ಓದಿದರೂ ಸಿಗದ ಉದ್ಯೋಗ, ದುಡಿದರೂ ಬದುಕಿನ ಚಿಂತೆ: ಯುವಜನರ ಬದುಕಿನ ಬಿಕ್ಕಟ್ಟು
ಉತ್ತಮ ಶಿಕ್ಷಣ ಪಡೆದು, ಉದ್ಯೋಗ ಗಳಿಸಿ, ಸ್ವತಂತ್ರ ಜೀವನ ಕಟ್ಟಿಕೊಳ್ಳಬೇಕು ಎಂಬುದು ಯುವಜನರ ಬಯಕೆ. ಆದರೆ ವಾಸ್ತವ ಬೇರೆಯದೇ ಇದೆ. ನಿರೀಕ್ಷೆ ಮತ್ತು ವಾಸ್ತವದ ನಡುವಿನ ಅಂತರ ಹೆಚ್ಚಾದಾಗ ಅಸಮಾಧಾನವೂ ಹೆಚ್ಚುತ್ತದೆ. ಯುರೋಪ್ನ ಹಲವು ದೇಶಗಳಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳು ಇದಕ್ಕೆ ಉದಾಹರಣೆ.ಸ್ಪೇನ್ ಮತ್ತು ಪೋರ್ಚುಗಲ್ನಲ್ಲಿ ದುಬಾರಿ ಬಾಡಿಗೆಯ ವಿರುದ್ಧ ಯುವಜ
ಉತ್ತಮ ಶಿಕ್ಷಣ ಪಡೆದು, ಉದ್ಯೋಗ ಗಳಿಸಿ, ಸ್ವತಂತ್ರ ಜೀವನ ಕಟ್ಟಿಕೊಳ್ಳಬೇಕು ಎಂಬುದು ಯುವಜನರ ಬಯಕೆ. ಆದರೆ ವಾಸ್ತವ ಬೇರೆಯದೇ ಇದೆ. ನಿರೀಕ್ಷೆ ಮತ್ತು ವಾಸ್ತವದ ನಡುವಿನ ಅಂತರ ಹೆಚ್ಚಾದಾಗ ಅಸಮಾಧಾನವೂ ಹೆಚ್ಚುತ್ತದೆ. ಯುರೋಪ್ನ ಹಲವು ದೇಶಗಳಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳು ಇದಕ್ಕೆ ಉದಾಹರಣೆ.ಸ್ಪೇನ್ ಮತ್ತು ಪೋರ್ಚುಗಲ್ನಲ್ಲಿ ದುಬಾರಿ ಬಾಡಿಗೆಯ ವಿರುದ್ಧ ಯುವಜನರು ಪ್ರತಿಭಟಿಸುತ್ತಿದ್ದರೆ, ಫ್ರಾನ್ಸ್ ಮತ್ತು ಇಟಲಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಆಗ್ರಹಿಸಿದ್ದಾರೆ. ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆ ಗ್ರೀಸ್ನಲ್ಲಿ ವ್ಯಕ್ತವಾಗಿದೆ. ಅಲ್ಬೇನಿಯಾದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಬೆಂಬಲ ನೀಡುವಂತೆ ಒತ್ತಾಯಿಸುವುದರ ಜತೆಗೆ ವಿದ್ಯಾರ್ಥಿಗಳು ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲೂ ನಿರತರಾಗಿದ್ದಾರೆ.ವಿವಿಧ ದೇಶಗಳಲ್ಲಿ ಬೇಡಿಕೆಗಳು ವಿಭಿನ್ನವಾಗಿದ್ದರೂ, ಪ್ರತಿಭಟಿಸುತ್ತಿರುವವರು ಯುವಜನರೇ. ಉತ್ತಮ ಭವಿಷ್ಯಕ್ಕೆ ಸಾಕಷ್ಟು ಅವಕಾಶಗಳು ಸಿಗಬಹುದೇ ಎನ್ನುವುದೇ ಅವರ ಆತಂಕ.ವಿದೇಶಗಳಲ್ಲೂ ಜೆನ್ ಝೀ ಜ್ವಾಲೆ: ಶಿಕ್ಷಣ, ರಾಜಕೀಯ–ಸಾಮಾಜಿಕ ಪರಿವರ್ತನೆಯ ಹೊಸ ಅಲೆಯುವಜನರ ಅಸಮಾಧಾನಕ್ಕೆ ಕಾರಣವೇನು?