ಜೆಫ್ರಿ ಎಪ್ಸ್ಟೀನ್ ಜೊತೆ ಹರ್ದೀಪ್ ಸಿಂಗ್ ಪುರಿ ಫೋಟೋ – ಕೇಂದ್ರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು
ವಾಷಿಂಗ್ಟನ್/ ನವದೆಹಲಿ: ಅಮೆರಿಕದ ಕುಖ್ಯಾತ ಮಕ್ಕಳ ಲೈಂಗಿಕ ಅಪರಾಧಿ ದಿವಂಗತ ಜೆಫ್ರಿ ಎಡ್ವರ್ಡ್ ಎಪ್ಸ್ಟೀನ್(Epstein) ಜೊತೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ(Hardeep Singh Puri) ಇರುವ ಫೋಟೋವನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ್ದು, ಇದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಫೋಟೋ ಸಾರ್ವಜನಿಕವಾಗುತ್ತಿದ

ವಾಷಿಂಗ್ಟನ್/ ನವದೆಹಲಿ: ಅಮೆರಿಕದ ಕುಖ್ಯಾತ ಮಕ್ಕಳ ಲೈಂಗಿಕ ಅಪರಾಧಿ ದಿವಂಗತ ಜೆಫ್ರಿ ಎಡ್ವರ್ಡ್ ಎಪ್ಸ್ಟೀನ್(Epstein) ಜೊತೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ(Hardeep Singh Puri) ಇರುವ ಫೋಟೋವನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ್ದು, ಇದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಫೋಟೋ ಸಾರ್ವಜನಿಕವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ದಾಖಲೆಗಳ ಭಾಗವಾಗಿರುವ ಈ ಫೋಟೋದಲ್ಲಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಜೆಫ್ರಿ ಎಪ್ಸ್ಟೀನ್ ಎದುರು ಮೇಜಿನ ಬಳಿ ಮುಖಾಮುಖಿಯಾಗಿ ಕುಳಿತಿರುವುದು ಕಂಡುಬಂದಿದೆ. ವಿಶೇಷವೆಂದರೆ, ಆ ನಿರ್ದಿಷ್ಟ ಚಿತ್ರದಲ್ಲಿ ಈ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ಕಾಣಿಸಿಕೊಂಡಿಲ್ಲ. Rubio goes to Mumbai. The US DOJ releases a picture of Epstein and Puri. Dear BJP and RSS workers, which anti-national traitor do you think they’re blackmailing? रुबियो मुंबई पहुँचे। US DOJ ने एपस्टीन और पुरी की तस्वीर जारी की। प्रिय BJP और RSS कार्यकर्ताओं, आपको क्या लगता है – ये किस देश-विरोधी गद्दार को ब्लैकमेल कर रहे हैं? — Rahul Gandhi (@RahulGandhi) October 21, 2026 ವಿಪಕ್ಷ ನಾಯಕ ರಾಹುಲ್ ಗಾಂಧಿ, ರೂಬಿಯೋ ಮುಂಬೈಗೆ ಬಂದಿದ್ದಾರೆ. ಯುಎಸ್ ನ್ಯಾಯಾಂಗ ಇಲಾಖೆಯು (US DOJ) ಎಪ್ಸ್ಟೀನ್ ಮತ್ತು ಪುರಿ ಅವರ ಫೋಟೋವನ್ನು ಬಿಡುಗಡೆ ಮಾಡಿದೆ. ಪ್ರಿಯ ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರೇ ಅವರು ಯಾವ ದೇಶದ್ರೋಹಿಯನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ನಿಮಗನಿಸುತ್ತದೆ?ಎಂದು ಪ್ರಶ್ನಿಸಿದ್ದಾರೆ ಫೋಟೋ ಬಹಿರಂಗಗೊಂಡ ಬೆನ್ನಲ್ಲೇ ವಿಪಕ್ಷ ನಾಯಕರು ಕೇಂದ್ರ ಸರ್ಕಾರದ ನೈತಿಕತೆಯನ್ನು ಪ್ರಶ್ನಿಸಿದ್ದಾರೆ. ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, “ಲೈಂಗಿಕ ಅಪರಾಧಿ ಎಪ್ಸ್ಟೀನ್ ಜೊತೆ ಹರ್ದೀಪ್ ಪುರಿ ನಡೆಸಿದ ಮಾತುಕತೆಯ ಉದ್ದೇಶವೇನು? ಅಂದು ಸಚಿವರು ಯಾರ ಸಂದೇಶವನ್ನು ಹೊತ್ತೊಯ್ದಿದ್ದರು? ಇದು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿಯೇ ನಡೆದ ಭೇಟಿಯೇ? ಇದು ಕೇವಲ ಆರಂಭವಷ್ಟೇ, ಮುಂದೇನಾಗಲಿದೆ ಎಂಬುದನ್ನು ಕಾದು ನೋಡಿ,” ಎಂದು ನೇರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಪ್ರತಿಕ್ರಿಯಿಸಿ, “ಎಪ್ಸ್ಟೀನ್ನನ್ನು ಒಬ್ಬನೇ ಭೇಟಿಯಾಗಿಲ್ಲ ಎಂದು ಪುರಿ ಈ ಹಿಂದೆ ಹೇಳಿರಲಿಲ್ಲವೇ? ಪ್ರಧಾನಿ ಮೋದಿ ತಮ್ಮ ಸುತ್ತಮುತ್ತ ಎಂತಹ ವ್ಯಕ್ತಿಗಳನ್ನು ಇಟ್ಟುಕೊಂಡಿದ್ದಾರೆ? ಆರ್ಎಸ್ಎಸ್ ಮತ್ತು ಬಲಪಂಥೀಯರು ಮಹಿಳೆಯರನ್ನು ಗೌರವಿಸಲು ಹಾಗೂ ಸಮಾನವಾಗಿ ಕಾಣಲು ಸಾಧ್ಯವಿಲ್ಲ ಎಂಬುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕೆ?” ಎಂದು ಕಿಡಿಕಾರಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಹರ್ದೀಪ್ ಸಿಂಗ್ ಪುರಿ ಈ ಹಿಂದೆಯೇ ಫೆಬ್ರವರಿಯಲ್ಲಿ ಸ್ಪಷ್ಟನೆ ನೀಡಿದ್ದರು. ಭಾರತೀಯ ವಿದೇಶಾಂಗ ಸೇವೆಯಿಂದ (IFS) ನಿವೃತ್ತರಾದ ನಂತರ, 2014 ಮತ್ತು 2017ರ ನಡುವಿನ ಅವಧಿಯಲ್ಲಿ ತಾವು ಅಂತರರಾಷ್ಟ್ರೀಯ ಶಾಂತಿ ಸಂಸ್ಥೆ (IPI) ಹಾಗೂ ಬಹುಪಕ್ಷೀಯ ವ್ಯವಸ್ಥೆ ಕುರಿತ ಸ್ವತಂತ್ರ ಆಯೋಗದ (ICM) ನಿಯೋಗದ ಭಾಗವಾಗಿದ್ದ ಸಂದರ್ಭದಲ್ಲಿ ಕೇವಲ ಅಧಿಕೃತ ರಾಜತಾಂತ್ರಿಕ ಉದ್ದೇಶಗಳಿಗಾಗಿ ಎಪ್ಸ್ಟೀನ್ನನ್ನು ಮೂರ್ನಾಲ್ಕು ಬಾರಿ ಭೇಟಿಯಾಗಿದ್ದಾಗಿ ತಿಳಿಸಿದ್ದರು.