ರಾಹುಲ್ ದೇಶದ್ರೋಹಿ – ಫ್ರಾನ್ಸ್ ಹಿಂಸಾಚಾರಕ್ಕೆ ಭಾರತದ ಪ್ರತಿಭಟನೆಗಳ ನಂಟು: ಬಿಜೆಪಿ ಕಿಡಿ
– ಕಾಂಗ್ರೆಸ್ ವಿರುದ್ಧ ‘ರೆಡ್-ಗ್ರೀನ್’ ಪಿತೂರಿ – ವಿವಿಧ ದೇಶಗಳ 101 ಸಂಸ್ಥೆಗಳು ಭಾಗಿ – ಎಲ್ಲಾ ಪ್ರತಿಭಟನೆಗಳಿಗೆ ಅಂತರರಾಷ್ಟ್ರೀಯ ಸಂಪರ್ಕ – ಸಂಚಲನ ಮೂಡಿಸಿದ ಫಾಕ್ಸ್ ನ್ಯೂಸ್ ವರದಿ ನವದೆಹಲಿ: ಫ್ರಾನ್ಸ್ನಲ್ಲಿ(France) ನಡೆಯುತ್ತಿರುವ ಹಿಂಸಾತ್ಮಕ ಗಲಭೆಗಳು ಮತ್ತು ಭಾರತದಲ್ಲಿ(India) ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧ ಯುವಕರು ನಡೆಸುತ್ತಿರುವ ಪ್ರ

– ಕಾಂಗ್ರೆಸ್ ವಿರುದ್ಧ ‘ರೆಡ್-ಗ್ರೀನ್’ ಪಿತೂರಿ – ವಿವಿಧ ದೇಶಗಳ 101 ಸಂಸ್ಥೆಗಳು ಭಾಗಿ – ಎಲ್ಲಾ ಪ್ರತಿಭಟನೆಗಳಿಗೆ ಅಂತರರಾಷ್ಟ್ರೀಯ ಸಂಪರ್ಕ – ಸಂಚಲನ ಮೂಡಿಸಿದ ಫಾಕ್ಸ್ ನ್ಯೂಸ್ ವರದಿ ನವದೆಹಲಿ: ಫ್ರಾನ್ಸ್ನಲ್ಲಿ(France) ನಡೆಯುತ್ತಿರುವ ಹಿಂಸಾತ್ಮಕ ಗಲಭೆಗಳು ಮತ್ತು ಭಾರತದಲ್ಲಿ(India) ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧ ಯುವಕರು ನಡೆಸುತ್ತಿರುವ ಪ್ರತಿಭಟನೆಗಳ ನಡುವೆ ಅಂತರರಾಷ್ಟ್ರೀಯ ಸಂಪರ್ಕವಿದೆ ಎಂದು ಫಾಕ್ಸ್ ನ್ಯೂಸ್( Fox News) ವರದಿ ಈಗ ದೇಶದಲ್ಲಿ ಸಂಚಲನ ಮೂಡಿಸಿದೆ. ಫಾಕ್ಸ್ ನ್ಯೂಸ್ ವರದಿಯನ್ನು ಉಲ್ಲೇಖಿಸಿ ಬಿಜೆಪಿ(BJP) ಗುರುವಾರ ಕಾಂಗ್ರೆಸ್(Congress) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇದು ಕಾಂಗ್ರೆಸ್ನ ಅರಾಜಕತೆ ಮತ್ತು ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸುವ (Regime Change) ಪಿತೂರಿಯನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿದೆ. ಜತೆಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅವರನ್ನು ದೇಶದ್ರೋಹಿ ಎಂದು ಕರೆದಿದೆ. Sonia Gandhi’s Congress party wants regime change in India, and they have been making their intentions clear from time to time. A Fox News investigation by Asra Nomani has mapped 101 organisations across 9 countries, an Islamist and Communist protest ecosystem that turned student unrest in France into riots and has now turned its sights on India. The report names Indian Alliance Paris for linking French and Indian protest messaging, and Progressive International for grouping protests across France, Spain, Albania and India. 