ಯುರೋಪ್ನ ಯುವಜನರ ಸಮಸ್ಯೆ ಕೇವಲ ನಿರುದ್ಯೋಗಕ್ಕೆ ಮಾತ್ರ ಸೀಮಿತವಾಗಿಲ್ಲ. ಉದ್ಯೋಗ ದೊರೆತರೂ ಜೀವನ ನಿರ್ವಹಣೆಗೆ ಸಾಕಷ್ಟು ಆದಾಯವಿಲ್ಲದಿರುವುದು, ಬಾಡಿಗೆ ಹೆಚ್ಚುತ್ತಿರುವುದು ಮತ್ತು ಉಳಿತಾಯ ಮಾಡುವುದು ಕಷ್ಟವಾಗುತ್ತಿರುವುದು ಅವರ ಅಸಮಾಧಾನಕ್ಕೆ ಕಾರಣ.ದುಬಾರಿ ಬಾಡಿಗೆ ಇದಕ್ಕೆ ಪ್ರಮುಖ ಕಾರಣ. ಸ್ಪೇನ್ ಮತ್ತು ಪೋರ್ಚುಗಲ್ನ ದೊಡ್ಡ ನಗರಗಳಲ್ಲಿ ಮನೆ ಬಾಡಿಗೆ ದುಬಾರಿಯಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ನಗರಗಳಿಗೆ ಬರುವವರಿಗೆ ಕೈಗೆಟುಕುವ ದರದಲ್ಲಿ ಮನೆ ದೊರೆಯದಿರುವುದು ಅವರ ಆರ್ಥಿಕ ಸ್ವಾವಲಂಬನೆಯ ಮೇಲೂ ಪರಿಣಾಮ ಬೀರುತ್ತಿದೆ. ಶಿಕ್ಷಣ ಪಡೆದು ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳಬಹುದು ಎಂಬ ನಂಬಿಕೆ ಈಗ ಅವರಲ್ಲಿ ಉಳಿದಿಲ್ಲ. ಪದವಿ ಪಡೆದರೂ ಸ್ಥಿರ ಉದ್ಯೋಗ ಸಿಗುವ ಭರವಸೆ, ದುಡಿಮೆಗೆ ತಕ್ಕ ಸಂಬಳ ದೊರೆಯುವ ವಿಶ್ವಾಸವೂ ಅವರಲ್ಲಿ ಇಲ್ಲ. ಉದ್ಯೋಗದ ಭದ್ರತೆಯೂ ಇಲ್ಲದಿದ್ದರೆ, ಭವಿಷ್ಯದ ಬಗ್ಗೆ ಭರವಸೆ ಇಟ್ಟುಕೊಳ್ಳುವುದಾದರೂ ಹೇಗೆ? ಈ ಪ್ರಶ್ನೆಗಳು ಆಕ್ರೋಶದ ರೂಪ ತಾಳಿ ಬೀದಿ ಹೋರಾಟವಾಗಿ ಮಾರ್ಪಟ್ಟಿದೆ.ಯುರೋಪ್ನ ಆರ್ಥಿಕ ಒತ್ತಡಯುರೋಪ್ನ ಹಲವು ದೇಶಗಳಲ್ಲಿ ವಯೋವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಪಿಂಚಣಿ ಮತ್ತು ಆರೋಗ್ಯ ಸೇವೆಗಳಿಗೆ ಸರ್ಕಾರಗಳು ಹೆಚ್ಚು ಹಣ ಖರ್ಚು ಮಾಡುತ್ತಿದೆ. ಇದರ ಜತೆಗೆ ಯುವಜನರಿಗೆ ಶಿಕ್ಷಣ, ವಸತಿ ಸೇರಿದಂತೆ ಅಗತ್ಯ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿಯೂ ಸರ್ಕಾರಗಳ ಮೇಲಿದೆ.ರಷ್ಯಾ–ಉಕ್ರೇನ್ ಯುದ್ಧದ ಬಳಿಕ ರಕ್ಷಣಾ ವೆಚ್ಚ ಹೆಚ್ಚುತ್ತಿರುವುದು ಮತ್ತು ಅಮೆರಿಕದ ಭದ್ರತಾ ಬೆಂಬಲದ ಬಗ್ಗೆ ಅನಿಶ್ಚಿತತೆ ಎದುರಾಗಿರುವುದು ಸರ್ಕಾರಗಳ ಮೇಲಿನ ಆರ್ಥಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.