸನ್ನಿ ಡಿಯೋಲ್ ಹಾಗೂ ರವಿ ದುಬೆ ನಟಿಸಿದ್ದಾರೆ.ಈ ಸಿನಿಮಾ ನವೆಂಬರ್ 5ರಂದು ವಿಶ್ವದಾದ್ಯಂತ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ಚಿತ್ರದ ಎರಡನೇ ಭಾಗವು ಮುಂದಿನ ವರ್ಷದ ದೀಪಾವಳಿ ಹಬ್ಬದ ವೇಳೆಗೆ ಬಿಡುಗಡೆಯಾಗಲಿದೆ.