𝐓𝐡𝐚𝐭 𝐬𝐚𝐦𝐞 𝐏𝐫𝐨𝐠𝐫𝐞𝐬𝐬𝐢𝐯𝐞 𝐈𝐧𝐭𝐞𝐫𝐧𝐚𝐭𝐢𝐨𝐧𝐚𝐥 𝐬𝐚𝐭 𝐝𝐨𝐰𝐧 𝐰𝐢𝐭𝐡 𝐒𝐨𝐧𝐢𝐚 𝐆𝐚𝐧𝐝𝐡𝐢 𝐚𝐧𝐝 𝐑𝐚𝐡𝐮𝐥 𝐆𝐚𝐧𝐝𝐡𝐢 𝐚𝐭 𝟏𝟎 𝐉𝐚𝐧𝐩𝐚𝐭𝐡 𝐢𝐧 𝐀𝐩𝐫𝐢𝐥 𝟐𝟎𝟐𝟓. 𝐂𝐥𝐞𝐚𝐫𝐥𝐲, 𝐭𝐡𝐞𝐫𝐞 𝐢𝐬 𝐦𝐨𝐫𝐞 𝐭𝐡𝐚𝐧 𝐦𝐞𝐞𝐭𝐬 𝐭𝐡𝐞 𝐞𝐲𝐞, 𝐚𝐧𝐝 𝐭𝐡𝐢𝐬 𝐰𝐚𝐬 𝐧𝐨 𝐜𝐨𝐮𝐫𝐭𝐞𝐬𝐲 𝐜𝐚𝐥𝐥. 𝐖𝐡𝐚𝐭 𝐰𝐚𝐬 𝐝𝐢𝐬𝐜𝐮𝐬𝐬𝐞𝐝? 𝐖𝐡𝐨 𝐢𝐬 𝐩𝐚𝐲𝐢𝐧𝐠 𝐟𝐨𝐫 𝐭𝐡𝐞𝐬𝐞 𝐩𝐫𝐨𝐭𝐞𝐬𝐭𝐬? 𝐖𝐡𝐲 𝐢𝐬 𝐂𝐨𝐧𝐠𝐫𝐞𝐬𝐬 𝐢𝐧 𝐭𝐡𝐞 𝐫𝐨𝐨𝐦 𝐞𝐯𝐞𝐫𝐲 𝐬𝐢𝐧𝐠𝐥𝐞 𝐭𝐢𝐦𝐞 𝐚 𝐜𝐨𝐧𝐬𝐩𝐢𝐫𝐚𝐜𝐲 𝐚𝐠𝐚𝐢𝐧𝐬𝐭 𝐈𝐧𝐝𝐢𝐚 𝐢𝐬 𝐰𝐫𝐢𝐭𝐭𝐞𝐧? 𝐒𝐨𝐧𝐢𝐚 𝐆𝐚𝐧𝐝𝐡𝐢 𝐚𝐧𝐝 𝐡𝐞𝐫 𝐤𝐢𝐝𝐬 𝐨𝐰𝐞 𝐚𝐧 𝐚𝐧𝐬𝐰𝐞𝐫 𝐭𝐨 𝐭𝐡𝐞 𝐧𝐚𝐭𝐢𝐨𝐧. India will not bow to anarchy. Under PM Shri @narendramodi and HM Shri @AmitShah, anyone planning bloodshed in this country will meet the full force of the law. #LongLiveTheIndianRepublic — BJP (@BJP4India) October 22, 2026 ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, “ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶದ ಮುಂದೆ ಅರಾಜಕತೆ ಮತ್ತು ದೇಶದ್ರೋಹದ ಮಾದರಿಯನ್ನು ಪ್ರದರ್ಶಿಸುತ್ತಿದ್ದಾರೆ. ಈ ದ್ರೋಹದ ಕೊಂಡಿಗಳು ವಿದೇಶಿ ಏಜೆನ್ಸಿಗಳೊಂದಿಗೆ ಹೇಗೆ ಸಂಪರ್ಕ ಹೊಂದಿವೆ ಎಂಬುದನ್ನು ವರದಿ ಬಿಚ್ಚಿಟ್ಟಿದೆ. ಹೀಗಿರುವಾಗ ಈ ದೇಶದ್ರೋಹಿಗಳ ನಾಯಕ ಯಾರು ಎಂದು ಕೇಳುವುದು ತಪ್ಪೇನಿಲ್ಲ ಎಂದು ಆಕ್ರೋಶ ಹೊರಹಾಕಿದರು. ವಿರೋಧ ಪಕ್ಷದ ನಾಯಕ ಇಷ್ಟು ಬೇಜವಾಬ್ದಾರಿ ಮತ್ತು ಅಪಕ್ವವಾಗಿರುವುದು ಭಾರತದ ದುರದೃಷ್ಟ. ಸಾಕ್ಷ್ಯಾಧಾರಗಳನ್ನು ಗಮನಿಸಿದರೆ, ಅವರನ್ನು ದೇಶದ್ರೋಹಿ ಅಥವಾ ‘ಮೀರ್ ಜಾಫರ್’ ಎಂದು ಕರೆಯುವುದು ತಪ್ಪಾಗುವುದಿಲ್ಲ. ಚುನಾಯಿತ ಸರ್ಕಾರಗಳನ್ನು ಉರುಳಿಸಲು ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಇಂತಹ ಸಂಘಟನೆಗಳು ರೆಡ್-ಗ್ರೀನ್ ಪ್ರತಿಭಟನಾ ವ್ಯವಸ್ಥೆಯನ್ನು (Red-Green ecosystem) ಸೃಷ್ಟಿಸಿವೆ ಎಂದು ವರದಿ ಹೇಳುತ್ತದೆ. ಇದರಲ್ಲಿ ಕೆಂಪು ಎಂದರೆ ಕಮ್ಯುನಿಸ್ಟ್ ಗುಂಪುಗಳು, ಹಸಿರು ಎಂದರೆ ಇಸ್ಲಾಮಿಕ್ ಗುಂಪುಗಳು. 101 ಸಂಘಟನೆಗಳು ಜಾಗತಿಕವಾಗಿ ಅರಾಜಕತೆ ಮತ್ತು ಅಶಾಂತಿಯನ್ನು ಹರಡುತ್ತಿವೆ ಎಂದು ಭಾಟಿಯಾ ಆರೋಪಿಸಿದರು. VIDEO | Delhi: Addressing a press conference, BJP spokesperson Gaurav Bhatia, says, “Leader of Opposition Rahul Gandhi is presenting a model of betrayal before the country. Today, a report has appeared in a highly reputed newspaper, detailing how these alleged links of betrayal are connected to foreign agencies. Therefore, it would not be wrong to ask, ‘Who is the leader of these traitors?’ I am saying this with deep pain and anguish. It is India’s misfortune that the country’s Leader of Opposition is irresponsible and immature. And if I present the evidence before you, it would not be wrong to call him a traitor or Mir Jafar. An investigation by Fox News digital shows how, in France and several other countries, organisations have created an ecosystem across nine countries that attempts to overthrow duly elected governments… constitutional governments chosen by the people. It is a ‘red-green ecosystem of protest.’ According to the Fox News report, red represents communist groups, while green represents Islamist groups. If we look at this report, it states, ‘Global chaos grows to 101 groups.’ Global chaos, anarchy and disorder… these 101 organisations are operating across nine countries.” #BJP #RahulGandhi #Congress (Full video available on PTI Videos – https://t.co/bIyFWTfmBd) — Press Trust of India (@PTI_News) October 22, 2026 ಮತ್ತೊಬ್ಬ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿ, “ಜಾಗತಿಕ ತನಿಖೆಯು ಕಾಂಗ್ರೆಸ್ನ ಅರಾಜಕತೆ ಹಾಗೂ ಸರ್ಕಾರ ಉರುಳಿಸುವ ಸಂಚನ್ನು ಬಯಲು ಮಾಡಿದೆ. ‘ಪ್ರೋಗ್ರೆಸ್ಸಿವ್ ಇಂಟರ್ನ್ಯಾಷನಲ್’ (PI) ಎಂಬ ಕಮ್ಯುನಿಸ್ಟ್ ಸಂಘಟನೆಯು ಫ್ರಾನ್ಸ್, ಅಲ್ಬೇನಿಯಾ ಮತ್ತು ಭಾರತದ ಪ್ರತಿಭಟನೆಗಳ ಸಂದೇಶ ರವಾನೆಯಲ್ಲಿ ಸಮನ್ವಯ ಸಾಧಿಸುತ್ತಿದೆ. ಹೊಸ ದಂಗೆಯ ಮೂಲಕ ಅಧಿಕಾರವನ್ನು ಹಿಡಿಯುವುದು ಮತ್ತು ಆಡಳಿತ ಬದಲಿಸುವುದೇ ಇದರ ಉದ್ದೇಶ” ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2030ರ ಚುನಾವಣೆಯನ್ನೂ ಗೆಲ್ಲಲ್ಲ – ನುಸುಳುಕೋರರನ್ನು ರಕ್ಷಿಸಲು ವೋಟ್ ಚೋರಿ ನೆಪ: ಅಮಿತ್ ಶಾ ವಾಗ್ದಾಳಿ ‘CHAOS INC’: Fox News Digital investigation identifies 101 organizations across 9 