ಇಂತಹ ಪರಿಸ್ಥಿತಿಯಲ್ಲಿ ಸೀಮಿತ ಸಂಪನ್ಮೂಲಗಳನ್ನು ಹೇಗೆ ಹಂಚಬೇಕು ಎಂಬುದು ಸರ್ಕಾರಗಳ ಮುಂದಿರುವ ಸವಾಲು. ವೃದ್ಧರ ಕಲ್ಯಾಣಕ್ಕೆ ಹಣ ಒದಗಿಸುವುದರ ಜತೆಗೆ ಯುವಜನರ ಶಿಕ್ಷಣ, ಉದ್ಯೋಗ ಮತ್ತು ವಸತಿ ಅಗತ್ಯಗಳಿಗೂ ಆದ್ಯತೆ ನೀಡಬೇಕು. ಈ ನಡುವೆ ತಮ್ಮ ಸಮಸ್ಯೆಗಳಿಗೆ ಸರ್ಕಾರಗಳು ಸೂಕ್ತ ಪರಿಹಾರ ನೀಡುತ್ತಿವೆಯೇ ಎಂಬ ಪ್ರಶ್ನೆ ಯುವಜನರನ್ನು ಕಾಡುತ್ತಿದೆ. ಅರ್ಥ ದರ್ಶನ: ಜಿಎಸ್ಟಿ ಸುಧಾರಣೆ; ಸಣ್ಣ ಉದ್ಯಮಗಳ ಬೆಳವಣಿಗೆಗೆ ಹೊಸ ಹಾದಿಭಾರತಕ್ಕೂ ಈ ಆತಂಕಗಳು ಪ್ರಸ್ತುತವೇ?ಯುರೋಪ್ ಹಾಗೂ ಭಾರತದ ಪರಿಸ್ಥಿತಿ ವಿಭಿನ್ನವಾಗಿವೆ. ಯುರೋಪ್ನ ಹಲವು ದೇಶಗಳು ಹೆಚ್ಚುತ್ತಿರುವ ವಯೋವೃದ್ಧರ ಸಂಖ್ಯೆ ಮತ್ತು ಪಿಂಚಣಿ ವೆಚ್ಚದ ಒತ್ತಡ ಎದುರಿಸುತ್ತಿದ್ದರೆ, ಭಾರತಕ್ಕೆ ತನ್ನ ಬೃಹತ್ ಯುವಜನಸಂಖ್ಯೆಗೆ ತಕ್ಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸವಾಲು ಎದುರಿಸುತ್ತಿದೆ.ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಒ) ಮತ್ತು ಇನ್ಸ್ಟಿಟ್ಯೂಟ್ ಫಾರ್ ಹ್ಯೂಮನ್ ಡೆವಲಪ್ಮೆಂಟ್ ಪ್ರಕಟಿಸಿದ ಇಂಡಿಯಾ ಎಂಪ್ಲಾಯ್ಮೆಂಟ್ ರಿಪೋರ್ಟ್ 2024 ಕೂಡ ಯುವಜನರಿಗೆ ಸೂಕ್ತ ಉದ್ಯೋಗ ಒದಗಿಸುವುದು ಮತ್ತು ಉದ್ಯೋಗ ಮಾರುಕಟ್ಟೆಗೆ ಅಗತ್ಯವಾದ ಕೌಶಲಗಳನ್ನು ಬೆಳೆಸುವ ಮಹತ್ವವನ್ನು ಎತ್ತಿಹಿಡಿದಿದೆ.ಭಾರತದಲ್ಲಿ ಪದವಿ ಪಡೆದರೆ ಉತ್ತಮ ಉದ್ಯೋಗ ಸಿಗುತ್ತದೆ ಎಂಬ ನಿರೀಕ್ಷೆ ಹಲವರಲ್ಲಿದೆ. ಆದರೆ ಓದು ಮುಗಿಸಿದ ಬಳಿಕವೂ ಸೂಕ್ತ ಕೆಲಸ ಸಿಗದಿದ್ದರೆ ಅಥವಾ ಪಡೆದ ವಿದ್ಯಾರ್ಹತೆಗೆ ಹೊಂದಿಕೆಯಾಗದ ಉದ್ಯೋಗದಲ್ಲಿ ತೊಡಗಬೇಕಾದರೆ, ಅವರ ನಿರೀಕ್ಷೆ ಹುಸಿಯಾಗುತ್ತದೆ. ಸರ್ಕಾರಿ ಹುದ್ದೆಗಳಿಗಾಗಿ ವರ್ಷಗಟ್ಟಲೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು, ಸೀಮಿತ ಅವಕಾಶಗಳಿಗಾಗಿ ಪೈಪೋಟಿ ನಡೆಸುವವರು ಮತ್ತು ತಾತ್ಕಾಲಿಕ ಉದ್ಯೋಗಗಳಲ್ಲಿ ದುಡಿಯುವವರು ಈ ಸವಾಲನ್ನು ಎದುರಿಸುತ್ತಿದ್ದಾರೆ.