ದಾವೂದ್ ಪಾಕ್ನಲ್ಲಿದ್ದಾನೆ: ಡಿ-ಕಂಪನಿ ಭಾರತದ್ದೆಂದ ವರದಿಗಾರನಿಗೆ ಭಾರತ ತಿರುಗೇಟು
ನ್ಯೂಯಾರ್ಕ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ನೇತೃತ್ವದ ಡಿ-ಕಂಪನಿಯನ್ನು ಭಾರತ ಮೂಲದ ಕ್ರಿಮಿನಲ್ ಗುಂಪು ಎಂದು ಬಣ್ಣಿಸಿದ್ದ ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಮತ್ತು ಮಾನವ ಹಕ್ಕುಗಳ ವಿಶೇಷ ವರದಿಗಾರನ ಹೇಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ದಾವೂದ್ ಇಬ್ರಾಹಿಂ ಕುರಿತಂತೆ ವರದಿಯಲ್ಲಿರುವ ಗಂಭೀರ ತಪ್ಪುಗಳನ್ನು ಎತ್ತಿಹಿಡಿದ ಭಾರತ, ಇಂತಹ ಅಸಮರ್ಥತೆಯು ವಿ

ನ್ಯೂಯಾರ್ಕ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ನೇತೃತ್ವದ ಡಿ-ಕಂಪನಿಯನ್ನು ಭಾರತ ಮೂಲದ ಕ್ರಿಮಿನಲ್ ಗುಂಪು ಎಂದು ಬಣ್ಣಿಸಿದ್ದ ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಮತ್ತು ಮಾನವ ಹಕ್ಕುಗಳ ವಿಶೇಷ ವರದಿಗಾರನ ಹೇಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ದಾವೂದ್ ಇಬ್ರಾಹಿಂ ಕುರಿತಂತೆ ವರದಿಯಲ್ಲಿರುವ ಗಂಭೀರ ತಪ್ಪುಗಳನ್ನು ಎತ್ತಿಹಿಡಿದ ಭಾರತ, ಇಂತಹ ಅಸಮರ್ಥತೆಯು ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಯ ವಿಶ್ವಾಸಾರ್ಹತೆಗೆ ತೀವ್ರ ಹಾನಿ ಉಂಟುಮಾಡುತ್ತದೆ ಎಂದೂ ಆಕ್ಷೇಪಿಸಿದೆ.ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ದಾವೂದ್ ಇಬ್ರಾಹಿಂ ನೇತೃತ್ವದ ‘ಡಿ-ಕಂಪನಿ’ ಎಂಬ ಕ್ರಿಮಿನಲ್ ಗುಂಪು ಭಾರತ ಮೂಲದ್ದಾಗಿದೆ ಎಂಬ ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಮತ್ತು ಮಾನವ ಹಕ್ಕುಗಳ ವಿಶೇಷ ವರದಿಗಾರ ಬೆನ್ ಸೌಲ್ ಅವರ ವರದಿ ಬಗ್ಗೆ ಭಾರತದ ಶಾಶ್ವತ ನಿಯೋಗದ ಮೊದಲ ಕಾರ್ಯದರ್ಶಿ ರಘು ಪುರಿ ಅಸಮಾಧಾನ ಹೊರಹಾಕಿದ್ದಾರೆ.ವಾಸ್ತವಕ್ಕೆ ದೂರವಾದ ವಿವರಣೆ...‘ಈ ವರದಿಯಲ್ಲಿ ಹೇಳುವಂತೆ 2003ರಲ್ಲಿ ಡಿ-ಕಂಪನಿ ಎಂಬ ಕ್ರಿಮಿನಲ್ ಗುಂಪಿನ ನಾಯಕ ಅಲ್ಖೈದಾ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಭದ್ರತಾ ಮಂಡಳಿಯು ಪಟ್ಟಿ ಮಾಡಿದೆ. ಆದರೆ, ಇದನ್ನು ಪ್ರತ್ಯೇಕವಾಗಿ ಓದಿದಾಗ ಈ ಸಾಲು ವಾಸ್ತವಕ್ಕಿಂತ ವಿಭಿನ್ನವಾದ ಚಿತ್ರಣ ನೀಡುತ್ತದೆ. ದಾವೂದ್ ಇಬ್ರಾಹಿಂ 1993ರಿಂದ ಭಾರತದಲ್ಲಿ ಭಯೋತ್ಪಾದಕ ದಾಳಿಗಳಿಂದಾಗಿ ‘ಮೋಸ್ಟ್ ವಾಟೆಂಡ್’ ಲಿಸ್ಟ್ನಲ್ಲಿದ್ದಾನೆ. ಆದರೆ, ಈ ವಾಸ್ತವವನ್ನು ಉಲ್ಲೇಖಿಸದಿರುವುದು ವಿಷಾದನೀಯವಾಗಿದೆ ಎಂದು ರಘು ಪುರಿ ತಿಳಿಸಿದ್ದಾರೆ.ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಠಿಕಾಣಿ ಹೂಡಿದ್ದಾನೆ ಎಂದು ಭಾರತ ಹೇಳಿದೆ. ಅಲ್ಲದೆ, ಈ ವ್ಯಕ್ತಿ 2003ರ ಪಟ್ಟಿಗೆ ಸೇರ್ಪಡೆಗೊಳ್ಳುವ ಮುನ್ನವೇ ಭಾರತದಿಂದ ಓಡಿಹೋಗಿದ್ದ. ವಿಶ್ವಸಂಸ್ಥೆಯ ದಾಖಲೆಗಳ ಪ್ರಕಾರ, ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಎಲ್ಲಿ ಸಿಕ್ಕಿಬಿದ್ದು ಹತನಾಗಿದ್ದನೋ, ಅದೇ ದೇಶದಲ್ಲೇ (ಪಾಕಿಸ್ತಾನ) ದಾವುದ್ ಕೂಡ ವಾಸಿಸುತ್ತಿದ್ದಾನೆ ಎಂದು ಪುರಿ ಉಲ್ಲೇಖಿಸಿದ್ದಾರೆ.ಪಾಕ್ನಲ್ಲೇ ದಾವೂದ್ ವಾಸ್ತವ್ಯ#WATCH | New York | While participating in the interactive Dialogue with Special Rapporteur, First Secretary Raghoo Puri says, "...My delegation has been pointing out in other forums as well our serious concern about the unacceptable situation of the SR (Special Rapporteur)… pic.twitter.com/hgaCaaqaYw— ANI (@ANI) October 22, 2026 ವಿಶ್ವಸಂಸ್ಥೆಯ ಪಕ್ಷಪಾತದ ವಿರುದ್ದ ಭಾರತ ಆಕ್ರೋಶ: ಬೆನ್ ಸಾಲ್ ವರದಿಯ ವಿವಿಧ ಭಾಗಗಳಲ್ಲಿನ ಸ್ಪಷ್ಟ ಪಕ್ಷಪಾತವನ್ನು ನಾವು ಗಮನಿಸಿದ್ದೇವೆ. ಹಾಗೆಯೇ ‘ಯುಎನ್ ವಾಚ್’ ನಡೆಸಿದ ತನಿಖಾ ವರದಿಯ ಪ್ರಕಾರ, ಸಾಲ್ ಅವರಿಗೆ ಚೀನಾ ಸರ್ಕಾರದಿಂದ 1,50,000 ಅಮೆರಿಕನ್ ಡಾಲರ್ ಆರ್ಥಿಕ ಧನಸಹಾಯ ಸಿಕ್ಕಿದೆ ಎಂಬ ಆರೋಪ ಕೇಳಿಬಂದಿವೆ. ಹಾಗಾಗಿ ವಿಶ್ವಸಂಸ್ಥೆ ಅಧಿಕಾರಿಗಳಲ್ಲಿ ಉನ್ನತ ಮಟ್ಟದ ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ ಇರಬೇಕೆಂದು ಭಾರತ ಒತ್ತಾಯಿಸಿದೆ.ಭಯೋತ್ಪಾದನೆ ಸಹಿಸಲ್ಲ: ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳು ತಮ್ಮ ದುಷ್ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಮಾನವ ಹಕ್ಕುಗಳ ಚೌಕಟ್ಟನ್ನು ಬಳಸುವುದು ರೂಢಿ ಮಾಡಿಕೊಂಡಿವೆ ಎಂದು ಟೀಕಿಸಿದ ಪುರಿ, ಭಯೋತ್ಪಾದನೆಯನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ ಎಂದಿದ್ದಾರೆ.ಪಾಕ್ಗೆ ತಿರುಗೇಟು: ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕುರಿತು ಪಾಕ್ ಪ್ರತಿನಿಧಿ ಮಾಡಿದ ಆರೋಪಗಳನ್ನು ಸಂಕುಚಿತ ರಾಜಕೀಯ ಲಾಭಕ್ಕಾಗಿ ನಡೆಸಿದ ಅಪಪ್ರಚಾರ ಎಂದು ಭಾರತ ತಳ್ಳಿ ಹಾಕಿದೆ. ಜೊತೆಗೆ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗಗಳಾಗಿವೆ ಎಂದೂ ಪುರಿ ಪುನರುಚ್ಚರಿಸಿದ್ದಾರೆ.