countries coordinating a growing protest network that has already put 500,000 demonstrators in the streets of France. Activists are calling supporters back to the streets Saturday for “Acte II,” with 212 mobilizations planned and a coordinated European youth strike set for Nov. 20. The network spans communist, socialist, Antifa and Islamist groups in what investigators describe as a “red-green” alliance, with U.S.-based amplifiers including CodePink and organizations funded by American tech tycoon Neville Roy Singham. Full story here https://t.co/aQNg3EZ2uW — Fox News Politics (@foxnewspolitics) October 20, 2026 ಫಾಕ್ಸ್ನ್ಯೂಸ್ ತನಿಖಾ ವರದಿಯಲ್ಲಿ ಏನಿದೆ? ಜಗತ್ತಿನಾದ್ಯಂತ ಪ್ರತಿಭಟನೆಗಳನ್ನು ಸಂಘಟಿಸಲು ಮತ್ತು ತೀವ್ರಗೊಳಿಸಲು ವಿವಿಧ ದೇಶಗಳ ಒಟ್ಟು 101 ಸಂಸ್ಥೆಗಳು ಸಕ್ರಿಯವಾಗಿವೆ. ಫ್ರಾನ್ಸ್ನಲ್ಲಿನ ಶಾಲಾ ಶಿಕ್ಷಣ ಮತ್ತು ಜೀವನ ವೆಚ್ಚದ ಬಿಕ್ಕಟ್ಟಿನ ವಿರುದ್ಧದ ಪ್ರತಿಭಟನೆಗಳನ್ನು ಹಾಗೂ ಭಾರತದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ಯುವ ಪ್ರತಿಭಟನೆಗಳನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ ಪ್ರಚೋದಿಸಲಾಗುತ್ತಿದೆ. ಶಾಂಘೈನಲ್ಲಿ ನೆಲೆಸಿರುವ ಅಮೆರಿಕ ಮೂಲದ ಕಮ್ಯುನಿಸ್ಟ್ ತಂತ್ರಜ್ಞಾನ ಉದ್ಯಮಿ ನೆವಿಲ್ ರಾಯ್ ಸಿಂಘಮ್ ಮತ್ತು ಅವರ ಪತ್ನಿ ಜೋಡಿ ಇವಾನ್ಸ್ ಅವರು ಫಂಡಿಂಗ್ ಮಾಡುವ ‘ಬ್ರೇಕ್ಥ್ರೂ ನ್ಯೂಸ್’ ಹಾಗೂ ‘ಕೋಡ್ಪಿಂಕ್’ ನಂತಹ ಮಾಧ್ಯಮ ಮತ್ತು ಕಾರ್ಯಕರ್ತರ ನೆಟ್ವರ್ಕ್ಗಳು ಈ ಎರಡೂ ದೇಶಗಳ ಪ್ರತಿಭಟನೆಗಳಿಗೆ ಭಾರಿ ಪ್ರಚಾರ ನೀಡುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮ್ಯುನಿಸ್ಟ್ ಮತ್ತು ಸೋಷಿಯಲಿಸ್ಟ್ ಒಕ್ಕೂಟವಾದ ಪ್ರೋಗ್ರೆಸಿವ್ ಇಂಟರ್ನ್ಯಾಷನಲ್ ತನ್ನ ಬ್ರೀಫಿಂಗ್ನಲ್ಲಿ ಫ್ರಾನ್ಸ್, ಸ್ಪೇನ್, ಭಾರತ ಮತ್ತು ಅಲ್ಬೇನಿಯಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಒಟ್ಟಾಗಿ ಉಲ್ಲೇಖಿಸಿ ಇವುಗಳಿಗೆ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದೆ. ಫ್ರಾನ್ಸ್ ಮೂಲದ ಭಾರತೀಯ ವಲಸಿಗರ ಸಂಘಟನೆಯಾದ IAP ಕೂಡ ಸಾಮಾಜಿಕ ಮಾಧ್ಯಮಗಳ ಮೂಲಕ ಫ್ರೆಂಚ್ ಮತ್ತು ಭಾರತೀಯ ಯುವ ಪ್ರತಿಭಟನೆಗಳನ್ನು ಜೋಡಿಸುವ ಕೆಲಸ ಮಾಡುತ್ತಿದೆ ಎಂದು ವರದಿ ಆರೋಪಿಸಿದೆ.