ಇಲ್ಲಿ ಮುಖ್ಯವಾಗುವುದು ಉದ್ಯೋಗಗಳ ಸಂಖ್ಯೆ ಮಾತ್ರವಲ್ಲ; ಅವುಗಳಿಂದ ಸಿಗುವ ಆದಾಯ, ಉದ್ಯೋಗದ ಸ್ಥಿರತೆ ಮತ್ತು ಭವಿಷ್ಯ ರೂಪಿಸಿಕೊಳ್ಳುವ ಅವಕಾಶಗಳು. ಯುವಜನರಿಗೆ ಕೆಲಸ ಸಿಗುವುದಷ್ಟೇ ಸಾಕಾಗದು; ಆ ಕೆಲಸದಿಂದ ಗೌರವಯುತ ಜೀವನ ನಡೆಸಲು ಸಾಧ್ಯವಾಗಬೇಕು. ಭಾರತದ ಯುವಜನಸಂಖ್ಯೆ ಆರ್ಥಿಕ ಶಕ್ತಿಯಾಗಬೇಕಾದರೆ, ಅವರ ಶಿಕ್ಷಣ ಮತ್ತು ಕೌಶಲಗಳಿಗೆ ತಕ್ಕ ಉದ್ಯೋಗಗಳನ್ನು ಸೃಷ್ಟಿಸುವುದಕ್ಕೆ ಒತ್ತು ನೀಡಬೇಕು.ಸಿಜೆಪಿ ಪ್ರತಿಭಟನೆ: ಕಾರ್ಯತಂತ್ರದ ಎಡವಟ್ಟು, ಅನುಭವದ ಕೊರತೆ ಕಾಡುತ್ತಿದೆಯೇ?ನಗರ ಜೀವನದ ವೆಚ್ಚವೂ ಯುವಜನರಿಗೆ ಹೊರೆಯೇಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್ನಂತಹ ನಗರಗಳು ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ. ಆದರೆ ಇಲ್ಲಿ ಕೆಲಸ ಸಿಕ್ಕರೆ ಮಾತ್ರ ಬದುಕು ಸುಲಭವಾಗುವುದಿಲ್ಲ. ಸಂಬಳದ ದೊಡ್ಡ ಭಾಗ ಮನೆ ಬಾಡಿಗೆ, ಪ್ರಯಾಣ ಮತ್ತು ದಿನನಿತ್ಯದ ಖರ್ಚಿಗೆ ಹೋದರೆ, ತಿಂಗಳ ಕೊನೆಯಲ್ಲಿ ಉಳಿತಾಯಕ್ಕೆ ಉಳಿಯುವುದು ಅಲ್ಪ ಮೊತ್ತವೇ.ಇದರಿಂದ ಸ್ವಂತ ಮನೆ ಖರೀದಿಸುವುದು, ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುವುದು ಯುವಜನರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಉದ್ಯೋಗ ಸೃಷ್ಟಿಯ ಜತೆಗೆ ಕೈಗೆಟುಕುವ ಬಾಡಿಗೆ ಮನೆಗಳು, ಉತ್ತಮ ಸಾರ್ವಜನಿಕ ಸಾರಿಗೆ ಮತ್ತು ಸಣ್ಣ ನಗರಗಳಲ್ಲಿಯೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಅಗತ್ಯ.ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ–ನಗರ 2.0 ನಗರ ಪ್ರದೇಶದ ಅರ್ಹ ಕುಟುಂಬಗಳಿಗೆ ಮನೆ ಒದಗಿಸುವ ಗುರಿ ಹೊಂದಿದೆ. ಆದರೆ ಮನೆ ಸಿಕ್ಕರೆ ಮಾತ್ರ ಸಾಲದು. ಅದು ಕೈಗೆಟುಕುವ ದರದಲ್ಲಿರಬೇಕು ಮತ್ತು ಕೆಲಸದ ಸ್ಥಳಕ್ಕೆ ಹೋಗಲು ಹೆಚ್ಚು ಸಮಯ, ಹಣ ಖರ್ಚಾಗಬಾರದು. ಇಲ್ಲದಿದ್ದರೆ, ಮನೆ ಇದ್ದರೂ ಜೀವನದ ಖರ್ಚಿನ ಹೊರೆ ಕಡಿಮೆಯಾಗುವುದಿಲ್ಲ.