ತಂದೆಯಾಗಲಿರುವ ಡಚ್ ಪ್ರಧಾನಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಲಿಂಗ ಜೋಡಿ
ಆ್ಯಮ್ಸ್ಟರ್ಡ್ಯಾಮ್: ನೆದರ್ಲೆಂಡ್ ಪ್ರಧಾನಿ ರಾಬ್ ಜೆಟ್ಟೆನ್ ಹಾಗೂ ಅವರ ಸಂಗಾತಿ, ಅರ್ಜೆಂಟೀನಾದ ಹಾಕಿ ಆಟಗಾರ ನಿಕೋಲಸ್ ಕೀನನ್ ಬಾಡಿಗೆ ತಾಯ್ತನದ ಮೂಲಕ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ‘ರಾಯಿಟರ್ಸ್’ ವರದಿ ಮಾಡಿದೆ.‘ನಮ್ಮ ಬದುಕಿಗೆ ಅತ್ಯಂತ ವಿಶೇಷ ವ್ಯಕ್ತಿಯೊಬ್ಬರು ಆಗಮಿಸುತ್ತಿದ್ದಾರೆ. 2027ಲ್ಲಿ

ಆ್ಯಮ್ಸ್ಟರ್ಡ್ಯಾಮ್: ನೆದರ್ಲೆಂಡ್ ಪ್ರಧಾನಿ ರಾಬ್ ಜೆಟ್ಟೆನ್ ಹಾಗೂ ಅವರ ಸಂಗಾತಿ, ಅರ್ಜೆಂಟೀನಾದ ಹಾಕಿ ಆಟಗಾರ ನಿಕೋಲಸ್ ಕೀನನ್ ಬಾಡಿಗೆ ತಾಯ್ತನದ ಮೂಲಕ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ‘ರಾಯಿಟರ್ಸ್’ ವರದಿ ಮಾಡಿದೆ.‘ನಮ್ಮ ಬದುಕಿಗೆ ಅತ್ಯಂತ ವಿಶೇಷ ವ್ಯಕ್ತಿಯೊಬ್ಬರು ಆಗಮಿಸುತ್ತಿದ್ದಾರೆ. 2027ಲ್ಲಿ ಭೇಟಿಯಾಗೋಣ‘ ಎಂದು ಜೆಟ್ಟೆನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಇನ್ಸ್ಟಾಗ್ರಾಮ್ ‘ಅಲ್ಲದೇ ನಮಗೆ ನೆರವಾದ ಅಂಡಾಣು ದಾನಿ, ಬಾಡಿಗೆ ತಾಯಿ ಹಾಗೂ ಅವರ ಕುಟುಂಬಸ್ಥರಿಗೆ ಧನ್ಯವಾದ ಹೇಳಲು ಪದಗಳೇ ಸಾಲುತ್ತಿಲ್ಲ. ನಿಮ್ಮ ಸಹಾಯವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ‘ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. View this post on Instagram ಅರ್ಜೆಂಟೀನಾದ ಹಾಕಿ ಆಟಗಾರ ನಿಕೋಲಸ್ ಕೀನನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಜೆಟ್ಟೆನ್, ಈ ಬೇಸಿಗೆಯಲ್ಲಿ ವಿವಾಹವಾಗಲು ಯೋಜಿಸಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮದುವೆಯನ್ನು ಮುಂದೂಡಿದ್ದರು. ಕಳೆದ ವರ್ಷದ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಡಿ 66 ಪಕ್ಷ ಗೆಲುವು ಸಾಧಿಸಿದ್ದು, ಪಕ್ಷದ ನಾಯಕರಾದ ಜೆಟ್ಟೆನ್ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಅಲ್ಲದೇ ಡಚ್ ಇತಿಹಾಸದಲ್ಲೇ ಅತ್ಯಂತ 'ಕಿರಿಯ ಪ್ರಧಾನಿ' ಎಂಬ ಹೆಗ್ಗಳಿಕೆ ಅವರು ಪಾತ್ರರಾಗಿದ್ದಾರೆ.ಅಂಡಾಣು ದಾನಿ ಹಾಗೂ ಬಾಡಿಗೆ ತಾಯಿ ಇವರ ಸ್ನೇಹಿತೆಯರಾಗಿದ್ದು, ಈಗಾಗಲೇ ಸ್ವಂತ ಮಕ್ಕಳನ್ನು ಹೊಂದಿದ್ದಾರೆ. ಯಾವುದೇ ವಾಣಿಜ್ಯಿ ಉದ್ದೇಶವಿಲ್ಲದೆ ಮಾನವೀಯತೆಯಿಂದ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದು ಡಿ 66 ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.ನೆದರ್ಲೆಂಡ್ನಲ್ಲಿ ಬಾಡಿಗೆ ತಾಯ್ತನಕ್ಕೆ ಹಣ ನೀಡುವುದು ಕಾನೂನುಬಾಹಿರವಾಗಿದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ಡಚ್ ಕಾನೂನು ನಿಯಮಗಳಿಗೆ ಒಳಪಟ್ಟಿದ್ದು, ಸ್ವದೇಶಿ ಐವಿಎಫ್ ತಂತ್ರಜ್ಞಾನದ ಮೂಲಕವೇ ಸಾಕಾರಗೊಂಡಿದೆ ಎಂದು ಪಕ್ಷ ಸ್ಪಷ್ಟಪಡಿಸಿದೆ. ಮಗು ಜನಿಸಿದಾಗ ಜೆಟ್ಟನ್ ಕೆಲ ದಿನಗಳ ಕಾಲ ಪಿತೃತ್ವ ರಜೆ ಪಡೆಯಲಿದ್ದಾರೆ ಎಂದೂ ವರದಿಯಾಗಿದೆ.