ಟೈಗರ್ ಶ್ರಾಫ್ ಕಾರಿನ ಮೇಲೆ ದಾಳಿ ಪ್ರಕರಣ: ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ
ನವದೆಹಲಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕವು ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.ವಿದೇಶದಿಂದ ಕಾರ್ಯನಿರ್ವಹಿಸುತ್ತಿರುವ ಗ್ಯಾಂಗ್ಸ್ಟರ್ ಅನಿಲ್ ಪಂಡಿತ್ ಎಂಬಾತನ ಸೂಚನೆಯಂತೆ ಇವರು ಕೆಲಸ ಮಾಡುತ್ತಿದ್ದರು ಎಂದು ಶಂಕ

ನವದೆಹಲಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕವು ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.ವಿದೇಶದಿಂದ ಕಾರ್ಯನಿರ್ವಹಿಸುತ್ತಿರುವ ಗ್ಯಾಂಗ್ಸ್ಟರ್ ಅನಿಲ್ ಪಂಡಿತ್ ಎಂಬಾತನ ಸೂಚನೆಯಂತೆ ಇವರು ಕೆಲಸ ಮಾಡುತ್ತಿದ್ದರು ಎಂದು ಶಂಕಿಸಲಾಗಿದೆ.ಬಂಧಿತರನ್ನು ಹರಿಯಾಣದ ಸೋನಿಪತ್ ಜಿಲ್ಲೆಯ ನಿವಾಸಿಗಳಾದ ಕುನಾಲ್ (21) , ಸುಮಿತ್ (19) ,ಉತ್ತರ ಪ್ರದೇಶದ ರಾಧಾ (23) ಮತ್ತು ಬಬಿತಾ (23) ಎಂದು ಗುರುತಿಸಲಾಗಿದೆ.ಮೂರು ದಿನ ಪೊಲೀಸ್ ಕಸ್ಟಡಿಗೆ: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 35(1)(ಬಿ) ಅಡಿಯಲ್ಲಿಆರೋಪಿಗಳನ್ನು ಮೊದಲು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ತರುವಾಯ, ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಸಿಐಡಿ ಮತ್ತು ಮುಂಬೈ ಕ್ರೈಂ ಬ್ರಾಂಚ್ ತಂಡವು ಆರೋಪಿಗಳ ಕಸ್ಟಡಿ ವಿಚಾರಣೆಗೆ ಅರ್ಜಿ ಸಲ್ಲಿಸಿತು. ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ಆರೋಪಿಗಳನ್ನು 3 ದಿನಗಳ ಕಸ್ಟಡಿಗೆ ಒಪ್ಪಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಆರೋಪಿ ಕುನಾಲ್ಗೆ ಆತನ ಸ್ನೇಹಿತನೊಬ್ಬ ಅಮೆರಿಕದಲ್ಲಿ ನೆಲೆಸಿರುವ ಹರಿಯಾಣದ ಪಾಣಿಪತ್ ಮೂಲದ ಗ್ಯಾಂಗ್ಸ್ಟರ್ ಅನಿಲ್ ಪಂಡಿತ್ನ ಪರಿಚಯ ಮಾಡಿಸಿಕೊಟ್ಟಿದ್ದ. ಈ ಅನಿಲ್ ಪಂಡಿತ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ನಿಕಟವರ್ತಿ ಎನ್ನಲಾಗಿದೆ. ಕುನಾಲ್ ಎನ್ಕ್ರಿಪ್ಟೆಡ್ ಮೆಸೇಜಿಂಗ್ ಆ್ಯಪ್ಗಳ ಮೂಲಕ ಆತನ ಸಂಪರ್ಕದಲ್ಲಿದ್ದ. ಅನಿಲ್ ಪಂಡಿತ್ ನೀಡಿದ ಸೂಚನೆಯಂತೆ ಕುನಾಲ್ ಮತ್ತು ಆತನ ಸಹಚರ ಸುಮಿತ್ ಅಮೃತಸರದಿಂದ ಒಂದು ಪಿಸ್ತೂಲ್ ಹಾಗೂ 20 ಸಜೀವ ಗುಂಡುಗಳನ್ನು ತಂದಿದ್ದರು. ಬ್ಯಾಗ್ಗಳಲ್ಲಿ ಗನ್ ಬಚ್ಚಿಟ್ಟು ರೈಲಿನಲ್ಲಿ ತಂದಿದ್ದ ಯುವತಿಯರು: ಎರಡು ತಿಂಗಳ ಹಿಂದೆ ಕುನಾಲ್ಗೆ ರಾಧಾ ಎಂಬಾಕೆಯ ಪರಿಚಯವಾಗಿ ಪ್ರೇಮಾಂಕುರವಾಗಿದ್ದು, ಆಕೆಗೆ ತನ್ನ ಅಪರಾಧ ಹಿನ್ನೆಲೆಯನ್ನು ತಿಳಿಸಿದ್ದ. ಆ ಬಳಿಕ ಆಕೆಯನ್ನು ಶಸ್ತ್ರಾಸ್ತ್ರಗಳೊಂದಿಗೆ ಮುಂಬೈಗೆ ಕಳುಹಿಸಲು ಒಪ್ಪಿಸಿದ್ದ.