ರಾಜಕೀಯ ಪರಿಣಾಮಯುರೋಪ್ನ ಯುವಜನರ ಪ್ರತಿಭಟನೆಗಳು ರಾಜಕೀಯ ಪರಿಣಾಗಳನ್ನೂ ಉಂಟು ಮಾಡಿವೆ. ಇಟಲಿಯ ಉಪಪ್ರಧಾನಿ ಮ್ಯಾಟಿಯೊ ಸಾಲ್ವಿನಿ ಪ್ರತಿಭಟನೆಗಳ ವೇಳೆ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಫ್ರಾನ್ಸ್ನ ಬಲಪಂಥೀಯ ನ್ಯಾಷನಲ್ ರ್ಯಾಲಿ ಪಕ್ಷವೂ ದೇಶದಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡುವುದಾಗಿ ಹೇಳಿದೆ.ಯುವಜನರು ಉದ್ಯೋಗ, ಮನೆ ಮತ್ತು ಉತ್ತಮ ಶಿಕ್ಷಣಕ್ಕಾಗಿ ನಡೆಸುವ ಪ್ರತಿಭಟನೆಗಳಲ್ಲಿ ಹಿಂಸಾಚಾರ ನಡೆದರೆ, ಅವರ ಬೇಡಿಕೆಗಳಿಗಿಂತ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರವೇ ಹೆಚ್ಚು ಚರ್ಚೆಯಾಗಬಹುದು. ಇದರಿಂದ ಪ್ರತಿಭಟನೆಗೆ ಕಾರಣವಾದ ಸಮಸ್ಯೆಗಳು ಮರೆಯಾಗುವ ಸಾಧ್ಯತೆಯಿದೆ.ಭಾರತದ ಮುಂದಿರುವ ಸವಾಲುಭಾರತದ ದೊಡ್ಡ ಯುವಜನಸಂಖ್ಯೆ ದೇಶದ ಅಭಿವೃದ್ಧಿಗೆ ದೊಡ್ಡ ಶಕ್ತಿ. ಆದರೆ ಯುವಜನರಿಗೆ ತಕ್ಕ ಉದ್ಯೋಗಾವಕಾಶಗಳು ಸೃಷ್ಟಿಯಾದಾಗ ಮಾತ್ರ ಈ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯ. ಓದಿಗೆ ತಕ್ಕ ಕೆಲಸ ಸಿಗುವುದು, ಅಗತ್ಯ ಕೌಶಲಗಳನ್ನು ಬೆಳೆಸಿಕೊಳ್ಳುವುದು ಮತ್ತು ಸ್ಥಿರ ಆದಾಯ ಗಳಿಸುವ ಅವಕಾಶಗಳು ಯುವಜನರಿಗೆ ದೊರೆಯಬೇಕು.ಉದ್ಯೋಗಾವಕಾಶಗಳು ಬೆಂಗಳೂರು, ಮುಂಬೈಯಂತಹ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗದೆ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿಯೂ ಹೆಚ್ಚಬೇಕು. ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು; ಪರೀಕ್ಷೆಗಳು ಮತ್ತು ಫಲಿತಾಂಶಗಳು ಸಕಾಲದಲ್ಲಿ ಪ್ರಕಟವಾಗಬೇಕು. ಇವೆಲ್ಲವೂ ಯುವಜನರು ತಮ್ಮ ಭವಿಷ್ಯದ ಬಗ್ಗೆ ವಿಶ್ವಾಸದಿಂದ ಯೋಜನೆ ರೂಪಿಸಲು ನೆರವಾಗುತ್ತವೆ.ಎಕಾನಮಿ 360: ಭರ್ಜರಿ ವ್ಯಾಪಾರದ ಹೊಳಪಿನಲ್ಲಿ ಮರೆಯಾದ ಶ್ರೀಸಾಮಾನ್ಯ