ಜಿಯೊ ಐಪಿಒ: ಅಷ್ಟೂ ಷೇರುಗಳಿಗೆ ಬಿಡ್ ಸಲ್ಲಿಕೆ
ನವದೆಹಲಿ: ಷೇರು ಮಾರಾಟದ (ಐಪಿಒ) ಮೂಲಕ ಒಟ್ಟು ₹30,213 ಕೋಟಿ ಸಂಗ್ರಹಿಸುವ ಗುರಿ ಹೊಂದಿರುವ ಜಿಯೊ ಪ್ಲಾಟ್ಫಾರ್ಮ್ಸ್ ಕಂಪನಿಯ ಪ್ರಯತ್ನಕ್ಕೆ ಭರ್ಜರಿ ಸ್ಪಂದನ ದೊರೆತಿದೆ. ಐಪಿಒ ಪ್ರಕ್ರಿಯೆಯ ಭಾಗವಾಗಿ ಬಿಡ್ ಸಲ್ಲಿಸಲು ಬುಧವಾರದಿಂದ ಅವಕಾಶ ಮುಕ್ತವಾಗಿದ್ದು, ಮೊದಲ 100 ನಿಮಿಷಗಳಲ್ಲೇ ಅಷ್ಟೂ ಷೇರುಗಳಿಗೆ ಬಿಡ್ ಸಲ್ಲಿಕೆಯಾಗಿದೆ.ಆರಂಭಿಕ ಹೂಡಿಕೆದಾರರಿಗೆ ಮೀಸಲಾದ ಪಾಲ

ನವದೆಹಲಿ: ಷೇರು ಮಾರಾಟದ (ಐಪಿಒ) ಮೂಲಕ ಒಟ್ಟು ₹30,213 ಕೋಟಿ ಸಂಗ್ರಹಿಸುವ ಗುರಿ ಹೊಂದಿರುವ ಜಿಯೊ ಪ್ಲಾಟ್ಫಾರ್ಮ್ಸ್ ಕಂಪನಿಯ ಪ್ರಯತ್ನಕ್ಕೆ ಭರ್ಜರಿ ಸ್ಪಂದನ ದೊರೆತಿದೆ. ಐಪಿಒ ಪ್ರಕ್ರಿಯೆಯ ಭಾಗವಾಗಿ ಬಿಡ್ ಸಲ್ಲಿಸಲು ಬುಧವಾರದಿಂದ ಅವಕಾಶ ಮುಕ್ತವಾಗಿದ್ದು, ಮೊದಲ 100 ನಿಮಿಷಗಳಲ್ಲೇ ಅಷ್ಟೂ ಷೇರುಗಳಿಗೆ ಬಿಡ್ ಸಲ್ಲಿಕೆಯಾಗಿದೆ.ಆರಂಭಿಕ ಹೂಡಿಕೆದಾರರಿಗೆ ಮೀಸಲಾದ ಪಾಲು ಸೇರಿದಂತೆ ಒಟ್ಟು ₹74,610 ಕೋಟಿ ಮೊತ್ತದ ಷೇರುಗಳಿಗೆ ಮೊದಲ ದಿನವೇ ಬೇಡಿಕೆ ಬಂದಿದೆ. ಶುಕ್ರವಾರದವರೆಗೆ ಬಿಡ್ ಸಲ್ಲಿಸಲು ಅವಕಾಶ ಇರಲಿದೆ.ಜಿಯೊ ಪ್ಲಾಟ್ಫಾರ್ಮ್ಸ್ನ ಷೇರು ಮಾರಾಟದ ಪ್ರಕ್ರಿಯೆಯಲ್ಲಿ ಹಾಲಿ ಷೇರುದಾರರು ತಮ್ಮಲ್ಲಿನ ಷೇರುಗಳನ್ನು ಮಾರಾಟ ಮಾಡುತ್ತಿಲ್ಲ, ಯಾವುದೇ ಷೇರುದಾರರು ಕಂಪನಿಯಿಂದ ಹೊರನಡೆಯುತ್ತಿಲ್ಲ. ಕಂಪನಿಯು ಹೊಸದಾಗಿ 27 ಕೋಟಿ ಷೇರುಗಳನ್ನು ಖರೀದಿಗೆ ಬಿಡುಗಡೆ ಮಾಡುತ್ತಿದೆ.ಅಂದರೆ, ಐಪಿಒ ಮೂಲಕ ಸಂಗ್ರಹ ಆಗುವ ಅಷ್ಟೂ ಮೊತ್ತವು ಕಂಪನಿಯ ಖಾತೆಗೆ ಸೇರುತ್ತದೆ.
Read the complete story at Prajavani