ಅಕ್ಟೋಬರ್ 5 ರಂದು ಕುನಾಲ್, ರಾಧಾ ಮತ್ತು ಆಕೆಯ ಗೆಳತಿ ಬಬಿತಾಳನ್ನು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಬಿಟ್ಟಿದ್ದ. ರಾಧಾಳ ಬ್ಯಾಗ್ನಲ್ಲಿ ಪಿಸ್ತೂಲ್ ಬಚ್ಚಿಡಲಾಗಿತ್ತು. ಪ್ರಯಾಣದುದ್ದಕ್ಕೂ ಎನ್ಕ್ರಿಪ್ಟೆಡ್ ಆ್ಯಪ್ ಮೂಲಕ ಇಬ್ಬರಿಗೂ ಅನಿಲ್ ಪಂಡಿತ್ ನೀಡುತ್ತಿದ್ದ ಸೂಚನೆಗಳನ್ನು ಕುನಾಲ್ ತಲುಪಿಸುತ್ತಿದ್ದ.ಟೈಗರ್ ಶ್ರಾಫ್ ಮೇಲೆ ದಾಳಿ: ‘ಗುಂಡಿಗೆ ಗುಂಡಿನಿಂದಲೇ ಉತ್ತರ’ ಎಂದ ಮಹಾ DCM ಶಿಂದೆಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ಮೂವರು ಅಪರಿಚಿತರ ವಿರುದ್ಧ ಎಫ್ಐಆರ್ಅಪ್ರಾಪ್ತನಿಗೆ ಶಸ್ತ್ರಾಸ್ತ್ರ ಹಸ್ತಾಂತರ, ಮರುದಿನವೇ ದಾಳಿ: ಅಕ್ಟೋಬರ್ 17 ರಂದು ಮುಂಬೈ ತಲುಪಿದ ಇಬ್ಬರು ಯುವತಿಯರು ದಾದರ್ನ ಹೋಟೆಲ್ವೊಂದದರಲ್ಲಿ ತಂಗಿದ್ದರು. ಮರುದಿನ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಅಪ್ರಾಪ್ತ ಬಾಲಕನೊಬ್ಬ ಹೋಟೆಲ್ ಬಳಿ ಬಂದು ರಾಧಾ ಬಳಿಯಿದ್ದ ಶಸ್ತ್ರಾಸ್ತ್ರಗಳ ಬ್ಯಾಗ್ ಪಡೆದುಕೊಂಡು ಹೋಗಿದ್ದ. ಅದೇ ದಿನ ಅಂದರೆ ಅಕ್ಟೋಬರ್ 18ರಂದು ಸಂಜೆ 7 ಗಂಟೆಯ ಸುಮಾರಿಗೆ ಮುಂಬೈನ ಜುಹುವಿನಲ್ಲಿ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯ ಬಳಿಕ ಶೂಟರ್ಗಳು ತಪ್ಪಿಸಿಕೊಳ್ಳಲು ವ್ಯವಸ್ಥೆ ಮಾಡುವಂತೆ ಅನಿಲ್ ಪಂಡಿತ್ ಕುನಾಲ್ಗೆ ತಿಳಿಸಿದ್ದ. ಇತ್ತ ಕೃತ್ಯ ಮುಗಿಯುತ್ತಿದ್ದಂತೆ ಯುವತಿಯರಾದ ರಾಧಾ ಮತ್ತು ಬಬಿತಾ ಅಕ್ಟೋಬರ್ 18 ರಂದು ದಾದರ್-ಹರಿದ್ವಾರ ಎಕ್ಸ್ಪ್ರೆಸ್ ರೈಲಿನಲ್ಲಿ ದೆಹಲಿಗೆ ವಾಪಸಾಗಿದ್ದರು. ಮಂಗಳವಾರ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಇಬ್ಬರನ್ನೂ ದೆಹಲಿ ಪೊಲೀಸರು ಬಂಧಿಸಿದ್ದರೆ, ಸೋನಿಪತ್ನಲ್ಲಿ ಕುನಾಲ್ ಮತ್ತು ಸುಮಿತ್ನನ್ನು ಸೆರೆಹಿಡಿಯಲಾಗಿದೆ. ಈ ಬೃಹತ್ ಜಾಲದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದೂ ಅವರು ತಿಳಿಸಿದ್ದಾರೆ.ಟೈಗರ್ ಶ್ರಾಫ್ ಕಾರಿನ ಮೇಲೆ ದಾಳಿ: ರಾಜಸ್ಥಾನದ ಕೋಟಾದಲ್ಲಿ ಮೂವರು ಶೂಟರ್ಗಳ ಬಂಧನಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಸರ್ಕಾರದ ವೈಫಲ್ಯ ಬೊಟ್ಟು ಮಾಡಿದ ರಾವುತ್